w
Headlines
Home » ರಿಪ್ಪನ್‌ಪೇಟೆ : ಚಿರತೆ ಇದೆ ಹುಷಾರ್…. ಎಂದು ಬುದ್ದಿವಾದ ಹೇಳಿದ್ದಕ್ಕೆ ವ್ಯಕ್ತಿಯ ಮೇಲೆ ಬಿಯರ್ ಬಾಟಲ್ ನಿಂದ ಮಾರಣಾಂತಿಕ ಹಲ್ಲೆ|assault

ರಿಪ್ಪನ್‌ಪೇಟೆ : ಚಿರತೆ ಇದೆ ಹುಷಾರ್…. ಎಂದು ಬುದ್ದಿವಾದ ಹೇಳಿದ್ದಕ್ಕೆ ವ್ಯಕ್ತಿಯ ಮೇಲೆ ಬಿಯರ್ ಬಾಟಲ್ ನಿಂದ ಮಾರಣಾಂತಿಕ ಹಲ್ಲೆ|assault

ರಿಪ್ಪನ್‌ಪೇಟೆ : ಇಲ್ಲಿನ ಕೆಂಚನಾಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊನ್ನಕೊಪ್ಪ ಗ್ರಾಮದಲ್ಲಿ ಚಿರತೆ ಇದೆ ಹುಷಾರು ಎಂದು ಹೇಳಿದ್ದಕ್ಕೆ ಬಿಯರ್ ಬಾಟಲ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.




ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊನ್ನಕೊಪ್ಪ ಗ್ರಾಮದ ದಿನೇಶ್ (42) ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಇವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.




ಸೋಮವಾರ ರಾತ್ರಿ 10-00 ಗಂಟೆ ಸುಮಾರಿಗೆ ತನ್ನ ಮಗನನ್ನು ಶಾಲಾ ಪ್ರವಾಸಕ್ಕೆ ಕಳುಹಿಸಲು ಅರಸಾಳು ಶಾಲೆಗೆ ಬಿಟ್ಟು ವಾಪಾಸ್ ಹಿಂದಿರುಗುತಿದ್ದ ಸಂಧರ್ಭದಲ್ಲಿ ಹೊನ್ನಕೊಪ್ಪ ಬಸ್ ನಿಲ್ದಾಣದ ಬಳಿ ಪರಿಚಿತರೇ ಆದ ತೇಜಸ್ ,ದಾನೇಶ ಮತ್ತು ಗಿರೀಶ್ ಇರುವುದನ್ನು ಗಮನಿಸಿ ಇಲ್ಲಿ ಚಿರತೆಯ ಹಾವಳಿ ಹೆಚ್ಚಿದೆ ಬೇಗ ಹೋಗಿ ಎಂದು ಹೇಳಿದ್ದಕ್ಕೆ ಕುಪಿತರಾದ ಅವರುಗಳು ದಿನೇಶ್ ರವರನ್ನು ಅವಾಚ್ಯವಾಗಿ‌ ನಿಂದಿಸಿ ಬಿಯರ್ ಬಾಟಲ್ ಹಾಗೂ ಕಬ್ಬಿಣದ ರಾಡ್ ನಲ್ಲಿ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ.

ಸದರಿ ಪ್ರಕರಣದಲ್ಲಿ ಆರೋಪಿತರಾದ ದಾನೇಶ್ ,ತೇಜಸ್ ಮತ್ತು ಗಿರೀಶ್ ಮೇಲೆ ಪ್ರಕರಣ ದಾಖಲಾಗಿದೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.