w
Headlines
Home » ತೀರ್ಥಹಳ್ಳಿ ಪೊಲೀಸರಿಂದ ಗಾಂಜಾ ಬೇಟೆ !!! ಪಶ್ಚಿಮ ಬಂಗಾಳ ಮೂಲದ ನಾಲ್ವರ ಬಂಧನ

ತೀರ್ಥಹಳ್ಳಿ ಪೊಲೀಸರಿಂದ ಗಾಂಜಾ ಬೇಟೆ !!! ಪಶ್ಚಿಮ ಬಂಗಾಳ ಮೂಲದ ನಾಲ್ವರ ಬಂಧನ

ತೀರ್ಥಹಳ್ಳಿ : ತಾಲೂಕಿನ ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ವಿಠಲನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಪಶ್ಚಿಮ ಬಂಗಾಳ  ಮೂಲದ ನಾಲ್ವರನ್ನು ಗಾಂಜಾ ಕೇಸ್ ನಲ್ಲಿ ಅರೆಸ್ಟ್ ಮಾಡಲಾಗಿದೆ.  

ನಾಲ್ವರು ಕೂಡ ಪಶ್ಚಿಮ ಬಂಗಾಳದ ಮೂಲದವರಾಗಿದ್ದು ತೀರ್ಥಹಳ್ಳಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಖಚಿತ ಮಾಹಿತಿ ಮೇರೆಗೆ ತೀರ್ಥಹಳ್ಳಿಯ ಡಿವೈಎಸ್ಪಿ ಇವರ ನೇತೃತ್ವದಲ್ಲಿ ಮಾರುವೇಷದಲ್ಲಿ ಹೋಗಿ ಆರೋಪಿಗಳನ್ನು ಬಂಧಿಸಿದ್ದು ಒಂದೂವರೆ ಕೆಜಿ ಗಾಂಜಾ ಕೂಡ ವಶಕ್ಕೆ ಪಡೆಯಲಾಗಿದೆ. 

ಪಶ್ಚಿಮ ಬಂಗಾಳ ಮೂಲದವರಾದ ಬಾಷಾ ಸರ್ಕಾರ್, ಅಲೋಕ್ ಮಂಡಲ್, ಅಮೃತ್ ಮಂಡಲ್, ಸಂಕರ್ ಬ್ಯಾಪಾರಿ ಎಂಬುವರನ್ನು ಈಗಾಗಲೇ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

> ಕಾರ್ಯಾಚರಣೆಯಲ್ಲಿ ಸಿಪಿಐ ಅಶ್ವಥ್, ಪಿಎಸ್ಐ ಸಂತೋಷ್ ಕುಮಾರ್, ಸಿಬ್ಬಂದಿಗಳಾದ ಪುನೀತ್, ಪ್ರವೀಣ್ ಕುಮಾರ್, ದೀಪಕ್, ಅವಿನಾಶ್, ಪ್ರದೀಪ್, ಸುರೇಶ ನಾಯ್ಕ್, ವೀರೇಂದ್ರ,  ರವಿ, ಅವಿನಾಶ್ ವಿಜಯ್ ಮುಂತಾದವರು ಪಾಲ್ಗೊಂಡಿದ್ದರು. 

ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

class=”separator” style=”clear: both; text-align: center;”>


Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.