Ripponpete | ಶ್ರೀ ಸಿದ್ದಿವಿನಾಯಕ ದೇವಸ್ಥಾನದ ರಥ ನಿರ್ಮಾಣಕ್ಕೆ ಸ್ನೇಹ ಬಳದಿಂದ ದೇಣಿಗೆ
ರಿಪ್ಪನ್‌ಪೇಟೆ : ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ದೇವಸ್ಥಾನದಲ್ಲಿ ರಥ ನಿರ್ಮಾಣಕ್ಕೆ ಇಲ್ಲಿನ ಸರ್ಕಾರಿ ಪ್ರೌಢಶಾಲೆಯ 1995-96 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಸ್ನೇಹ ಬಳಗದ ವತಿಯಿಂದ ದೇಣಿಗೆ ನೀಡಲಾಯಿತು.
ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ನೆರವೇರಿಸುವ ಹಿನ್ನಲೆಯಲ್ಲಿ ಸುಮಾರು 31 ಲಕ್ಷ ರೂ ವೆಚ್ಚದ ರಥ ನಿರ್ಮಾಣಕ್ಕೆ ಸಿದ್ಧತೆ ನಡೆಯುತಿದ್ದು ಈ ಹಿನ್ನಲೆಯಲ್ಲಿ ಇಂದು ದೇವಸ್ಥಾನದ ಆವರಣದಲ್ಲಿ ದೇವಸ್ಥಾನದ ಸಮಿತಿಯವರಿ ದೇಣಿಗೆಯ ಚೆಕ್ ನ್ನು ಹಸ್ತಾಂತರಿಸಲಾಯಿತು.
ಕೆತ್ತನೆ ಕುಸುರಿ ಕೆಲಸಗಾರ ಹರಿಹರಪುರದ ನಾಗರಾಜ್ ಆಚಾರ್ಯ ರವರ ನೇತೃತ್ವದಲ್ಲಿ ರಥ ನಿರ್ಮಾಣದ ಕೆಲಸ ನಡೆಯುತ್ತಿದೆ.
ಶ್ರೀ ಸಿದ್ದಿವಿನಾಯಕ ವ್ಯವಸ್ಥಾಪನಾ ಸಮಿತಿ ಹಾಗೂ ಸಿದ್ದಿವಿನಾಯಕ ಸೇವಾ ಸಂಸ್ಥೆ ಭಕ್ತಾಧಿಗಳ ಬಹು ದಿನಗಳ ಬೇಡಿಕೆಯಂತೆ ಈ ಬಾರಿ ಜಾತ್ರಾಮಹೋತ್ಸವ ನಡೆಸಲು ಕಾರ್ಯೋನ್ಮಖರಾಗಿದ್ದು ಈ ವರ್ಷದ ವರ್ಧಂತ್ಯೊತ್ಸವ ಸಂದರ್ಭದಲ್ಲಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ನಡೆಸಲು ತಯಾರಿ ನಡೆಸಲಾಗುತ್ತಿದೆ.
ಈ ಸಂದರ್ಭದಲ್ಲಿ ಸಿದ್ದಿವಿನಾಯಕ ದೇವಸ್ಥಾನದ ಧರ್ಮದರ್ಶಿ ಸಮಿತಿಯ ಅಧ್ಯಕ್ಷ ಈಶ್ವರ್ ಶೆಟ್ಟಿ, ಎಂ.ಡಿ.ಇಂದ್ರಮ್ಮ, ಗಣೇಶ್ ಎನ್.ಕಾಮತ್, ಸ್ನೇಹ ಬಳಗದ ಅಧ್ಯಕ್ಷ ಅಶ್ಪಕ್ ಆರ್ ವೈ , ಸದಸ್ಯರಾದ ಮಂಜುಳಾ ಕೆ ರಾವ್ , ಗಿರೀಶ್ ,ಅಬ್ದುಲ್ ರವೂಫ಼್, ಮಂಜುನಾಥ್ , ರವಿ , ಪರಮೇಶ್ ,ನಾಗರಾಜ್ , ಮಂಜುನಾಥ್ ಕೆರೆಹಳ್ಳಿ ,ಆಟೋ ಗುರು ,ಶ್ರೀಧರ್ , ಕುಮಾರ್ ಸ್ವಾಮಿ , ರಮೇಶ್ , ಸಾಧನ ಹಾಗೂ ಪದ್ಮಾವತಿ ಇದ್ದರು.