Headlines

Hosanagara | ಆಕಸ್ಮಿಕ ಬೆಂಕಿ ತಗುಲಿ ಹುಲ್ಲಿನ ಬಣವೆ ಸುಟ್ಟು ಭಸ್ಮ

Hosanagara | ಆಕಸ್ಮಿಕ ಬೆಂಕಿ ತಗುಲಿ ಹುಲ್ಲಿ ಬಣವೆ ಸುಟ್ಟು ಭಸ್ಮ

ಹೊಸನಗರ ತಾಲೂಕಿನ ಮಾರುತಿಪುರ ಗ್ರಾಪಂ ವ್ಯಾಪ್ತಿಯ ಸೋರೆಕೊಪ್ಪ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಕೊಟ್ಟಿಗೆ ಮನೆಯಲ್ಲಿದ್ದ 600 ಕ್ಕೂ ಹೆಚ್ಚು ಹುಲ್ಲು ಹೊರೆಗಳು ಸುಟ್ಟು ಹೋಗಿವೆ.


ಸೋರೆಕೊಪ್ಪ ನೆಲಗಳಲೆ ಗ್ರಾಮದ ಕೃಷಿಕ ಸಂತೋಷ್ ಎಂಬುವವರಿಗೆ ಸೇರಿದ ಕೊಟ್ಟಿಗೆ ಮನೆಯಲ್ಲಿ ಬೆಂಕಿ ಕಾಣಿಸಿ ಕೊಂಡಿದೆ. ಬಳಿಕ ಕೆಲವೇ ಕ್ಷಣಗಳಲ್ಲಿ ಬೆಂಕಿ ಕೆನ್ನಾಲಿಗೆ 600 ಕ್ಕೂ ಹೆಚ್ಚು ಹುಲ್ಲು ಹೊರೆಗಳು ಸುಟ್ಟು ಭಸ್ಮವಾಗಿದೆ.


ತಕ್ಷಣ ಸ್ಥಳೀಯರ ಪ್ರಯತ್ನದಿಂದ ಬೆಂಕಿ ನಂದಿಸಲಾಯಿತಾದರೂ ಹುಲ್ಲು ಹೊರೆಗಳು ಬೆಂಕಿಗೆ ಅಹುತಿಯಾಗಿದೆ.

ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

About The Author

Leave a Reply

Your email address will not be published. Required fields are marked *

Exit mobile version