POSTMAN NEWS

ನೈಜ ಸುದ್ದಿ ನೇರ ಬಿತ್ತರ..

Ripponpete | ವಡಗೆರೆ ಶಾಲೆ ಬಳಿ ಬೈಕ್ ಅಪಘಾತ – ಯುವಕ ಸ್ಥಳದಲ್ಲೇ ಸಾವು

ವಡಗೆರೆ ಶಾಲೆ ಬಳಿ ಬೈಕ್ ಅಪಘಾತ – ಯುವಕ ಸ್ಥಳದಲ್ಲೇ ಸಾವು


ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ವಡಗೆರೆ ಶಾಲೆಯ ಮುಂಭಾಗದಲ್ಲಿ  ಬೈಕ್ ಅಪಘಾತವಾಗಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.


ಮೃತ ಯುವಕನನ್ನು ಆವಿನಹಳ್ಳಿ ಸಮೀಪದ ಗುರುವಂತೆ ಗ್ರಾಮದ ನವೀನ್ ಕುಮಾರ್ ಜಿ ಕೆ ಎಂದು ಆತನ ಡ್ರೈವಿಂಗ್ ಲೈಸೆನ್ಸ್ ಆಧಾರದ ಮೇಲೆ ಗುರುತಿಸಲಾಗಿದೆ.

ಆನಂದಪುರ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಬರುತಿದ್ದ ಬೈಕ್ ನಡು ರಸ್ತೆಯಲ್ಲಿ ಅಪಘಾತವಾಗಿ ಯುವಕನ ತಲೆ ರಸ್ತೆಗೆ ಅಪ್ಪಳಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಬೈಕ್ ಗೆ ಕಾರೊಂದು ಹಿಂಬದಿಯಿಂದ ಗುದ್ದಿದೆ ಎಂದು ನೆರೆದಿರುವ ಜನರು ಹೇಳುತಿದ್ದು ಇನ್ನೂ‌ ಮಾಹಿತಿ ಸ್ಪಷ್ಟವಾಗಿಲ್ಲ ಅಪಘಾತಕ್ಕೆ ನಿಖರವಾದ ಕಾರಣ ಇನ್ನಷ್ಟೇ ತಿಳಿದುಬರಬೇಕಾಗಿದೆ.


ಸ್ಥಳಕ್ಕೆ ರಿಪ್ಪನ್‌ಪೇಟೆ ಪೊಲೀಸರು ತೆರಳಿದ್ದು ಪರಿಶೀಲನೆ ನಡೆಸುತಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.