ರಿಪ್ಪನ್‌ಪೇಟೆ : ರಾಷ್ಟ್ರ ಮಟ್ಟದ ಹಾಕಿ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ತೋರಿ ಮಿಂಚುತ್ತಿರುವ ಪಟ್ಟಣದ ಬರುವೆ ಗ್ರಾಮದ ಅಪ್ರತಿಮ ಹಾಕಿ ಕ್ರೀಡಾಪಟು ಪೂಜಿತ ಗೌಡಳಿಗೆ ರಿಪ್ಪನ್‌ಪೇಟೆ ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಇಂದು ರಿಪ್ಪನ್‌ಪೇಟೆ ಗ್ರಾಮ ಪಂಚಾಯತಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಹಲವಾರು ಸಮಸ್ಯೆಗಳ ಮಧ್ಯೆ ಸಾವಿರಾರು ಸ್ಪರ್ಧಾಳುಗಳ ಮಧ್ಯೆ ಸ್ಪರ್ಧಿಸಿ ಗೆದ್ದು ಜಿಲ್ಲಾ, ರಾಜ್ಯ,ಹಾಗೂ ರಾಷ್ಟ್ರಮಟ್ಟದಲ್ಲಿ ಸ್ಥಾನ ಪಡೆದುಕೊಂಡು ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡ ನಮ್ಮೂರಿನ ಹೆಮ್ಮೆಯ ಯುವ ಕ್ರೀಡಾಪಟು ಪೂಜಿತ ಗೌಡ ರವರಿಗೆ ಸನ್ಮಾನಿಸಿ ಗೌರವಿಸಿ ಆರ್ಥಿಕ ನೆರವು ನೀಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪೂಜಿತ ಗೌಡ ಇದುವರೆಗೆ 19 ಬಾರಿ ರಾಷ್ಟ್ರ ಮಟ್ಟದ ಹಾಕಿ ಕ್ರೀಡಾ ಕೂಟದಲ್ಲಿ ಭಾಗವಹಿಸುವ ಅವಕಾಶ ದೊರೆತಿದ್ದು ಮುಂದಿನ ದಿನಗಳಲ್ಲಿ ಭಾರತ ದೇಶದ ಪರವಾಗಿ ಅಂತರ್ ರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಭಾರತ ಹಾಗೂ ಕರ್ನಾಟಕದ ಹಾಕಿ ಕ್ರೀಡೆಯ ಪತಾಕೆಯನ್ನು ಹಾರಿಸಬೇಕೆಂಬ ಅಭಿಲಾಷೆಯನ್ನು ಹಂಚಿಕೊಂಡರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುಳಾ ಕೆ ರಾವ್ ,ಉಪಾಧ್ಯಕ್ಷರಾದ ಮಹಾಲಕ್ಷ್ಮಿ ಅಣ್ಣಪ್ಪ,ಸದಸ್ಯರಾದ ಸುಧೀಂದ್ರ ಪೂಜಾರಿ,ಆಸೀಫ಼್ ಭಾಷಾಸಾಬ್,ಪಿ ರಮೇಶ್,ಮಲ್ಲಿಕಾರ್ಜುನ್ ,ಗಣಪತಿ ಹಾಗೂ ಮುಖಂಡರಾದ ಅರ್ ಎ ಚಾಬುಸಾಬ್,ಆರ್ ಎನ್ ಮಂಜುನಾಥ್, ಎನ್ ವರ್ತೇಶ್,ತ ಮ ನರಸಿಂಹ ಹಾಗೂ ಪೂಜಿತ ರವರ ತಂದೆ ನಾಗೇಶಪ್ಪ ಗೌಡ,ಗ್ರಾಪಂ ಪಿಡಿಒ ಚಂದ್ರಶೇಖರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರಾಷ್ಟ್ರಮಟ್ಟದ ಹಾಕಿ ಕ್ರೀಡಾಪಟು ಪೂಜಿತ ಗೌಡ ರವರಿಗೆ ರಿಪ್ಪನ್‌ಪೇಟೆಯ ಒಕ್ಕಲಿಗ ಯುವ ವೇದಿಕೆಯ ವತಿಯಿಂದ ಸನ್ಮಾನ
ರಿಪ್ಪನ್‌ಪೇಟೆ : ಹಾಕಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಪೂಜಿತ ಗೌಡ ರವರಿಗೆ ಒಕ್ಕಲಿಗ ಯುವ ವೇದಿಕೆ ವತಿಯಿಂದ ರಿಪ್ಪನ್ ಪೇಟೆ ಪಟ್ಟಣದ ಬರುವೆ ಗ್ರಾಮದ ಪೂಜಿತ ಗೌಡ ರವರ ಸ್ವ-ಗೃಹದಲ್ಲಿ ಅಭಿನಂದಿಸಿ ಗೌರವಿಸಿಲಾಯಿತು.
ಗ್ರಾಮೀಣ ಪ್ರದೇಶದ ವರಾಹಿ ಸಾವೆಹಕ್ಲು ಮುಳುಗಡೆ ಸಂತ್ರಸ್ಥರ ಕಡು ಬಡತನದ ಕುಟುಂಬದಲ್ಲಿ ಹುಟ್ಟಿ ಪ್ರಾಥಮಿಕ ಶಿಕ್ಷಣ ವನ್ನು ಸರಕಾರಿ ಶಾಲೆಯಲ್ಲಿ ಪಡೆದು ನಂತರ ಕ್ರೀಡಾ ಶಾಲೆಗೆ ಸೇರಿ ಕಠಿಣ ಪರಿಶ್ರಮ ನಿರಂತರ ಅಭ್ಯಾಸದ ಮೂಲಕ ಇಂದು ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವ ಯುವ ಕ್ರೀಡಾಪಟುವಿಗೆ ರಿಪ್ಪನ್‌ಪೇಟೆ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಿ ಆರ್ಥಿಕ ನೆರವು ನೀಡಿದ್ದಾರೆ.
ಈ ಸಂಧರ್ಭದಲ್ಲಿ ಒಕ್ಕಲಿಗ ಯುವ ವೇದಿಕೆಯ ರವೀಂದ್ರ ಕೆರೆಹಳ್ಳಿ, ಉಮೇಶ್ ಹೆಚ್ ಎನ್,ವೆಂಕಟೇಶ್ ಬುಕ್ ಸ್ಟಾಲ್,ರಾಜೇಶ್ ಹಾಲುಗುಡ್ಡೆ,ಹರೀಶ್ ,ಚಿಂತು ,ಪುರುಷೋತ್ತಮ್ ,ಪ್ರಮೋದ್ ,ದಯಾಕರ ,ಸಂದೀಪ್ ಗೌಡ ,ರಾಘವೇಂದ್ರ ಬೈರಾಪುರ ,ದಯಾಕರ ಹಾಲುಗುಡ್ಡೆ ಉಪಸ್ಥಿತರಿದ್ದರು.