ನಾಯಿಯನ್ನು ಭೇಟೆಯಾಡಲು ಬಂದ ಚಿರತೆ ಬೋನಿಗೆ ಬಿತ್ತು – ಅಂತೂ ಜನರಲ್ಲಿ ಭಯ ಹುಟ್ಟಿಸಿದ್ದ ಚಿರತೆಯನು ಸೆರೆ ಹಿಡಿದ ಅರಣ್ಯ ಇಲಾಖೆ|Leopard

ಹಲವು ದಿನಗಳಿಂದ ಗ್ರಾಮಸ್ಥರಿಗೆ ಭಯ ಹುಟ್ಟಿಸಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ  ಭದ್ರಾವತಿ ತಾಲೂಕು  ಹರಮಘಟ್ಟ ಗ್ರಾಮದಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿದ್ದು ಚಿರತೆಯನ್ನ ನೋಡಲು ಜನ ಸಾಗರವೇ ಹರಿದು ಬಂದಿದೆ.




ಸುಮಾರು 15 ದಿನಗಳ ಹಿಂದೆ 3 ಹಸುಗಳನ್ನ‌ ಭೇಟೆಯಾಡಿದ್ದ ಚಿರತೆ ಹಾವಳಿ ಗ್ರಾಮಸ್ಥರಲ್ಲಿ ಭಯವನ್ನ ಹುಟ್ಟಿಸಿತ್ತು. ಇದರಬೆನ್ನಲ್ಲೇ ಗ್ರಾಮಸ್ಥರು ಚಿರತೆಯನ್ನ ಹಿಡಿಯಲು ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದರು.

ಹರಮಘಟ್ಟದ 200 ಮೀಟರ್ ವ್ಯಾಪ್ತಿಯಲ್ಲಿ ಬೋನು ಇಟ್ಟು ಅದರಲ್ಲಿ ನಾಯಿಯನ್ನ ಇಡಲಾಗಿತ್ತು. ಇಂದು ಬೆಳಿಗ್ಗೆ ಚಿರತೆ ಬೋನಿಗೆ ಬಿದ್ದಿದೆ. ಗಂಡು ಚಿರತೆ ಎಂದು ಗುರುತಿಸಲಾಗಿದೆ.




ಚಿರತೆ ನೋಡಲು ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಜನ ಗುಂಪು ಗುಂಪಾಗಿ  ಆಗಮಿಸುತ್ತಿದ್ದಾರೆ. ಅರಣ್ಯ ಇಲಾಖೆಯವರು ಸ್ಥಳಕ್ಕೆ ಧಾವಿಸಿದ್ದಾರೆ. ಚಿರತೆಯನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿ ನಂತರ ಕಾಡಿಗೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.



Leave a Reply

Your email address will not be published. Required fields are marked *