ರಿಪ್ಪನ್‌ಪೇಟೆ : ಕುಂಸಿ – ಆನಂದಪುರ ರೈಲ್ವೆ ಮಾರ್ಗದ ಲೆವೆಲ್ ಕ್ರಾಸಿಂಗ್ ನಂ 92 ರಲ್ಲಿ ತಾಂತ್ರಿಕ ಪರಿಶೀಲನೆ ಇರುವುದರಿಂದ 12 ಗಂಟೆಗಳ ಕಾಲ ರಿಪ್ಪನ್‌ಪೇಟೆ ಯಿಂದ ಆಯನೂರು ಮಾರ್ಗ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ರೈಲ್ವೆ ಗೇಟ್ ಸಂಖ್ಯೆ 92 ರಲ್ಲಿ (ಆರಸಾಳು ಗ್ರಾಮದಲ್ಲಿರುವ ರೈಲ್ವೆ ಗೇಟ್) ತಾಂತ್ರಿಕವಾಗಿ ಪರಿಶೀಲನೆ ಮಾಡಲು ದಿನಾಂಕ 09-12-22ರ ಸಂಜೆ 7:೦೦ ಗಂಟೆಯಿಂದ 10-12-22ರ ಬೆಳಿಗ್ಗೆ 7:೦೦ ಗಂಟೆಯವರೆಗೆ ಗೇಟನ್ನು ಮುಚ್ಚುವುದರಿಂದ ತಾತ್ಕಾಲಿಕ ಪರ್ಯಾಯ ಮಾರ್ಗಗಳು ಇಂತಿವೆ…
ಭಾರಿ ವಾಹನಗಳು
ಆಯನೂರನಿಂದ ರಿಪ್ಪನಪೇಟೆ ಮುಖಾಂತರ ಹೊಸನಗರದ ಕಡೆಗೆ ಹೋಗುವ ಭಾರೀ ಸರಕು ಸಾಗಾಣಿಕೆಯ ವಾಹನಗಳು ಆಯನೂರು-ಆನಂದಪುರ- ಮಾವಿನ ಕೊಪ್ಪ ಮುಖಾಂತರ ಪ್ರತಿಕ್ರಮವಾಗಿ ಸಂಚಾರಿಸಬಹುದಾಗಿರುತ್ತದೆ.
ಲಘು ವಾಹನ ಗಳು
ಆಯನೂರನಿಂದ ರಿಪ್ಪನಪೇಟೆ ಕಡೆಗೆ ಹೋಗುವ ಲಘು ವಾಹನಗಳು ಆಯನೂರು- 5ನೇ ಮೈಲುಗಲ್ಲು- ಹಾರೋಹಿತ್ಲು- ಮೂಗುಡ್ತಿ ಮುಖಾಂತರ ಪ್ರತಿಕ್ರಮವಾಗಿ ಸಂಚಾರಿಸಬಹುದಾಗಿರುತ್ತದೆ.