 
        
            NSUI ಹೊಸನಗರ ಬ್ಲಾಕ್ ಅಧ್ಯಕ್ಷರಾಗಿ ಕಿರಣ್ ಕುಮಾರ್ ನೇಮಕ
NSUI ಹೊಸನಗರ ಬ್ಲಾಕ್ ಅಧ್ಯಕ್ಷರಾಗಿ ಕಿರಣ್ ಕುಮಾರ್ ನೇಮಕ ಸಾಗರ ವಿಧಾನಸಭಾ ಕ್ಷೇತ್ರದ ಹೊಸನಗರ ತಾಲೂಕಿನ ಎನ್ ಎಸ್ ಯುಐ ಸಂಘಟನೆಯ ತಾಲೂಕ್ ಅಧ್ಯಕ್ಷರಾಗಿ ಕಿರಣ್ ಕುಮಾರ್ ಎಸ್ ರವರನ್ನು ನೇಮಕಗೊಳಿಸಿ ಶಿವಮೊಗ್ಗ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಎಸ್ ಎನ್ ಆದೇಶಿಸಿದ್ದಾರೆ. ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ಹಾಗೂ ಯುವಮುಖಂಡ ಅಶೋಕ್ ಬೇಳೂರು ಸೂಚನೆಯ ಮೇರೆಗೆ ಈ ಕೂಡಲೇ ಜಾರಿಗೆ ಬರುವಂತೆ ಕಿರಣ್ ಕುಮಾರ್ ರವರನ್ನು ಹೊಸನಗರ ಬ್ಲಾಕ್ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ.
 
                         
                         
                         
                         
                         
                         
                         
                         
                         
                        