Headlines

ರಫ಼ಿ ರಿಪ್ಪನ್ ಪೇಟೆ

SSLC ಅಂಕಪಟ್ಟಿಯಲ್ಲಿ ಶಾಲೆಯ ಹೆಸರು ಗೊಂದಲ – ರಾಮಕೃಷ್ಣ ವಿದ್ಯಾಲಯದಲ್ಲಿ ಪೋಷಕರ ದಿಢೀರ್ ಪ್ರತಿಭಟನೆ

SSLC ಅಂಕಪಟ್ಟಿಯಲ್ಲಿ ಶಾಲೆಯ ಹೆಸರು ಗೊಂದಲ – ರಾಮಕೃಷ್ಣ ವಿದ್ಯಾಲಯದಲ್ಲಿ ಪೋಷಕರ ದಿಢೀರ್ ಪ್ರತಿಭಟನೆ ರಿಪ್ಪನ್‌ಪೇಟೆ : ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ಶಾಲೆಯ ಹೆಸರೇ ಬದಲಾಗಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಗಂಭೀರ ಅನಾಹುತ ಉಂಟು ಮಾಡಲಿದೆ ಎಂಬ ಅಸಮಾಧಾನದಿಂದಾಗಿ, ರಿಪ್ಪನ್‌ಪೇಟೆಯ ಶಾರದಾ ರಾಮಕೃಷ್ಣ ವಿದ್ಯಾಲಯದ ವಿರುದ್ಧ ಪೋಷಕರು ಇಂದು ದಿಢೀರ್ ಪ್ರತಿಭಟನೆ ನಡೆಸಿದರು. ಕಳೆದ 2024-25ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ. ಪರೀಕ್ಷಾ ಫಲಿತಾಂಶದ ಬಳಿಕ ನೀಡಲಾಗುತ್ತಿರುವ ವರ್ಗಾವಣೆ ಪತ್ರದಲ್ಲಿ ಶಾರದಾ ರಾಮಕೃಷ್ಣ ವಿದ್ಯಾಲಯದ ಬದಲು ‘ಸರ್ಕಾರಿ ಪದವಿ ಪೂರ್ವ ಕಾಲೇಜು, ರಿಪ್ಪನ್‌ಪೇಟೆ’…

Read More

RIPPONPETE | ಚಾಣಾಕ್ಯ ಬಾರ್‌ನಲ್ಲಿ ಮದ್ಯಪಾನ ವೇಳೆ ವಾಗ್ವಾದ – ಬಿಯರ್ ಬಾಟಲಿಯಿಂದ ಯುವಕನ‌ ಮೇಲೆ ಹಲ್ಲೆ

RIPPONPETE | ಚಾಣಾಕ್ಯ ಬಾರ್‌ನಲ್ಲಿ ಮದ್ಯಪಾನ ವೇಳೆ ವಾಗ್ವಾದ – ಬಿಯರ್ ಬಾಟಲಿಯಿಂದ ಯುವಕನ‌ ಮೇಲೆ ಹಲ್ಲೆ ರಿಪ್ಪನ್‌ಪೇಟೆ : ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿರುವ ಚಾಣುಕ್ಯ ಬಾರ್ ನಲ್ಲಿ ಮದ್ಯಪಾನದ ವೇಳೆ ಇಬ್ಬರ ನಡುವೆ ಉಂಟಾದ ವಾಗ್ವಾದ ಹಲ್ಲೆಗೆ ತಿರುಗಿದ್ದು ಗಲಾಟೆಯಲ್ಲಿ ಯುವಕನೊಬ್ಬನ ಎಡಭಾಗದ ಹಣೆಗೆ ಗಂಭೀರ ಗಾಯಗೊಂಡಿರುವ ಘಟನೆ ಅಕ್ಟೋಬರ್ 26ರ ರಾತ್ರಿ ಸುಮಾರು 9.30ರ ಸುಮಾರಿಗೆ ನಡೆದಿದೆ. ಪಟ್ಟಣದ ಗಾಂಧಿನಗರ ನಿವಾಸಿ ರವಿಕುಮಾರ್ ಎಂಬಾತನಿಗೆ ಗಂಭೀರ ಗಾಯಗೊಂಡಿದ್ದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟಣದ ಬನ್ನಿ…

Read More

ಕೇಬಲ್ ಕಳವು ಮಾಡುತಿದ್ದ ಇಬ್ಬರು ಆರೋಪಿಗಳು ರಿಪ್ಪನ್‌ಪೇಟೆ ಪೊಲೀಸರ ಬಲೆಗೆ

ಕೇಬಲ್ ಕಳವು ಮಾಡುತಿದ್ದ ಇಬ್ಬರು ಆರೋಪಿಗಳು ರಿಪ್ಪನ್‌ಪೇಟೆ ಪೊಲೀಸರ ಬಲೆಗೆ ರಿಪ್ಪನ್‌ಪೇಟೆ : ಇಲ್ಲಿನ ಅರಸಾಳು ಗ್ರಾಮದಲ್ಲಿ ನಡೆದ ಕೇಬಲ್ ಕಳವು ಪ್ರಕರಣದಲ್ಲಿ ಪರಾರಿಯಾಗುತ್ತಿದ್ದ ಇಬ್ಬರು ಆರೋಪಿಗಳನ್ನು ರಿಪ್ಪನ್‌ಪೇಟೆ ಪಿಎಸೈ ರಾಜುರೆಡ್ಡಿ ನೇತ್ರತ್ವದ ಪೊಲೀಸರು ಪತ್ತೆಹಚ್ಚಿ ಬಂಧಿಸಲು ಯಶಸ್ವಿಯಾಗಿದ್ದಾರೆ. ಅರಸಾಳು ಗ್ರಾಮದ ಮಂಜ ಮತ್ತು ನಾಗ ಬಂಧಿತ ಆರೋಪಿಗಳಾಗಿದ್ದಾರೆ. ಅರಸಾಳು ಗ್ರಾಮದಲ್ಲಿ ಹೊಳೆ ಬದಿಯಲ್ಲಿ ಮೋಟಾರ್ ಗಳಿಗೆ ಅಳವಡಿಸುತಿದ್ದ ಕೇಬಲ್ ಗಳನ್ನು ಕದ್ದು ಮಾರುತಿದ್ದ ಆರೋಪಿಗಳು ಅರಸಾಳು ಗ್ರಾಮದಲ್ಲಿ ಸುತ್ತಾಡುತ್ತಿದ್ದ  ಕುರಿತು ಬಂದ ಗುಪ್ತ ಮಾಹಿತಿಯ ಆಧಾರದ…

Read More

HOSANAGARA | ಯೂಟ್ಯೂಬ್ ಜಾಹೀರಾತು ನಂಬಿ 49 ಲಕ್ಷ ಕಳೆದುಕೊಂಡ ಮಹಿಳೆ

HOSANAGARA | ಯೂಟ್ಯೂಬ್ ಜಾಹೀರಾತು ನಂಬಿ 49 ಲಕ್ಷ ಕಳೆದುಕೊಂಡ ಮಹಿಳೆ ಹೊಸನಗರ: ಯೂಟ್ಯೂಬ್‌ನಲ್ಲಿ ಕಂಡ ‘ಹೆಚ್ಚು ಲಾಭಾಂಶ’ದ ಆಮಿಷ ನೀಡಿದ ಹೂಡಿಕೆ ಜಾಹೀರಾತನ್ನು ನಂಬಿ, ಹೊಸನಗರದ ಮಹಿಳೆಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು 49 ಲಕ್ಷ ರೂ.ಗೂ ಹೆಚ್ಚು ಮೊತ್ತ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯ ಹಿನ್ನಲೆ : ಮಹಿಳೆ ಯೂಟ್ಯೂಬ್ ವೀಕ್ಷಿಸುವ ವೇಳೆ ಷೇರು ಮಾರುಕಟ್ಟೆ ಮಾರ್ಗದರ್ಶನ ನೀಡುವುದಾಗಿ ಹೇಳಿಕೊಂಡಿದ್ದ ಜಾಹೀರಾತೊಂದು ತೋರ್ಪಡಿಸಿತು. ಜಾಹೀರಾತಿನ ಕೆಳಗೆ ನೀಡಿದ್ದ ವಾಟ್ಸ್‌ಆ್ಯಪ್ ಗುಂಪಿಗೆ ಸೇರುವ ಲಿಂಕ್‌ನ್ನು…

Read More

ರಸ್ತೇ ಅಪಘಾತ: ಆಟವಾಡುತ್ತಿದ್ದಾಗ ಕಾರು ಡಿಕ್ಕಿ – 2 ವರ್ಷದ ಮಗು ದಾರುಣ ಅಂತ್ಯ

ರಸ್ತೇ ಅಪಘಾತ: ಆಟವಾಡುತ್ತಿದ್ದಾಗ ಕಾರು ಡಿಕ್ಕಿ – 2 ವರ್ಷದ ಮಗು ದಾರುಣ ಅಂತ್ಯ ಶಿವಮೊಗ್ಗ ಜಿಲ್ಲೆಯಲ್ಲಿ ಸಂಭವಿಸಿದ ದುರಂತ ಘಟನೆಯಲ್ಲಿ ಎರಡು ವರ್ಷದ ಬಾಲಕನೊಬ್ಬ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಪ್ರಾಣ ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೋಟೆ ಗಂಗೂರು – ಸಾಗರ ರಸ್ತೆಯ ವಿರುಪಿನಕೊಪ್ಪ ಗ್ರಾಮದಲ್ಲಿ ಈ ಘಟನೆ ಶನಿವಾರ ಸಂಜೆ ನಡೆದಿದೆ. ಷಣ್ಮುಖ ಎಂಬುವವರ ಪುತ್ರ ವಿನಯ್‌ (2) ಮೃತ ದುರ್ದೈವಿ. ಮಗು ಮನೆಯ ಎದುರಿನ ರಸ್ತೆಯ ಬದಿಯಲ್ಲಿ ಆಟವಾಡುತಿದ್ದ…

Read More

15 ದಿನಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ರಸ್ತೆ ಬದಿಯಲ್ಲಿ ಶವವಾಗಿ ಪತ್ತೆ

ಕಾಣೆಯಾದ ವ್ಯಕ್ತಿ ಶವವಾಗಿ ಪತ್ತೆ ಸಾಗರ: ಹಲವು ದಿನಗಳಿಂದ ಕಾಣೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ರಸ್ತೆ ಪಕ್ಕದಲ್ಲಿ ಪತ್ತೆಯಾಗಿರುವ ದುರ್ಘಟನೆ ಬೆಳಕಿಗೆ ಬಂದಿದೆ. ಸಾಗರ ತಾಲೂಕಿನ ಯಲಗಳಲೆ ಗ್ರಾಮದ ಸಮೀಪ ರಸ್ತೆ ಬದಿಯಲ್ಲಿ ಪತ್ತೆಯಾದ ಶವವನ್ನು, ಜಂಬಗಾರು ಗ್ರಾಮದ ಹನುಮಂತಪ್ಪ (65) ಎಂದು ಗುರುತಿಸಲಾಗಿದೆ. ಹನುಮಂತಪ್ಪ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದ್ದು, 15 ದಿನಗಳ ಹಿಂದೆ ಕಾಣೆಯಾಗಿದ್ದಾರೆಂದು ಕುಟುಂಬದವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಲವ್ ಮ್ಯಾರೇಜ್ ಆಗಿ ಎರಡೇ ವರ್ಷಕ್ಕೆ ಗೃಹಿಣಿ ನಿಗೂಢ ಸಾವು –  ನಂಬಿದಾಕೆಗೆ ಚಟ್ಟ ಕಟ್ಟಿದ್ನಾ ಪತಿ?

ಲವ್ ಮ್ಯಾರೇಜ್ ಆಗಿ ಎರಡೇ ವರ್ಷಕ್ಕೆ ಗೃಹಿಣಿ ನಿಗೂಢ ಸಾವು –  ನಂಬಿದಾಕೆಗೆ ಚಟ್ಟ ಕಟ್ಟಿದ್ನಾ ಪತಿ? Housewife mysteriously dies after just two years of love marriage ಇಬ್ಬರು ಪರಸ್ಪರ ಪ್ರೀತಿಸಿ ಎರಡು ವರ್ಷ ಹಿಂದೆ ಅಷ್ಟೇ ಮದುವೆಯಾಗಿದ್ದರು. ಪ್ರೀತಿಯ ಮದುವೆಗೊಂದು ಒಂದೂವರೆ ವರ್ಷದ ಮಗು ಸಹ ಇದೆ. ಸ್ವರ್ಗಕ್ಕೆ ಕಿಚ್ಚು ಹಚ್ಚುವಂಥಾ ಸಂಸಾರ ಇದ್ದಾಗ ಮಹಿಳೆ ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ದಾವಣಗೆರೆ ಜಿಲ್ಲೆಯ ಚನ್ನಗರಿ ತಾಲೂಕಿನ ಹೊನ್ನೆಬಾಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…

Read More

ನಾಪತ್ತೆಯಾದ ವಿದ್ಯಾರ್ಥಿನಿ ಸೌಜನ್ಯ ಕಾಲುವೆಯಲ್ಲಿ ಶವವಾಗಿ ಪತ್ತೆ – ಸಂಚಲನ ಸೃಷ್ಟಿಸಿದ ಸೌಜನ್ಯ ಕೊಲೆ ಪ್ರಕರಣ

ನಾಪತ್ತೆಯಾದ ವಿದ್ಯಾರ್ಥಿನಿ ಸೌಜನ್ಯ ಕಾಲುವೆಯಲ್ಲಿ ಶವವಾಗಿ ಪತ್ತೆ – ಸಂಚಲನ ಸೃಷ್ಟಿಸಿದ ಸೌಜನ್ಯ ಕೊಲೆ ಪ್ರಕರಣ ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ದೀಪಾವಳಿ ಅಮವಾಸ್ಯೆ ದಿನ ಮನೆಯಿಂದ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿ ಶನಿವಾರ ಶವವಾಗಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕೊಡೇಕಲ್‌ ಗ್ರಾಮದ ಶರಣಪ್ಪ ಹಡಪದ ಎಂಬುವರ ಮಗಳು ಸೌಜನ್ಯ (17) ಶಹಾಪೂರ ತಾಲೂಕಿನ ಗೋಗಿ ಬಳಿಯ ಕೃಷ್ಣಾ ಎಡದಂಡೆ ಕಾಲುವೆಯಲ್ಲಿ ಶವ ಪತ್ತೆಯಾಗಿದೆ. ಪಿಯುಸಿ ಓದುತ್ತಿದ್ದ ಸೌಜನ್ಯ ಕೊಡೇಕಲ್ ಗ್ರಾಮದ ನಿವಾಸಿ ಶರಣಪ್ಪ ಹಡಪದ ಪುತ್ರಿ…

Read More

RIPPONPETE | ಪತ್ರಕರ್ತ ಚಿದಾನಂದ ಸ್ವಾಮಿರವರಿಗೆ ಮಾತೃ ವಿಯೋಗ

ಪತ್ರಕರ್ತ ಚಿದಾನಂದ ಸ್ವಾಮಿರವರಿಗೆ ಮಾತೃ ವಿಯೋಗ ರಿಪ್ಪನ್‌ಪೇಟೆ: ಪಟ್ಟಣದಲ್ಲಿ ವಿಜಯವಾಣಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಚಿದಾನಂದ ಸ್ವಾಮಿ ಅವರ ತಾಯಿ ಮುರಿಗೆಮ್ಮ (85) ಅವರು ನಿಧನರಾಗಿದ್ದಾರೆ. ಶಿವಮೊಗ್ಗ ರಸ್ತೆಯ ನಿವಾಸಿಗಿದ್ದ ದಿ. ಗುರುಪಾದಯ್ಯರವರ ಧರ್ಮಪತ್ನಿ ಹಾಗೂ ಪತ್ರಕರ್ತ ಚಿದಾನಂದ ಸ್ವಾಮಿಯವರ ತಾಯಿ ಮುರಿಗೆಮ್ಮ (85) ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಅವರು ಭಾನುವಾರ ಸಂಜೆ ತಮ್ಮ ಸ್ವಗೃಹದಲ್ಲಿ ಲಿಂಗೈಕ್ಯರಾದರು. ಮೃತರು ಪುತ್ರರು, ಸೊಸೆ, ಮಕ್ಕಳು , ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಸಂತಾಪ :ಅಲ್ಪಕಾಲದ ಅನಾರೋಗ್ಯದಿಂದ ಲಿಂಗೈಕ್ಯರಾದ…

Read More

ಮದುವೆಯಾದ 6 ತಿಂಗಳಲ್ಲೇ ನವವಿವಾಹಿತೆ ಬಲಿ – ಕಿರುಕುಳ ಆರೋಪ, ಪತಿ ಬಂಧನ

ಮದುವೆಯಾದ 6 ತಿಂಗಳಲ್ಲೇ ನವವಿವಾಹಿತೆ ಬಲಿ – ಕಿರುಕುಳ ಆರೋಪ, ಪತಿ ಬಂಧನ ಶಿವಮೊಗ್ಗ: ಮದುವೆಯಾದ ಕೇವಲ ೬ ತಿಂಗಳಲ್ಲೇ ನವವಿವಾಹಿತೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಕುರಂಬಳ್ಳಿ ಸಮೀಪದ ಗೂಜಾನುಮಕ್ಕಿಯಲ್ಲಿ ನಡೆದಿದೆ.  ಮೃತ ಗೃಹಿಣಿಯನ್ನು ಸಾಗರ ತಾಲೂಕು ಕಟ್ಟಿನಕಾರು ಗ್ರಾಮದ ಯಡಮನೆ ನಿವಾಸಿ ಮಾಲಾಶ್ರೀ (೨೩) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಪತಿ ಮತ್ತು ಅತ್ತೆಯ ಕಿರುಕುಳವೇ ಕಾರಣ ಎಂದು ಆರೋಪಿಸಲಾಗಿದೆ. ಯಡಮನೆ ಗ್ರಾಮದ ಮಾಲಾಶ್ರೀ ಕುರಂಬಳ್ಳಿಯ ಗೂಜಾನುಮಕ್ಕಿಯ ಅಶೋಕ್ ಎಂಬಾತನೊಂದಿಗೆ ಏಪ್ರಿಲ್…

Read More
Exit mobile version