ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಗ್ರಾಮ ಪಂಚಾಯತ್ ಪಿಡಿಓ ರವರನ್ನು ಅಮಾನತುಗೊಳಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಚೋರಡಿ ಗ್ರಾಮದಲ್ಲಿ ನಡೆದಿದೆ.
ಚೋರಡಿ ಗ್ರಾಮ ಪಂಚಾಯತಿ ಪಿಡಿಒ ಗೋಪಾಲಾಚಾರಿ ಎಂಬುವರನ್ನು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಪ್ರಕಾಶ್ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.
ದೂರದೃಷ್ಠಿ ಯೋಜನೆ ಮತ್ತು ಗ್ರಂಥಾಲಯಗಳ ಡಿಜಿಟಲೀಕರಣಗೊಳಿಸಲು ನಿರ್ಲಕ್ಷ ವಹಿಸಿದ್ದರ ಹಿನ್ನಲೆಯಲ್ಲಿ ಅವರನ್ನ ಅಮಾನತ್ತುಗೊಳಿಸಿ ಆದೇಶಿಸಲಾಗಿದೆ.
ದೂರದೃಷ್ಠಿ ಯೋಜನೆಯನ್ನ ಮತ್ತು ಗ್ರಂಥಾಲಯಗಳಲ್ಲಿ ಡಿಜಿಟಲೀಕರಣಗೊಳಿಸುವಂತೆ ಸೂಚಿಸಿ ಅನೇಕ ತಿಂಗಳಾದರೂ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಇತ್ತೀಚೆಗೆ ಸಿಇಒ ಪ್ರಕಾಶ್ ಗ್ರಾಮ ಪಂಚಾಯತಿಗೆ ಭೇಟಿ ನೀಡಿದಾಗ ಅವರ ನಿರ್ಲಕ್ಷತನ ಎದ್ದುತೋರುತ್ತಿದ್ದ ಕಾರಣ ಅಮಾನತ್ತು ಮಾಡಲಾಗಿದೆ.