w
Headlines
Home » ತುಂಗಾ ನದಿಯಲ್ಲಿ ಯುವಕನೊಬ್ಬ ನೀರುಪಾಲು : ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಶೋಧ ಕಾರ್ಯ

ತುಂಗಾ ನದಿಯಲ್ಲಿ ಯುವಕನೊಬ್ಬ ನೀರುಪಾಲು : ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಶೋಧ ಕಾರ್ಯ

ತುಂಗಾ ನದಿಯಲ್ಲಿ ಯುವಕನೋರ್ವ ನೀರುಪಾಲಾಗಿರುವ ಘಟನೆ ನಡೆದಿದೆ.

ಹೊಳೆ ಬಸ್ ಸ್ಟ್ಯಾಂಡ್  ಬಳಿ 25 ರಿಂದ 30 ವರ್ಷ ಅಸುಪಾಸಿನ ಯುವಕ ನೀರಿಗೆ ಹಾರಿರುವುದಾಗಿ ಕೆಲವರು ಹೇಳಿದರೆ ಇನ್ನು ಕೆಲವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವುದಾಗಿ ಹೇಳುತಿದ್ದು,ಸ್ಪಷ್ಟ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ.

ಆತನ ಶೋಧಕಾರ್ಯಕ್ಕೆ ಅಗ್ನಿಶಾಮಕದಳದ ಸಿಬ್ಬಂದಿಗಳು ಶೋಧಕಾರ್ಯ ಆರಂಭಿಸಿದ್ದಾರೆ. 

ಸಂತೋಷ್ ಎಂಬ 27 ವರ್ಷದ ಯುವಕ ನೀರಿನಲ್ಲಿ ಕೊಚ್ಚಿಕೊಂಡು ಹೋದವನು ಎಂದು ಹೇಳಲಾಗುತ್ತಿದೆ. ಪುರಲೆ ನಿವಾಸಿಯವನು ಎಂದು ತಿಳಿದು ಬಂದಿದೆ.

ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *

Newsmatic - News WordPress Theme 2026. Powered By BlazeThemes.
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.