Ripponpete | ಅನ್ನದಾತರ ಮೇಲೆ ಅರಣ್ಯಾಧಿಕಾರಿಗಳ ದಬ್ಬಾಳಿಕೆ – ಅಧಿಕಾರಿಗಳ ವಿರುದ್ದ ಕೆಂಡಮಂಡಲರಾದ ವೀರೇಶ್ ಆಲುವಳ್ಳಿ
ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಸಮೀಪದ ಹಾರಂಬಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಅವೈಜ್ಞಾನಿಕವಾಗಿ EPT ಟ್ರಂಚ್ ತೆಗೆಯುತ್ತಿರುವ ಹಿನ್ನಲೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ವೀರೇಶ್ ಆಲುವಳ್ಳಿ ಸ್ಥಳಕ್ಕೆ ತೆರಳಿ ಅರಣ್ಯಾಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿರುವ ಘಟನೆ ನಡೆದಿದೆ.
ಹಾರಂಬಳ್ಳಿ ಗ್ರಾಮದಲ್ಲಿ ರೈತರು ಉಳುಮೆ ಮಾಡುತ್ತಿರುವ ಖಾತೆ ಜಾಗದಲ್ಲಿ EPT ಟ್ರಂಚ್ ಹೊಡೆಯಲಾಗುತ್ತಿದ್ದ ಹಿನ್ನಲೆಯಲ್ಲಿ ಸ್ಥಳಕ್ಕೆ ತೆರಳಿ ಕಾಮಗಾರಿ ನಿಲ್ಲಿಸುವಂತೆ ಪಟ್ಟು ಹಿಡಿದ ವೀರೇಶ್ ಆಲುವಳ್ಳಿ ಕಾಮಗಾರಿ ನಿಲ್ಲಿಸಿದ್ದರು ಈ ಸಂಧರ್ಭದಲ್ಲಿ ವಲಯ ಅರಣ್ಯಾಧಿಕಾರಿ ಹಾಗೂ ವೀರೇಶ್ ಆಲುವಳ್ಳಿ ನಡುವೆ ಮಾತಿನ ಚಕಮಕಿ ನಡೆಯಿತು.
ನಂತರ ರೈತರು ಉಳುಮೆ ಮಾಡುತ್ತಿರುವ ಜಾಗದಲ್ಲಿ ಟ್ರಂಚ್ ಹೊಡೆಯುವುದಿಲ್ಲ ಎಂಬ ಅರಣ್ಯಾಧಿಕಾರಿಗಳ ಭರವಸೆ ಮೇರೆಗೆ ಕಾಮಗಾರಿ ನಡೆಸಲು ಅನುವು ಮಾಡಿಕೊಡಲಾಯಿತು.
ಈ ಸಂಧರ್ಭದಲ್ಲಿ ಜಿಪಂ ಮಾಜಿ ಸದಸ್ಯ ಬಿ ಪಿ ರಾಮಚಂದ್ರ , ಬೆಳ್ಳೂರು ಗ್ರಾಪಂ ಸದಸ್ಯ ಬೆಳ್ಳೂರು ತಿಮ್ಮಪ್ಪ ,ಮುಖಂಡರಾದ ಕಗ್ಗಲಿ ಲಿಂಗಪ್ಪ , ರಾಜೇಶ್ ಜೈನ್ ಹಾಗೂ ಗ್ರಾಮಸ್ಥರು ಇದ್ದರು.
		 
                         
                         
                         
                         
                         
                         
                         
                         
                         
                        
