w
Headlines
Home » ಚಲಿಸುವ ಬಸ್ಸನ್ನು ಓಡಿಹೋಗಿ ಹತ್ತಲು ಹೋಗಿ ಬಸ್ ನಿಂದ ಕೆಳಗೆ ಬಿದ್ದ ವಿದ್ಯಾರ್ಥಿ : ವಿಡಿಯೋ ಈಗ ವೈರಲ್

ಚಲಿಸುವ ಬಸ್ಸನ್ನು ಓಡಿಹೋಗಿ ಹತ್ತಲು ಹೋಗಿ ಬಸ್ ನಿಂದ ಕೆಳಗೆ ಬಿದ್ದ ವಿದ್ಯಾರ್ಥಿ : ವಿಡಿಯೋ ಈಗ ವೈರಲ್

ಚಲಿಸುವ ಬಸ್ಸನ್ನು ಓಡಿಹೋಗಿ ಹತ್ತಲು ಹೋಗಿ ಬಸ್ ನಿಂದ ವಿದ್ಯಾರ್ಥಿಯೋರ್ವ ಕೆಳಗೆ ಬಿದ್ದ ವಿಡಿಯೋ ಈಗ ವೈರಲ್ ಆಗಿದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾರ್ಗಲ್ ಪಟ್ಟಣದಲ್ಲಿ ಈ ಘಟನೆ  ನಡೆದಿದ್ದು, ಬಸ್ ನಿಲ್ದಾಣದಿಂದ ಹೊರಟ ಬಸ್ಸನ್ನು ಓಡಿ ಹೋಗಿ ಹತ್ತಲು ವಿದ್ಯಾರ್ಥಿ ಯತ್ನಿಸಿದ್ದಾನೆ.

ಆದರೆ ಬಸ್ಸು ಸ್ಪೀಡ್ ಇದ್ದಿದ್ದರಿಂದ ವಿದ್ಯಾರ್ಥಿಗೆ ಹತ್ತಲು ಸಾಧ್ಯವಾಗದೆ ಕೆಳಗೆ ಬಿದ್ದಿದ್ದಾನೆ. ಕಾರ್ಗಲ್ ನ ಇಡುವಾಣಿಯ ಚಿಪ್ಪಲಮಕ್ಕಿಯ ಒಂಭತ್ತನೇ ತರಗತಿ ವಿದ್ಯಾರ್ಥಿ ವೈಭವ್ ಎಂಬಾತ ಬಸ್ ನಿಂದ ಕೆಳಗೆ ಬಿದ್ದ ವಿದ್ಯಾರ್ಥಿ.

ಶಾಲಾ ಬ್ಯಾಗ್ ಬೆನ್ನಿಗೆ ಹಾಕಿಕೊಂಡಿದ್ದಿಂದ ಅಂಗಾತ ಬಿದ್ದ ವಿದ್ಯಾರ್ಥಿಗೆ ಯಾವುದೇ ಗಾಯಗಳಾಗಿಲ್ಲ. ಹಿಂಬದಿಯಿಂದ ಯಾವ ವಾಹನವೂ ಬಾರದೆ ಇರುವುದರಿಂದ ಹುಡುಗ ಬಚಾವ್ ಆಗಿದ್ದಾನೆ. ಶಾಲೆಯ ಬ್ಯಾಗ್  ವಿದ್ಯಾರ್ಥಿಯನ್ನು ಬದುಕಿಸಿದೆ ಅಂತನೇ ಹೇಳಬಹುದು.

ವಿದ್ಯಾರ್ಥಿ ಬಸ್ ಗೆ ಹತ್ತಲು ಹೋಗಿ ಬಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೀಡಿಯೋ ಇಲ್ಲಿ ವೀಕ್ಷಿಸಿ 👇👇👇👇




Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.