w
Headlines
Home » ಮಲಗಿದ್ದ ತಾಯಿ,ಮಗಳ ಮೇಲೆ ಗೋಡೆ ಕುಸಿತ : ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಭೇಟಿ

ಮಲಗಿದ್ದ ತಾಯಿ,ಮಗಳ ಮೇಲೆ ಗೋಡೆ ಕುಸಿತ : ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಭೇಟಿ


ಮನೆಯಲ್ಲಿ‌ ಮಲಗಿದ್ದವರ ಮೇಲೆ ಏಕಾಏಕಿ ಗೋಡೆ ಕುಸಿದು ತಾಯಿ ಮತ್ತು ಮಗಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಶಾಂತಿನಗರ ಬಡಾವಣೆಯಲ್ಲಿ ನಡೆದಿದೆ. ಇಲ್ಲಿನ ನಾಲ್ಕನೇ ಕ್ರಾಸ್​​ನ ಯತಿರಾಜ್ ಎಂಬುವರ ಮನೆಯಲ್ಲಿ ಬಾಡಿಗೆಗೆ ಇದ್ದ ಉಮಾ ಹಾಗೂ ಮಗಳು ಕಾವ್ಯ ಎಂಬುವರ ಮೇಲೆ ಇಂದು ಬೆಳಿಗ್ಗೆ ಮನೆಯ ಗೋಡೆ‌ ಕುಸಿದಿದೆ.

ಉಮಾ ಅವರ ಕಾಲು ಮುರಿದಿದ್ದು, ಕಾವ್ಯ ಅವರ ಬಲಗೈ ಮುರಿತವಾಗಿದೆ. ಗೋಡೆಯು ಯತಿರಾಜ್ ಅವರ ಕಡೆಯೂ ಬಿದ್ದಿದ್ದರಿಂದ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಗಾಯಗೊಂಡಿರುವ ಉಮಾ ಹಾಗೂ ಕಾವ್ಯ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

>ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ,‌ ತಹಶೀಲ್ದಾರ್ ನಾಗರಾಜ್ ಹಾಗೂ ಪಾಲಿಕೆ ಆಯುಕ್ತ ಮಾಯಾಣ್ಣ ಗೌಡ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ವೀಕ್ಷಿಸಿದರು. ಸರಿಯಾದ ದಾಖಲೆ ಪಡೆದು ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

Leave a Reply

Your email address will not be published. Required fields are marked *

Newsmatic - News WordPress Theme 2026. Powered By BlazeThemes.
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.