w
Headlines
Home » ಚಿಕ್ಕಜೇನಿ ಪ್ರೌಢಶಾಲೆ ಎಸ್ ಡಿಎಂಸಿ ಅಧ್ಯಕ್ಷರಾಗಿ ಉಮೇಶ್ ಗೌಡ ಆಯ್ಕೆ:

ಚಿಕ್ಕಜೇನಿ ಪ್ರೌಢಶಾಲೆ ಎಸ್ ಡಿಎಂಸಿ ಅಧ್ಯಕ್ಷರಾಗಿ ಉಮೇಶ್ ಗೌಡ ಆಯ್ಕೆ:


ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಚಿಕ್ಕ ಜೇನಿ ಸರ್ಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಉಮೇಶ್ ಗೌಡ ಚಿಕ್ಕಜೇನಿ ಆಯ್ಕೆಯಾಗಿದ್ದಾರೆ. ಶನಿವಾರ ಪ್ರೌಢಶಾಲಾ ಆವರಣದಲ್ಲಿ ನಡೆದ ಪೋಷಕರಿಂದ ಆಯ್ಕೆಯಾದ ಸದಸ್ಯರು ಉಮೇಶ್ ಗೌಡ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು. 

ಸಮಿತಿಯ ಸದಸ್ಯರಾಗಿ ಶ್ರೀಮತಿ ಆಶಾ ನರಸಿಂಹ, ಶ್ರೀಮತಿ ಮೀನಾಕ್ಷಿ, ಶ್ರೀಮತಿ ಯಶೋಧ, ಧನಂಜಯ ಹಿರೇಜೇನಿ, ನಾಗರಾಜ್ ಬಿಳಿಕಿ, ಹರೀಶ್ ಕುಮಾರ್ ಕಾರೆಮಟ್ಟಿ, ಜಿಎಲ್ ಲಿಂಗರಾಜ್ ಹಿರೇಮೈತೆ, ಶಿವಕುಮಾರ್ ಶೆಟ್ಟಿಬೀಡು ಇವರುಗಳು ಆಯ್ಕೆಯಾದರು.

 ಸಭೆಯ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಿಜಯಕುಮಾರಿ ವಹಿಸಿದ್ದರು. ಸಭೆಯಲ್ಲಿ ಉಪಸ್ಥಿತರಿದ್ದ ನಿರ್ಗಮಿತ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಕಾಂತ್ ಐತಾಳ ಅಧಿಕಾರ ಹಸ್ತಾಂತರ ಮಾಡಿದರು. ಸಭೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಅಣ್ಣಪ್ಪ ಶೆಟ್ಟಿ ಉಪಸ್ಥಿತರಿದ್ದರು. ಚುನಾವಣಾ ಪ್ರಕ್ರಿಯೆಯನ್ನು ಶಿಕ್ಷಕರಾದ ಎಂ ಡಿ ಹೆಗಡೆವೀರಣ್ಣಗೌಡ, ಶ್ರೀಮತಿ ನಿರ್ಮಲ, ಶ್ರೀಮತಿ ಲತಾ ನಡೆಸಿಕೊಟ್ಟರು.ಸಭೆಯ ಮೊದಲಲ್ಲಿ ಶಿಕ್ಷಕ ಶೇಖರಪ್ಪ ಸ್ವಾಗತಿಸಿದರು. ಕೊನೆಯಲ್ಲಿ ಶಿಕ್ಷಕ ಎನ್ ಡಿ ಹೆಗಡೆ ವಂದಿಸಿದರು.


ವರದಿ : ರಾಮನಾಥ್

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.