w
Headlines
Home » ರಿಪ್ಪನ್‌ಪೇಟೆಯ ಸಿದ್ದಪ್ಪನಗುಡಿ ಬಳಿ ಭೀಕರ ಅಪಘಾತ : ಓರ್ವ ಸಾವು

ರಿಪ್ಪನ್‌ಪೇಟೆಯ ಸಿದ್ದಪ್ಪನಗುಡಿ ಬಳಿ ಭೀಕರ ಅಪಘಾತ : ಓರ್ವ ಸಾವು

ರಿಪ್ಪನ್‌ಪೇಟೆ: ಇಲ್ಲಿನ ಸಮೀಪದ ಸಿದ್ದಪ್ಪನಗುಡಿ ಬಳಿ ಸ್ವಿಫ್ಟ್ ಕಾರು ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.

class=”separator” style=”clear: both; text-align: center;”>



ಬೆಂಗಳೂರಿನಿಂದ ಎಂ ಗುಡ್ಡೆಕೊಪ್ಪ ಗ್ರಾಮಕ್ಕೆ ಬರುತ್ತಿದ್ದಾಗ ಇಂದು ಬೆಳಗಿನಜಾವ ಸಿದ್ದಪ್ಪನಗುಡಿ ಬಳಿಯ ಸೇತುವೆಯ ತಡೆಗೋಡೆಗೆ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ.ಕಾರಿನ ಎಡಬಾಗದಲ್ಲಿ ಕುಳಿತಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ.


ಹೊಸನಗರ ಸಮೀಪದ ಎಂ ಗುಡ್ಡೆಕೊಪ್ಪ ಗ್ರಾಮದ ಪ್ರದೀಪ್(32) ಮೃತಪಟ್ಟ ದುರ್ದೈವಿಯಾಗಿದ್ದಾರೆ.ಕಾರು ಚಾಲಕ ನಾಗರಾಜ್ ಎಂಬುವವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.


ಎಂ ಗುಡ್ಡೆಕೊಪ್ಪ ಗ್ರಾಮದ ಪ್ರದೀಪ್ ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತಿದ್ದರು ಎಂದು ತಿಳಿದುಬಂದಿದೆ.ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ಸದಸ್ಯರಾದ ಪ್ರವೀಣ್ ರವರ ಸಹೋದರರಾಗಿದ್ದಾರೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂತಾಪ : ಕಾರು ಅಪಘಾತದಲ್ಲಿ ಮೃತಪಟ್ಟ ಪ್ರದೀಪ್ ರವರಿಗೆ ಶಾಸಕರಾದ ಹರತಾಳು ಹಾಲಪ್ಪ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

Newsmatic - News WordPress Theme 2026. Powered By BlazeThemes.
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.