Headlines

ಟ್ರಾಕ್ಟರ್ ಚಾಲಕನ ಅಜಾಗರುಕತೆಯಿಂದ ತನ್ನ ಪೋಷಕರ ಎದುರೇ ಪ್ರಾಣ ಬಿಟ್ಟ 5 ವರ್ಷದ ಪುಟ್ಟ ಮಗು :

ಕುಂಸಿ : ಟ್ರಾಕ್ಟರ್ ಚಾಲಕನ ಅಜಾಗರುಕತೆಯಿಂದ 5 ವರ್ಷದ ಪುಟ್ಟ ಮಗುವು ತನ್ನ ಪೋಷಕರ ಎದುರೇ ಪ್ರಾಣ ಬಿಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಕುಂಸಿ ಗ್ರಾಮದಲ್ಲಿ ನಡೆದಿದೆ.

ಹಾನಗಲ್ ತಾಲ್ಲೂಕಿನ ಮಾಸನಕಟ್ಟೆ ಗ್ರಾಮದಿಂದ ರಸ್ತೆ ಕಾಮಗಾರಿಗೆ ಇಮಾಮ್ ಸಾಬ್ ಕುಟುಂಬ ಕೆಲಸಕ್ಕೆಂದು ಆಯನೂರಿನ ಕುಂಸಿಯ ರೇಚಿಕೊಪ್ಪ ಗ್ರಾಮಕ್ಕೆ ಬಂದಿತ್ತು.

ನಿನ್ನೆ ಮಧ್ಯಾಹ್ನ ಮಗುವನ್ನು ಜಮೀನಿನ ಪಕ್ಕದಲ್ಲಿ ಮಲಗಿಸಿ ಪೋಷಕರು ಅಲ್ಲೇ ಅಕ್ಕಪಕ್ಕದಲ್ಲಿ ಕೆಲಸ ಮಾಡುತ್ತಿದ್ದರು. ಮಗುವಿಗೆ ಬಿಸಿಲು ಆಗಬಾರದೆಂಬ ಉದ್ದೇಶದಿಂದ ಮಗುವಿನ ಮೇಲೆ ಟುವೆಲ್  ಹಾಸಲಾಗಿತ್ತು ಅದೇ ಸಮಯದಲ್ಲಿ ಟ್ರ್ಯಾಕ್ಟರ್  ಚಾಲಕ  ಹಿಂಬದಿಯಿರುವುದು ಟವೆಲ್ ಎಂದು  ಭಾವಿಸಿ ಟ್ರ್ಯಾಕ್ಟರ್ ಹಾಯಿಸಿದ್ದಾನೆ ಇದರ ಪರಿಣಾಮ ಅಲ್ಲಿ ಮಲಗಿದಂತಹ ಮರ್ದನ.ಬಿ (5 ವರ್ಷ ) ಎಂಬ ಪುಟ್ಟ ಮಗು ಪೋಷಕರೆದುರೆ ವಿಲವಿಲ ಒದ್ದಾಡಿ ಅಸುನೀಗಿರುವ  ಕರುಣಾಜನಕ ಘಟನೆ ಕುಂಸಿ ಸಮೀಪದ ರೇಚಿಕೊಪ್ಪದಲ್ಲಿ ನಡೆದಿದೆ. 

ಸ್ಥಳಕ್ಕೆ ಕುಂಸಿ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.

ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *