Headlines

ಬೈಕ್ ಸ್ಕಿಡ್ ಆಗಿ ಯುವಕನೊಬ್ಬ ಸ್ಥಳದಲ್ಲಿಯೇ ಸಾವು :

ಬೈಕ್ ಸ್ಕಿಡ್ ಆಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತ್ಯಾಗರ್ತಿ ಸಮೀಪದ ಕೊರ್ಲಿಕೊಪ್ಪ ಹೊಸೂರು ಗ್ರಾಮದಲ್ಲಿ ನಡೆದಿದೆ.


ತ್ಯಾಗರ್ತಿ ಗ್ರಾಮದ ಅಜಿತ್ 21 ವರ್ಷ ಸಾವಿಗೀಡಾದ ದುರ್ದೈವಿಯಾಗಿದ್ದಾನೆ.ಈತ ಜೆಸಿಬಿ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗುತ್ತಿದೆ.


ಕೊರ್ಲಿಕೊಪ್ಪ ಗ್ರಾಮದ ಸಮೀಪವಿರುವ ರಾಮ ದೇವಸ್ಥಾನದ ತಿರುವಿನಲ್ಲಿ ಅಪಘಾತ ಸಂಭವಿಸಿದೆ.ಅಜಿತ್ ತ್ಯಾಗರ್ತಿಯಿಂದ ಕುಂದೂರು ಕಡೆ ಹೋಗುವ ವೇಳೆ ರಾತ್ರಿ 11.30 ರ ಸಂದರ್ಭದಲ್ಲಿ ಘಟನೆ ನಡೆದಿದೆ.

ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

About The Author

Leave a Reply

Your email address will not be published. Required fields are marked *