Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

ತೀರ್ಥಹಳ್ಳಿಯಲ್ಲಿ ಐಷಾರಾಮಿ ಕಾರುಗಳಲ್ಲಿ ದನಗಳ ಸಾಗಾಟ !?ವೀಡಿಯೋ ವೈರಲ್ | Crime News

ತೀರ್ಥಹಳ್ಳಿಯಲ್ಲಿ ಐಷಾರಾಮಿ ಕಾರುಗಳಲ್ಲಿ ದನಗಳ ಸಾಗಾಟ !? ತೀರ್ಥಹಳ್ಳಿ : ಐಷಾರಾಮಿ ಕಾರುಗಳಲ್ಲಿ ದನಗಳನ್ನು ಸಾಗಾಟ ಮಾಡುತ್ತಿದ್ದಾರೆ ಎಂಬುದಾಗಿ ಕಳೆದ 4 ದಿನಗಳಿಂದ ಪಟ್ಟಣದಲ್ಲಿ ಚರ್ಚೆ ಆಗುತ್ತಿದ್ದು ಅದಕ್ಕೆ ಪುಷ್ಟಿ ನೀಡುವಂತೆ ಇಂದು ವಿಡಿಯೋವೊಂದು ವೈರಲ್ ಆಗಿದೆ. ಸೀಬಿನಕೆರೆಯ ನ್ಯಾಯಾಲಯದ ಮುಂಭಾಗ ಮಧ್ಯರಾತ್ರಿ ಹೈಟೆಕ್ ಕಾರ್ ನಲ್ಲಿ ದನಗಳನ್ನು ಸಾಗಣೆ ಮಾಡಲಾಗಿದೆ. ಪಟ್ಟಣದಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಇದನ್ನೇ ಪ್ಲಸ್ ಮಾಡಿಕೊಂಡ ದನ ಸಾಗಾಣಿಕೆಕಾರರು ಕಾರುಗಳಲ್ಲಿ ಹಾಗೂ ಪಿಕಪ್ ಇತರೆ ವಾಹನಗಳಲ್ಲಿ ದನ ಸಾಗಣೆ ಮಾಡುವ…

Read More

ಶಿವಮೊಗ್ಗ ಜಿಲ್ಲೆಯಲ್ಲಿ 10ಕ್ಕೇರಿದ ಕೊರೊನಾ ಪಾಸಿಟಿವ್ ಸಂಖ್ಯೆ

ಶಿವಮೊಗ್ಗ ಜಿಲ್ಲೆಯಲ್ಲಿ 10ಕ್ಕೇರಿದ ಕೊರೊನಾ ಪಾಸಿಟಿವ್ ಸಂಖ್ಯೆ ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರಲ್ಲಿ ಓರ್ವರು ಶಿವಮೊಗ್ಗ ಮತ್ತೋರ್ವರು ಸೊರಬ ತಾಲೂಕಿಗೆ ಸೇರಿದವರು ಎಂದು ಹೆಲ್ತ್ ಬುಲೆಟಿನ್ ತಿಳಿಸಿದೆ. ಇವತ್ತು 236 ಜನರಿಗೆ ಸೋಂಕಿನ ಪರೀಕ್ಷೆಗೆ ಒಳಪಡಿಸಲಾಗಿತ್ತು. 236 ಜನರಲ್ಲಿ ಇಬ್ಬರಿಗೆ ಸೋಂಕು ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ. ನಿನ್ನೆ 8 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಇಂದು ಇಬ್ಬರಿಗೆ ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 10 ಕ್ಕೆ…

Read More

Hosanagara | ಆಕಸ್ಮಿಕ ಬೆಂಕಿ ತಗುಲಿ ಹುಲ್ಲಿನ ಬಣವೆ ಸುಟ್ಟು ಭಸ್ಮ

Hosanagara | ಆಕಸ್ಮಿಕ ಬೆಂಕಿ ತಗುಲಿ ಹುಲ್ಲಿ ಬಣವೆ ಸುಟ್ಟು ಭಸ್ಮ ಹೊಸನಗರ ತಾಲೂಕಿನ ಮಾರುತಿಪುರ ಗ್ರಾಪಂ ವ್ಯಾಪ್ತಿಯ ಸೋರೆಕೊಪ್ಪ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಕೊಟ್ಟಿಗೆ ಮನೆಯಲ್ಲಿದ್ದ 600 ಕ್ಕೂ ಹೆಚ್ಚು ಹುಲ್ಲು ಹೊರೆಗಳು ಸುಟ್ಟು ಹೋಗಿವೆ. ಸೋರೆಕೊಪ್ಪ ನೆಲಗಳಲೆ ಗ್ರಾಮದ ಕೃಷಿಕ ಸಂತೋಷ್ ಎಂಬುವವರಿಗೆ ಸೇರಿದ ಕೊಟ್ಟಿಗೆ ಮನೆಯಲ್ಲಿ ಬೆಂಕಿ ಕಾಣಿಸಿ ಕೊಂಡಿದೆ. ಬಳಿಕ ಕೆಲವೇ ಕ್ಷಣಗಳಲ್ಲಿ ಬೆಂಕಿ ಕೆನ್ನಾಲಿಗೆ 600 ಕ್ಕೂ ಹೆಚ್ಚು ಹುಲ್ಲು ಹೊರೆಗಳು ಸುಟ್ಟು ಭಸ್ಮವಾಗಿದೆ. ತಕ್ಷಣ ಸ್ಥಳೀಯರ…

Read More

SAGARA | ಸಾಗರ ನಗರಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ

SAGARA | ಸಾಗರ ನಗರಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ  ಸಾಗರ : ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ನಡುವೆ ಮಾತಿನ ಚಕಮಕಿ ನಡೆದಿದೆ.‌ ಸದಸ್ಯರೆಲ್ಲರೂ ಬಾವಿಗಿಳಿದು ಹೋರಾಟ ನಡೆಸಿದ್ದಾರೆ. ನಗರಸಭೆಯ ಆಡಳಿತ ಅಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಕುಮಾರಿ ಪಲ್ಲವಿ ಸಾತೇನಹಳ್ಳಿ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಸಭೆಯಲ್ಲಿ ಭಾಗಿಯಾಗಿದ್ದರು. ಸಾಗರದ ಬಿ.ಹೆಚ್ ರಸ್ತೆಯಲ್ಲಿ ಜಾಗವೊಂದರ ವಿಚಾರದಲ್ಲಿ ಮಾಜಿ ಶಾಸಕರು ಸೇರಿದಂತೆ 14 ಜನರ…

Read More

Accident | ಭದ್ರಾವತಿಯ ಶಾಸಕ ಬಿ‌ ಕೆ ಸಂಗಮೇಶ್ ರವರ ಆಪ್ತ ಸಹಾಯಕ ರಸ್ತೆ ಅಪಘಾತದಲ್ಲಿ ‌ಸಾವು

Accident | ಭದ್ರಾವತಿಯ ಶಾಸಕ ಬಿ‌ ಕೆ ಸಂಗಮೇಶ್ ರವರ ಆಪ್ತ ಸಹಾಯಕ ರಸ್ತೆ ಅಪಘಾತದಲ್ಲಿ ‌ಸಾವು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಕಾಂಗ್ರೆಸ್(congress) ಶಾಸಕ ಬಿ.ಕೆ.ಸಂಗಮೇಶ್ವರ್ ಅವರ ಆಪ್ತ ಸಹಾಯಕರಾದ ಈಶ್ವರ್ ರಸ್ತೆ ಅಪಘಾತದಲ್ಲಿ (accident) ಸಾವನ್ನಪ್ಪಿರುವ ಘಟನೆ ತಡರಾತ್ರಿ ನಡೆದಿದೆ. ಶಾಸಕರ ಆಪ್ತ ಸಹಾಯಕ ಈಶ್ವರ್ ಕೂಡ್ಲಿಗೆರೆಯಿಂದ ಭದ್ರಾವತಿಗೆ(bhadravathi) ಬೈಕ್ ನಲ್ಲಿ ಬರುತ್ತಿರುವಾಗ ಲಾರಿ ಡಿಕ್ಕಿಯಾಗಿದೆ. ತಕ್ಷಣವೇ ಸ್ಥಳೀಯರು ಗಾಯಾಳು ಈಶ್ವರ್ ರವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.ಮೃತ ದೇಹವನ್ನು ಭದ್ರಾವತಿಯ…

Read More

Ripponpete | ಬಾಳೂರು ಸೇತುವೆ ಬಳಿ ಕಾರು ಡಿಕ್ಕಿಯಾಗಿ ಮಹಿಳೆ ಸಾವು

Ripponpete | ಬಾಳೂರು ಸೇತುವೆ ಬಳಿ ಕಾರು ಡಿಕ್ಕಿಯಾಗಿ ಮಹಿಳೆ ಸಾವು  ರಿಪ್ಪನ್‌ಪೇಟೆ : ಇಲ್ಲಿನ ಬಾಳೂರು ಗ್ರಾಮದ ಸೇತುವೆ ಬಳಿ ಕಾರು ಡಿಕ್ಕಿಯಾಗಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಶಿಕಾರಿಪುರ ತಾಲೂಕಿನ ಸುಣ್ಣದಕೊಪ್ಪ ನಿವಾಸಿ ನಾಗಮ್ಮ(46) ಮೃತಪಟ್ಟ ದುರ್ಧೈವಿಯಾಗಿದ್ದಾರೆ.ಇವರು ಬಾಳೂರು ಸೇತುವೆ ಬಳಿಯ ಕ್ಯಾಂಪ್ ನಲ್ಲಿ ವಾಸಿಸುತಿದ್ದರು. ಸೇತುವೆ ಬಳಿಯಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ಎಮ್ಮೆಗೆ ನೀರುಣಿಸುತಿದ್ದ ಮಹಿಳೆಗೆ ಸಾಗರ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಬರುತಿದ್ದ ಕಾರು ಏಕಾಏಕಿ ಡಿಕ್ಕಿಯಾಗಿದೆ. ಘಟನೆಯ ಹಿನ್ನಲೆ : ಬಾಳೂರು ಗ್ರಾಮದ…

Read More

Shivamogga | ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ – ಮೆಗ್ಗಾನ್ ಗೆ ದಾಖಲು

Shivamogga | ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ – ಮೆಗ್ಗಾನ್ ಗೆ ದಾಖಲು ಶಿವಮೊಗ್ಗದಲ್ಲಿ ಫ್ರೀಡಂ ಪಾರ್ಕನಲ್ಲಿ ಶಶಿ ಎಂಬಾತನ ಮೇಲೆ ಮೂವರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.  ದಾಳಿಗೊಳಗಾದ ವ್ಯಕ್ತಿ ಶಶಿ ಎಂಬಾತನ ಮೈ ರಕ್ತಸಿಕ್ತವಾಗಿದೆ. ಫ್ರೀಡಂ ಪಾರ್ಕ್ ನಲ್ಲಿರುವ ವಾಕಿಂಗ್ ಪಾತ್ ನ ಮೇಲೆ ಶಶಿ ಎಂಬ ಯುವಕ ನಡೆದುಕೊಂಡು ಹೋಗುತಿದ್ದಾಗ ಬೈಕ್ ನಲ್ಲಿ ಬಂದ ಮೂವರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಸಧ್ಯಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾದ ಯುವಕ ಪ್ರಾಣಾಪಾಯದಿಂದ ಬಜಾವ್ ಆಗಿದ್ದು ಮೆಗ್ಗಾನ್ ಗೆ ದಾಖಲಿಸಲಾಗಿದೆ….

Read More

ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಗೆ ಡಾ. ಚಿಕ್ಕಕೊಮಾರಿ ಗೌಡ ದತ್ತಿ ಪ್ರಶಸ್ತಿ ಪ್ರಧಾನ | Kalagodu

ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಗೆ ಡಾ. ಚಿಕ್ಕಕೊಮಾರಿ ಗೌಡ ದತ್ತಿ ಪ್ರಶಸ್ತಿ ಪ್ರಧಾನ | Kalagodu ಶಿವಮೊಗ್ಗ ಜಿಪಂ ಮಾಜಿ ಅಧ್ಯಕ್ಷರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್ ರವರಿಗೆ ಕರ್ನಾಟಕ ಪಂಚಾಯತ್‌ರಾಜ್ ಪರಿಷತ್‌ನಿಂದ ಕೊಡ ಮಾಡುವ ಡಾ.ಚಿಕ್ಕ ಕೊಮಾರಿಗೌಡ ದತ್ತಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಇಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಡಾ. ಅಂಬೇಡ್ಕರ್ ಸಮುದಾಯ ಭವನದಲ್ಲಿ ಏರ್ಪಡಲಾಗಿದ್ದ ಅಬ್ದುಲ್ ನಜೀರ್ ಸಾಬ್ ಜನ್ಮದಿನದ ಅಂಗವಾಗಿ ಪಂಚಾಯತ್ ರಾಜ್ ಸಬಲೀಕರಣ ದಿನಾಚರಣೆ ಡಾ||…

Read More

Ripponpete | ಶಾಂತಿ ಮತ್ತು ನೆಮ್ಮದಿಯ ಮೂಲಕ ಪ್ರತಿಯೊಬ್ಬರು ಉತ್ತಮ ಬದುಕು ಕಟ್ಟಿಕೊಳ್ಳೋಣ :ರೆ. ಫಾ. ಬಿನೋಯ್

ರಿಪ್ಪನ್ ಪೇಟೆಯಲ್ಲಿ ಕ್ರೈಸ್ತ ಬಾಂಧವರಿಂದ ಕ್ರಿಸ್ಮಸ್ ಸಡಗರ ಸಂಭ್ರಮದಿಂದ ಆಚರಣೆ. ಶಾಂತಿ ಮತ್ತು ನೆಮ್ಮದಿಯ ಮೂಲಕ ಪ್ರತಿಯೊಬ್ಬರು ಬದುಕು ಕಟ್ಟಿಕೊಳ್ಳೋಣ :ರೆ. ಫಾ. ಬಿನೋಯ್. ರಿಪ್ಪನ್ ಪೇಟೆ : ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಒತ್ತಡದ ಜೀವನವನ್ನು ಸಾಗಿಸುತ್ತಿರುವ ಪ್ರತಿಯೊಬ್ಬರಿಗೂ ಶಾಂತಿ ಮತ್ತು ನೆಮ್ಮದಿಯ ಬದುಕು ಅತ್ಯವಶ್ಯಕವಾಗಿದೆ. ಮಾನವ ಜಗತ್ತಿನಲ್ಲಿ ಶಾಂತಿ ಮತ್ತು ನೆಮ್ಮದಿಯ ಮೂಲಕ ಬದುಕು ಕಟ್ಟಿಕೊಳ್ಳೋಣ ಎಂದು ರಿಪ್ಪನ್ ಪೇಟೆ ಗುಡ್ ಶಫರ್ಡ್ ಚರ್ಚಿನ ಧರ್ಮಗುರು   ರೆ. ಫಾ. ಬಿನೋಯ್ ಹೇಳಿದರು.  ಪಟ್ಟಣದ ಗುಡ್ ಶಫರ್ಡ್…

Read More

ಬಸ್ ನಲ್ಲಿ ಪಕ್ಕದ ಸೀಟಿನಲ್ಲಿದ್ದ ಸುಂದರಿ ಜೊತೆ ರೋಮ್ಯಾನ್ಸ್ – ಲಾಡ್ಜ್ ಗೆ ಕರೆದೊಯ್ದ ಸುಂದರಿ ಚಾಲಕನಿಗೆ ಮಾಡಿದ್ದೇನು ಗೊತ್ತಾ…???|Shivamogga

ಬಸ್ ನಲ್ಲಿ ಪಕ್ಕದ ಸೀಟಿನಲ್ಲಿದ್ದ ಸುಂದರಿ ಜೊತೆ ರೋಮ್ಯಾನ್ಸ್ – ಲಾಡ್ಜ್ ಗೆ ಕರೆದೊಯ್ದ ಸುಂದರಿ ಚಾಲಕನಿಗೆ ಮಾಡಿದ್ದೇನು ಗೊತ್ತಾ…??? ಬಸ್​ನಲ್ಲಿ ದೂರ ಪ್ರಯಾಣಿಸುವಾಗ ತಮ್ಮ ಪಕ್ಕದ ಸೀಟಿನಲ್ಲಿ ಮಹಿಳೆಯರು ಬಂದು ಕುಳಿತರೆ ಕೆಲವರಿಗೆ ಅದೊಂದು ಸಂತಸದ ವಿಷಯವಾಗಿರುತ್ತದೆ. ಹಾಗೆಯೇ ಕಾರವಾರ ದಿಂದ ಹೊರಟು ಶಿವಮೊಗ್ಗಕ್ಕೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಪಕ್ಕದಲ್ಲಿ ಮಹಿಳೆ ಕುಳಿತಿದ್ದು ಅಗಾಧ ಸಂತಸ ತಂದು ಅವಳೊಂದಿಗೆ ಪರಿಚಯ ಮಾಡಿಕೊಂಡು ಸಲುಗೆ ಬೆಳೆಸಿಕೊಂಡ ಇದ್ದನ್ನೆ ಕಾಯುತಿದ್ದ ಖತರ್ ನಾಕ್ ಅಪರಿಚಿತ ಮಹಿಳೆ ವ್ಯಕ್ತಿಗೆ ಬರೋಬ್ಬರಿ 50…

Read More
Exit mobile version