POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಲವ್ ಜಿಹಾದ್ ಗೆ ಬಲಿಯಾದ ಗೃಹಿಣಿ | ಕುಟುಂಬಸ್ಥರ ಆರೋಪ

ಶಿವಮೊಗ್ಗ: ಗೃಹಿಣಿಯೋರ್ವಳು ಹೆರಿಗೆಯಾದ ಐದೇ ದಿನದಲ್ಲಿ ಮೃತಪಟ್ಟಿದ್ದು, ಆಕೆಯ ಸಾವಿಗೆ ಲವ್ ಜಿಹಾದ್ ಕಾರಣ ಎಂದು ಕುಟಂಬಸ್ಥರು ಆರೋಪಿಸಿದ್ದಾರೆ.
19 ವರ್ಷದ ಗೃಹಿಣಿ ಭೂಮಿಕಾ ಅಲಿಯಾಸ್ ಮುಸ್ಕಾನ್ ಭಾನು ಮೃತ ದುರ್ದೈವಿ. ಜಿಲ್ಲೆಯ ಸೊರಬದ ನಿವಾಸಿಯಾಗಿದ್ದ ಭೂಮಿಕಾ ಅಂತರ್ ಧರ್ಮೀಯನನ್ನು ಪ್ರೀತಿಸಿ ವಿವಾಹವಾಗಿದ್ದರು.
ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮದವರಾದ ಭೂಮಿಕಾ ಪೋಷಕರು ಕಳೆದ ಎರಡು ವರ್ಷದ ಹಿಂದೆ ಮೃತಪಟ್ಟಿದ್ದರು. ಬಳಿಕ ಭೂಮಿಕಾ ಸೊರಬದ ತನ್ನ ಅಜ್ಜಿ ಮನೆಯಲ್ಲಿ ಆಶ್ರಯ ಪಡೆದಿದ್ದರು. ಅಜ್ಜಿ ಮನೆಯಲ್ಲಿದ್ದುಕೊಂಡು ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಗ ಭೂಮಿಕಾಳಿಗೆ ವೆಲ್‍ಡಿಂಗ್ ಕೆಲಸ ಮಾಡಿಕೊಂಡಿದ್ದ ಸಮೀರ್ ಎಂಬಾತನ ಪರಿಚಯವಾಗಿ, ಪರಿಚಯ ಪ್ರೀತಿಗೆ ತಿರುಗಿದೆ. ಆದರೆ ಭೂಮಿಕಾ ಅಪ್ರಾಪ್ತಳಾಗಿದ್ದು, ಆ ಸಮಯದಲ್ಲೇ ಸಮೀರ್ ವಿವಾಹ ಮಾಡಿಕೊಂಡಿದ್ದ.
ವಿವಾಹದ ನಂತರ ಭೂಮಿಕಾ ಹೆಸರನ್ನು ಮುಸ್ಕಾನ್ ಭಾನು ಎಂದು ಬದಲಾಯಿಸಿದ್ದರಂತೆ ಪತಿ ಸಮೀರ್, ಮದುವೆ ನಂತರ ಭೂಮಿಕಾಳಿಗೆ ಆಕೆಯ ಕುಟುಂಬಸ್ಥರು ಭೇಟಿ ಮಾಡಲು ಅವಕಾಶ ನೀಡುತ್ತಿರಲಿಲ್ಲವಂತೆ. ಆಗಾಗ ಪತಿ ಸಮೀರ್ ಆತನ ತಾಯಿ ಹಾಗೂ ಸಹೋದರಿಯರು ಕಿರುಕುಳ ನೀಡುತ್ತಿದ್ದರು ಎಂದು ಮೃತ ಭೂಮಿಕಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಗರ್ಭಿಣಿಯಾಗಿದ್ದ ಭೂಮಿಕಾಳಿಗೆ ಹೆರಿಗೆಗಾಗಿ ಕಳೆದ ವಾರ ಸೊರಬದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಭೂಮಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ವೇಳೆ ಅಧಿಕ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ನಂತರ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಮೆಗ್ಗಾನ್ ಆಸ್ಪತ್ರೆಯಲ್ಲೂ ಸಹ ಭೂಮಿಕಾ ಚಿಕಿತ್ಸೆಗೆ ಸ್ಪಂದಿಸದ ಕಾರಣ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಭೂಮಿಕಾ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಆದರೆ ಭೂಮಿಕಾ ಮೃತಪಟ್ಟಿರುವ ವಿಷಯವನ್ನು ಸಮೀರ್ ಭೂಮಿಕಾ ಕುಟುಂಬಸ್ಥರಿಗೆ ತಿಳಿಸದೇ ಮುಚ್ಚಿಟ್ಟಿದ್ದ. ಭೂಮಿಕಾ ಕುಟುಂಬಸ್ಥರು ಮೃತದೇಹದ ಮರಣೋತ್ತರ ಶವ ಪರೀಕ್ಷೆ ನಡೆಸಲು ಮೆಗ್ಗಾನ್ ಆಸ್ಪತ್ರೆಗೆ ಕರೆ ತಂದಿದ್ದರು. ಅಲ್ಲದೇ ಭೂಮಿಕಾ ಸಾವಿಗೆ ಆಕೆಯ ಪತಿ ಸಮೀರ್, ಆತನ ತಾಯಿ ಮತ್ತು ಸಹೋದರಿಯರೇ ಕಾರಣ. ಇವರುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೊರಬ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.