Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

BIG NEWS | ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಆಯ್ಕೆ

BIG NEWS | ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಆಯ್ಕೆ ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ಪುತ್ರ ಹಾಗೂ ಶಿಕಾರಿಪುರ ಶಾಸಕರಾದ ಬಿವೈ ವಿಜಯೇಂದ್ರ ಅವರನ್ನು ಶುಕ್ರವಾರ ಬಿಜೆಪಿ ಹೈಕಮಾಂಡ್‌ ಆಯ್ಕೆ ಮಾಡಿದೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜಗತ್ ಪ್ರಕಾಶ್ ನಡ್ಡಾ ಅವರು ವಿಜಯೇಂದ್ರ ಅವರನ್ನು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ದೀಪಾವಳಿಗೆ ಮುನ್ನವೇ ಬಿಜೆಪಿ ಹೈಕಮಾಂಡ್‌ ರಾಜ್ಯ ಬಿಜೆಪಿ ಮತ್ತು ಬಿಎಸ್‌ವೈ…

Read More

Ripponpet | ತಾಯಿಯಿಂದಲೇ ಹೆತ್ತಮಕ್ಕಳನ್ನು ಬಿಕ್ಷಾಟನೆಗೆ ಬಳಕೆ – ಪಟ್ಟಣದಲ್ಲೊಂದು ಮನಕಲಕುವ ಘಟನೆ

Ripponpet | ತಾಯಿಯಿಂದಲೇ ಹೆತ್ತಮಕ್ಕಳನ್ನು ಬಿಕ್ಷಾಟನೆಗೆ ಬಳಕೆ – ಠಾಣೆಗೆ ಕರೆಸಿ ವಾರ್ನಿಂಗ್ ನೀಡಿದ ಪಿಎಸ್‌ಐ ಪ್ರವೀಣ್  ರಿಪ್ಪನ್‌ಪೇಟೆ;-ಇಲ್ಲಿನ ಶಿವಮೊಗ್ಗ ರಸ್ತೆಯ ಖಾಸಗಿ ಶ್ರೀನಂದಿ ಆಸ್ಪತ್ರೆಯ ಎದುರಿನಲ್ಲಿ ಹೆತ್ತಮಕ್ಕಳಿಗೆ ಬೀಕ್ಷಾಟನೆ ಮಾಡುವಂತೆ ಮಕ್ಕಳ ಕೈಗೆ ತಟ್ಟೆಕೊಟ್ಟು ಬಲತ್ಕಾರದಿಂದ ಬಿಕ್ಷೆ ಬೇಡುವಂತೆ ತಾಯಿಯೇ ಮಕ್ಕಳನ್ನು ಬಿಕ್ಷಾಟನೆಗೆ ಬಳಸುತಿದ್ದ ಘಟನೆಗೆ ಪಟ್ಟಣದ ಪಿಎಸ್‌ಐ ತಾಯಿಗೆ ವಾರ್ನಿಂಗ್ ಕೊಟ್ಟು ಕಳಿಸಿದ ಘಟನೆ ನಡೆದಿದೆ. ಇಂದು ಬೆಳಿಗ್ಗೆ ಪಟ್ಟಣದ ನಂದಿ ಆಸ್ಪತ್ರೆಯ ಮುಂಭಾಗದಲ್ಲಿ ತಾಯಿಯೇ ಮಕಕ್ಳನ್ನು ಭಿಕ್ಷಾಟನೆಗೆ ಅಣಿಗೊಳಿಸುತ್ತಿರುವುದನ್ನು ಸೂಕ್ಷö್ಮವಾಗಿ ಗಮನಿಸಿದ ಸಾಮಾಜಿಕ…

Read More

Accident | ತ್ಯಾವರೆಕೊಪ್ಪದ ಬಳಿ ಕಾರು ಪಲ್ಟಿ

Accident | ತ್ಯಾವರೆಕೊಪ್ಪದ ಬಳಿ ಕಾರು ಪಲ್ಟಿ ಶಿವಮೊಗ್ಗ : ಇಲ್ಲಿನ ತ್ಯಾವರೆಕೊಪ್ಪದ ಲಯನ್ ಸಫಾರಿ ಸಮೀಪ ಕಾರೊಂದು ಪಲ್ಟಿಯಾಗಿ ನಡು ರಸ್ತೆಯಲ್ಲಿ ಉಲ್ಟಾ ನಿಂತಿರುವ ಘಟನೆ ಸಂಭವಿಸಿದೆ.  ಸಾಗರ ಕಡೆಗೆ ಹೋಗುತ್ತಿದ್ದ ವೇಳೆ ಮಾರುತಿ ಸ್ವಿಫ್ಟ್ ಕಾರು ಪಲ್ಟಿಯಾಗಿದೆ. ಘಟನೆಯಲ್ಲಿ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಅಲ್ಲದೆ ಉಲ್ಟಾ ಆಗಿ ಕಾರು ನಡುರಸ್ತೆಯಲ್ಲಿ ನಿಂತಿತ್ತು.  ಘಟನೆಯ ಯಾವಾಗ ಆಯ್ತು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ.  ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.

Read More

Ripponpet|ಅರಸಾಳು ಗ್ರಾಪಂ ಮಾಜಿ ಅಧ್ಯಕ್ಷ ಉಮಾಕರ್ ರವರಿಗೆ ಮಾತೃ ವಿಯೋಗ

ರಿಪ್ಪನ್‌ಪೇಟೆ – ಇಲ್ಲಿನ ಅರಸಾಳು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಉಮಾಕರ್ ಕಾನುಗೋಡು ರವರ ತಾಯಿ ಮಂಜಮ್ಮ(66) ಗುರುವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗುರುವಾರ ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಶಿವಮೊಗ್ಗದ ನಂಜಪ್ಪ ಲೈಫ಼್ ಕೇರ್ ಗೆ ಕರೆದೊಯ್ಯಲಾಗಿತ್ತು ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮಂಜಮ್ಮ ಮೃತಪಟ್ಟಿದ್ದಾರೆ. ಮೃತರು ಉಮಾಕರ್ ಕಾನುಗೋಡು ಸೇರಿದಂತೆ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಇಂದು ಸಂಜೆ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Read More

Ripponpet | ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಏನು ಗೊತ್ತಾ ..?? ಈ ಸುದ್ದಿ ನೋಡಿ

ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಏನು ಗೊತ್ತಾ ..?? ಈ ಸುದ್ದಿ ನೋಡಿ ರಿಪ್ಪನ್‌ಪೇಟೆ : ಇತ್ತೀಚೆಗೆ ರಾಜ್ಯಾದ್ಯಂತ ಸುದ್ದಿಯಾಗಿದ್ದ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರಕಿದ್ದು ದೂರುದಾರರ ಮೇಲೆಯೇ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ. ಕಳೆದ ಕೆಲವು ದಿನಗಳ ಹಿಂದೆ ರಿಪ್ಪನ್‌ಪೇಟೆಯ ಶ್ವೇತಾ ಎನ್ನುವವರ ಮೇಲೆ ಪಟ್ಟಣದ ಠಾಣೆಯಲ್ಲಿ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದಾರೆಂಬ ಆರೋಪದ…

Read More

Accident | ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಗದ್ದೆಗೆ ಉರುಳಿದ ಖಾಸಗಿ ಬಸ್

Accident | ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಗದ್ದೆಗೆ ಉರುಳಿದ ಖಾಸಗಿ ಬಸ್ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ಬೂರಿನ ಸಮೀಪದ ಅರಹತೊಳಲು ಕಲ್ಲಿಹಾಳಿನ ನಡುವೆ ಖಾಸಗೀ ಬಸ್‌ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗದ್ದೆಯಲ್ಲಿ ಉರುಳಿ ಬಿದ್ದಿರುವ ಘಟನೆ ನಡೆದಿದೆ. ಬಸ್‌ನಲ್ಲಿ ಆರು ಜನ ಪ್ರಯಾಣಿಕರು ಇದ್ದು ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮಾರಶೆಟ್ಟಿಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಬಸ್ ಚಾಲಕ ಪೋನ್‌ನಲ್ಲಿ ಮಾತನಾಡಿಕೊಂಡು ಬಸ್ ಚಲಾಯಿಸುತ್ತಿದ್ದ, ಚಾಲಕನ ಅಜಾಗರೂಕತೆಯಿಂದ ಬಸ್…

Read More

ಚಿಕ್ಕಮ್ಮನ ಕುತ್ತಿಗೆ ಬಿಗಿದು ಮಾಂಗಲ್ಯ ಸರ ಕಳ್ಳತನವೆಸಗಿದ್ದ ಆರೋಪಿಯನ್ನು 24 ಗಂಟೆಯಲ್ಲಿ ಬಂಧಿಸಿದ ಪೊಲೀಸ್

ಚಿಕ್ಕಮ್ಮನ ಕುತ್ತಿಗೆ ಬಿಗಿದು ಮಾಂಗಲ್ಯ ಸರ ಕಳ್ಳತನವೆಸಗಿದ್ದ ಆರೋಪಿಯನ್ನು 24 ಗಂಟೆಯಲ್ಲಿ ಬಂಧಿಸಿದ ಪೊಲೀಸ್ ಭದ್ರಾವತಿ : ಚಿಕ್ಕಮ್ಮನ ಕೊರಳಿಗೆ ಟವಲ್ ಬಿಗಿದು ಮಾಂಗಲ್ಯ ಸರ ಕದ್ದಿದ್ದ ಆರೋಪಿಯನ್ನ ಕೇವಲ 24ಗಂಟೆಯೊಳಗೆ ಬಂಧಿಸುವಲ್ಲಿ ನ್ಯೂಟೌನ್ ಪೊಲೀಸರುಯಶಸ್ವಿಯಾಗಿದ್ದಾರೆ. ಆತನಿಂದ 4,50,000/- ರು. ಮೌಲ್ಯದ 88 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಭದ್ರಾವತಿ ನ್ಯೂಟೌನ್ ವ್ಯಾಪ್ತಿಯ, ಕಡದಕಟ್ಟೆಯಲ್ಲಿ, ಕಳೆದ 18 ವರ್ಷಗಳಿಂದ, ವಿಧವೆಯೊಬ್ಬರು, ತಮ್ಮ ಮಕ್ಕಳೊಂದಿಗೆ ವಾಸವಾಗಿದ್ದಾರೆ. ದಿನಾಂಕ 6-11-2023ರಂದು ಬೆಳಿಗ್ಗೆ 10-30ಗಂಟೆಯಲ್ಲಿ, ಈಕೆಯ ಮಕ್ಕಳು ಜಮೀನಿಗೆ…

Read More

ಅರಸಾಳು ಮಾಲ್ಗುಡಿಯಲ್ಲಿ ಆಟೋ ರಾಜ ಶಂಕರ್ ನಾಗ್ ಹುಟ್ಟುಹಬ್ಬ ಆಚರಣೆ|shankarnag

ಕನ್ನಡ ಚಲನಚಿತ್ರ ರಂಗದ ಪ್ರತಿಭಾವಂತ ನಟ ಹಾಗೂ ನಿರ್ದೇಶಕ ದಿ|| ಶಂಕರ್ ನಾಗ್ ರವರ 66 ನೇ ಹುಟ್ಟುಹಬ್ಬ ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಮದ ಮಾಲ್ಗುಡಿ ಡೇಸ್ ಆವರಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಅರಸಾಳು ಮಾಲ್ಗುಡಿ ಡೇಸ್ ರೈಲ್ವೆ ನಿಲ್ದಾಣದ ಆವರಣದಲ್ಲಿ ಶಂಕರ್ ನಾಗ್ ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು,  ಕನ್ನಡಾಭಿಮಾನಿಗಳು ಹಾಗೂ ಶಂಕರ್ ನಾಗ್ ಅಭಿಮಾನಿಗಳು ಶಂಕರ್ ನಾಗ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಂತರ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಈ…

Read More

ಶರಾವತಿ ನದಿ ತೀರದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 150 ಟನ್ ಮರಳು ವಶಕ್ಕೆ

ಶರಾವತಿ ನದಿ ತೀರದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 150 ಟನ್ ಮರಳು ವಶಕ್ಕೆ ಹೊಸನಗರ: ತಾಲೂಕಿನ ಪುರಪ್ಪೇಮನೆ ನದಿ ತೀರದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 150 ಟನ್ ಮರಳನ್ನು ಪೊಲೀಸ್ ಇಲಾಖೆ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪುರಪ್ಪೆಮನೆಯ ನದಿ ತೀರದಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಪೊಲೀಸರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಪುರಪ್ಪೆಮನೆಯ ನದಿಯ ತೀರಕ್ಕೆ ದಾಳಿ ನಡೆಸಿ ಅಕ್ರಮ…

Read More

Arasalu |ನಾಳೆ ಅರಸಾಳಿನ ಮಾಲ್ಗುಡಿಯಲ್ಲಿ ಶಂಕರ್ ನಾಗ್ ಹುಟ್ಟುಹಬ್ಬ ಆಚರಣೆ

Arasalu |ನಾಳೆ ಅರಸಾಳಿನ ಮಾಲ್ಗುಡಿ ಡೇಸ್ ನಲ್ಲಿ ಶಂಕರ್ ನಾಗ್ ಹುಟ್ಟುಹಬ್ಬ ಆಚರಣೆ ಕನ್ನಡ ಚಲನಚಿತ್ರ ರಂಗದ ಪ್ರತಿಭಾವಂತ ನಟ ಹಾಗೂ ನಿರ್ದೇಶಕ ದಿ|| ಶಂಕರ್ ನಾಗ್ ರವರ 69 ನೇ ಹುಟ್ಟುಹಬ್ಬ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಗುರುವಾರ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಮದ ಮಾಲ್ಗುಡಿ ಡೇಸ್ ನಲ್ಲಿ ಆಯೋಜಿಸಲಾಗಿದೆ ಎಂದು ಶಂಕರ್ ನಾಗ್ ಅಭಿಮಾನಿ ಸಂಘದ ಅಧ್ಯಕ್ಷ ಸತೀಶ್ ಹೆಗಡೆ ಪತ್ರೀಕಾ ಹೇಳಿಕೆಯಲ್ಲಿ ತಿಳಿಸಿದರು.  ದಿನಾಂಕ 09-11-23 ರಂದು ಬೆಳಿಗ್ಗೆ 10.30…

Read More