Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

ಹೊಸನಗರ : ಅಕ್ರಮ ಮರಳು ಸಾಗಾಟ – ಮೂರು ಟಿಪ್ಪರ್ ಲಾರಿ ವಶಕ್ಕೆ|sand mafia

ಹೊಸನಗರ : ಅಕ್ರಮ ಮರಳು ಸಾಗಾಟ – ಮೂರು ಟಿಪ್ಪರ್ ಲಾರಿ ವಶಕ್ಕೆ ಹೊಸನಗರ : ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಅಕ್ರಮವಾಗಿ ಮರಳು ಸಾಗಿಸುತಿದ್ದ ಮೂರು ಟಿಪ್ಪರ್ ಲಾರಿಯನ್ನು ಹೊಸನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೊಸನಗರ ಪೊಲೀಸ್ ಠಾಣೆ ಪಿಎಸ್‌ಐ ಶಿವಾನಂದ್ ಕೆ ನೇತೃತ್ವದ ಸಿಬ್ಬಂದಿಗಳ ತಂಡ ಖಚಿತ ಮಾಹಿತಿಯನ್ನಾಧರಿಸಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮೂರು ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿರುತ್ತಾರೆ. ಪಟಗುಪ್ಪ ಬಳಿಯಲ್ಲಿ ಎರಡು ಟಿಪ್ಪರ್ ಲಾರಿ ಹಾಗೂ ಸೊನಲೆ ಗ್ರಾಮದಲ್ಲಿ ಒಂದು ಟಿಪ್ಪರ್ ಲಾರಿಯನ್ನು…

Read More

ಖಾಸಗಿ ಬಸ್ – ಕಾರಿನ ನಡುವೆ ಅಪಘಾತ : ಕಾರಿನೊಳಗೆ ಸಿಲುಕಿಕೊಂಡ ಚಾಲಕ|accident

ಖಾಸಗಿ ಬಸ್ – ಕಾರಿನ ನಡುವೆ ಅಪಘಾತ  ಶಿವಮೊಗ್ಗ : ಗಾಜನೂರು ಸಮೀಪ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ್ದು ಬಸ್ ಮುಂಭಾಗ ಹಾಗೂ ಕಾರು ನುಜ್ಜುಗುಜ್ಜಾಗಿದೆ. ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಹಾಗೂ ತೀರ್ಥಹಳ್ಳಿ ಕಡೆ ಬರುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದ್ದು ಈ ಅಪಘಾತದಲ್ಲಿ ಕಾರು ಚಾಲಕ ಕಾರಿನಿಂದ ಹೊರಬರಲು ಸಾಧ್ಯವಾಗದೇ ಸಿಲುಕಿಕೊಂಡಿದ್ದರು. ಈ ಸಂಧರ್ಭದಲ್ಲಿ ಸ್ಥಳೀಯರ ಸಹಕಾರದಿಂದ ಕಾರು ಚಾಲಕನನ್ನು ಹೊರ ತೆಗೆಯಲಾಗಿದೆ.ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು…

Read More

ಮೂಗೂಡ್ತಿಯಲ್ಲಿ ಪೋಷಣ್ ಅಭಿಯಾನ್ ಮಾಸಾಚರಣೆ|rpt news

“ಹಣ್ಣು ಹಸಿ ತರಕಾರಿ ಸೇವನೆಯಿಂದ ಗರ್ಭೀಣಿಯರಲ್ಲಿ ರಕ್ತಹೀನತೆ ದೂರ’’ ರಿಪ್ಪನ್‌ಪೇಟೆ : ರಕ್ತಹೀನತೆಯಿಂದ ಬಳಲುವ ಗರ್ಭೀಣಿಯರು ಸೇರಿದಂತೆ ಇತರೆ ಎಲ್ಲರೂ ಪಾಷ್ಟಿಕಾಂಶದ ಹಣ್ಣು ಹಸಿ ತರಕಾರಿ ಸೇವಿಸುವುದರಿಂದ ಉತ್ತಮ ಅರೋಗ್ಯದಿಂದ ಇರುವುದರೊಂದಿಗೆ ರಕ್ತ ಹೀನತೆಯಿಂದ ಮುಕ್ತರಾಗಲು ಸಾಧ್ಯವೆಂದು ಹೊಸನಗರ ತಾಲ್ಲೂಕ್ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಯ ಆಧಿಕಾರಿ ಶಶಿರೇಖಾ ಕರೆ ನೀಡಿದರು. ಪಟ್ಟಣದ ಸಮೀಪದ ಮೂಗುಡ್ತಿ ಆಂಗನವಾಡಿ ಕೇಂದ್ರದಲ್ಲಿ ಅಯೋಜಿಸಲಾದ ಪೋಷಣ್ ಆಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ರೈತರು ರಾಸಾಯನಿಕ ಗೊಬ್ಬರ…

Read More

ರಿಪ್ಪನ್‌ಪೇಟೆ : ಗಣೇಶನ ಸಮ್ಮುಖದಲ್ಲಿ ಭಕ್ತಾಕರ್ಷಣೆಗೊಂಡ ಕೋಲಾಟ ನೃತ್ಯ ಪ್ರದರ್ಶನ|Rpet news

ಗಣೇಶನ ಸಮ್ಮುಖದಲ್ಲಿ ಭಕ್ತಾಕರ್ಷಣೆಗೊಂಡ ಕೋಲಾಟ ನೃತ್ಯ ಪ್ರದರ್ಶನ ರಿಪ್ಪನ್‌ಪೇಟೆ;-ಗ್ರಾಮೀಣ ಪ್ರದೇಶದಲ್ಲಿ ಹಾಸುಹೊಕ್ಕಾಗಿರುವ ಜಾನಪದ ಕಲೆಗಳಲ್ಲಿ ಒಂದಾದ ವಿವಿಧ ಭಂಗಿಯ ಕೋಲಾಟ ಪ್ರದರ್ಶನವು ಭಕ್ತಾಕರ್ಷಣೆಗೊಂಡಿತು. ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದು ಮಹಾಸಭಾದ 56 ನೇ ವರ್ಷದ ಗಣೇಶೋತ್ಸವ ಸಮಿತಿಯವರು ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಆಯೋಜಿಸಲಾದ ಬಳೆಕೋಲಾಟ ಪ್ರದರ್ಶನದಲ್ಲಿ ಕೆದಲುಗುಡ್ಡೆ ಮತ್ತು ಚಿಪ್ಪಿಳ್ಳಿ ಕೋಲಾಟ ತಂಡದವರ ಜಡೆ ಕೋಲಾಟ ಪ್ರದರ್ಶನ ಜನಾಕರ್ಷಣೆಗೊಂಡಿತು. ಹಿಂದೂ ಮಹಾಸಭಾ ಕಟ್ಟಡ ಸಮಿತಿಯ ಅಧ್ಯಕ್ಷ ಎಂ.ಬಿ.ಮಂಜುನಾಥ ಮಾತನಾಡಿ ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನು ಉಳಿಸಿ ಪ್ರೋತ್ಸಾಹಿಸುವ…

Read More

ಹೊಸ ಕಲ್ಲುಕ್ವಾರೆಗೆ ಅವಕಾಶ ಬೇಡ : ಎಸಿಗೆ ಮನವಿ|iruvakki

ಹೊಸ ಕಲ್ಲುಕ್ವಾರೆಗೆ ಅವಕಾಶ ಬೇಡ; ಎಸಿಗೆ ಮನವಿ ಸಾಗರ : ತಾಲ್ಲೂಕಿನ ಇರುವಕ್ಕಿ ಆಸುಪಾಸು ಹೊಸ ಕಲ್ಲುಕ್ವಾರೆಗೆ ಅವಕಾಶ ನೀಡದಂತೆ ಗ್ರಾಮಸ್ಥರು ಶಾಸಕ ಗೋಪಾಲಕೃಷ್ಣ ಬೇಳೂರಿಗೆ ಹಾಗೂ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.  ಇರುವಕ್ಕಿ ಗ್ರಾಮದ ಸ.ನಂ. 30 ಮತ್ತು 31ರಲ್ಲಿ ಹೊಸ ಕಲ್ಲುಕ್ವಾರೆ ಪ್ರಾರಂಭಿಸುವ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಕಲ್ಲುಕ್ವಾರೆಗೆ ಪ್ರಸ್ತಾಪಿಸಿರುವ ಜಾಗದ ವ್ಯಾಪ್ತಿಯಲ್ಲಿಯೆ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಬರುತ್ತದೆ. ಶರಾವತಿ ನದಿಯ ಉಪನದಿಯ ದಂಡೆ ಇದಾಗಿದ್ದು, ಕೃಷಿಗೆ ನೀರು…

Read More

ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು|fire

ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು ತೀರ್ಥಹಳ್ಳಿ:  ಕಾರೊಂದು ನಡು ರಸ್ತೆಯಲ್ಲಿ ಹೊತ್ತಿ ಉರಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ತಾಲ್ಲೂಕಿನ ಮಂಡಗದ್ದೆಯ 15 ನೇಮೈಲಿಕಲ್ಲಿನ ಸಮೀಪ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಕಾರು ಸಂಪೂರ್ಣ ಸುಟ್ಟುಹೋಗಿದೆ. ರಾತ್ರಿ 11.30 ರ ಸುಮಾರಿಗೆ ಘಟನೆ ನಡೆದಿದ್ದು, ಸ್ಥಳೀಯರು ಹಾಗೂ ಅದೇ ಮಾರ್ಗವಾಗಿ ಹೋಗುತ್ತಿದ್ದ ವಾಹನ ಸವಾರು ಕಾರಿಗೆ ಬೆಂಕಿ ಬಿದ್ದು ಉರಿಯುತ್ತಿರುವುದನ್ನ ಗಮನಿಸಿದ್ದಾರೆ. ನಂತರ ಅಗ್ನಿಶಾಮಕ ಸಿಬ್ಬಂದಿ ಶಿವಮೊಗ್ಗದಿಂದ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ. ಆದರೆ ಕಾರು ಯಾರದ್ದು…

Read More

ರಿಪ್ಪನ್‌ಪೇಟೆ : ಅನಾಥ ನಾಯಿ ಮರಿಗಳ ಆರೈಕೆ – ಮಾನವೀಯತೆ ಮೆರೆದ ಪಶು ಪರಿವೀಕ್ಷಕ|rpet

ಮಾನವೀಯತೆ ಮೆರೆದ  ಪಶು ಪರಿವೀಕ್ಷಕ ವಿ ರಂಗಪ್ಪ ರಿಪ್ಪನ್ ಪೇಟೆ : ಪೊದೆಯೊಂದರಲ್ಲಿ ಐದು ಮರಿಗಳಿಗೆ ಜನ್ಮವಿತ್ತ ಬೀದಿ ನಾಯಿ  ಮೂರು ದಿನಗಳ ಒಳಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿತ್ತು.ಇನ್ನೂ ಕಣ್ಣು ಬಿಡದ ಆ ಮರಿಗಳಿಗೆ ಹಾಲುಣಿಸುವ ತಾಯಿ ಬಾರದಿದ್ದಾಗ ಹಸಿವಿನಿಂದ ಕಂಗೆಟ್ಟು ತೀರಾ ಹಠ ಮಾಡುವುದನ್ನು ಕಂಡು ದಾರಿ ಹೋಕರು ಗಮನಿಸಿ ಪಟ್ಟಣದ ಪಶು ವೈದ್ಯಕೀಯ ಪರಿವೀಕ್ಷಕ ವಿ ರಂಗಪ್ಪ ಅವರ ಗಮನಕ್ಕೆ ತಂದರು. ದಿಕ್ಕಿಲ್ಲದ ಆ ಐದು ಮರಿಗಳನ್ನು ಆಸ್ಪತ್ರೆಗೆ ತಂದು ರಟ್ಟಿನ ಬಾಕ್ಸ್ ನಲ್ಲಿ …

Read More

ವಾಲಿಬಾಲ್ ಪಂದ್ಯಾವಳಿಯಲ್ಲಿ ರಿಪ್ಪನ್ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ|volleyball

ವಾಲಿಬಾಲ್ ಪಂದ್ಯಾವಳಿಯಲ್ಲಿ ರಿಪ್ಪನ್ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ರಿಪ್ಪನ್ ಪೇಟೆ :- ಶಿವಮೊಗ್ಗ ಜಿಲ್ಲಾ ಮಟ್ಟದ  ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ರಿಪ್ಪನ್ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹೊಸನಗರ ತಾಲೂಕು ಮಟ್ಟದಿಂದ ಶಿವಮೊಗ್ಗ ಜಿಲ್ಲಾ ಮಟ್ಟಕ್ಕೆ ಅರ್ಹತೆ ಪಡೆದು  ವಾಲಿಬಾಲ್ ಪಂದ್ಯಾವಳಿಯಲ್ಲಿ ಬಾಲಕರು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದು ಮೂವರು ಆಟಗಾರರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ….

Read More

ಐವರಿಗೆ ಚಾಕು ಇರಿತ ಪ್ರಕರಣ: 9 ಮಂದಿ ಆರೋಪಿಗಳ ಬಂಧನ

ಐವರಿಗೆ ಚಾಕು ಇರಿತ ಪ್ರಕರಣ: 9 ಮಂದಿ ಆರೋಪಿಗಳ ಬಂಧನ ಶಿವಮೊಗ್ಗ ನಗರದ ಆಲ್ಕೋಳ ಬಳಿಯಲ್ಲಿ ನಡೆದಿದ್ದ ಹಲ್ಲೆ, ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಭತ್ತು ಮಂದಿ ಆರೋಪಿಗಳನ್ನು ರವಿವಾರ ಪೊಲೀಸರು ಬಂಧಿಸಿದ್ದಾರೆ. ಪವನ್ , ಮಂಜುನಾಥ್, ಚಂದನ್, ರಂಗನಾಥ್, ಮನೋಜ್, ಶ್ರೀನಿವಾಸ್, ರಾಜಶೇಖರ್, ವಿಶ್ವನಂದನ್, ಶ್ಯಾಮ್ ರಾಬಿನ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಪವನ್‌ ಮತ್ತು ಕಿರಣ್‌ ಎಂಬ ಸ್ನೇಹಿತರ ಮಧ್ಯೆ ವೈಷಮ್ಯವಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಗುರುವಾರ ರಾತ್ರಿ ನೇತಾಜಿ ಸರ್ಕಲ್‌ನಲ್ಲಿ ಗಲಾಟೆಯಾಗಿತ್ತು….

Read More

ಈಜಲು ತೆರಳಿದ್ದ ಕೃಷಿ ಅಧಿಕಾರಿ ಹಾಗೂ ಬ್ಯಾಂಕ್ ಉದ್ಯೋಗಿ‌ ನೀರಿನಲ್ಲಿ ಮುಳುಗಿ ಸಾವು|sagar news

ದೇವಿಗುಂಡಿಯಲ್ಲಿ ನೀರಿನಲ್ಲಿ ಮುಳುಗಿ ಕೃಷಿ ಅಧಿಕಾರಿ ಹಾಗೂ ಬ್ಯಾಂಕ್ ಉದ್ಯೋಗಿ‌ ಸಾವು ಸಾಗರ : ಈಜಲು ತೆರಳಿದ್ದ ಇಬ್ಬರು ನೀರು ಪಾಲಾಗಿರುವ ಘಟನೆ ಸಾಗರ ತಾಲೂಕಿನ ವಡನ್ ಬೈಲ್ ಬಳಿಯ ದೇವಿಗುಂಡಿಯಲ್ಲಿ ಭಾನುವಾರ ನಡೆದಿದೆ.  ಕೃಷಿ ಅಧಿಕಾರಿ ಕುಮಾರ್, ಐಡಿಎಫ್‌ಸಿ ಬ್ಯಾಂಕ್ ಉದ್ಯೋಗಿ ಅರುಣ್ ಮೃತರು. ಮೃತರು ವಡನ್ ಬೈಲ್ ಸಮೀಪದ ದೇವಿಗುಂಡಿಗೆ ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದರು. ಮಧ್ಯಾಹ್ನ ಊಟ ಮುಗಿಸಿದ ನಂತರ ಈಜಲು ತೆರಳಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.  ಇಬ್ಬರ ಶವವನ್ನು…

Read More
Exit mobile version