ಕೋಡೂರಿನ ಬೇಕರಿಯಲ್ಲಿ ಮಾರಾಮಾರಿ – ಬೇಕರಿ ಮಾಲೀಕಳ ಮೇಲೆ ಹಲ್ಲೆ | ಎರಡು ಪ್ರತ್ಯೇಕ ಪ್ರಕರಣ ದಾಖಲು | ಅಷ್ಟಕ್ಕೂ ದೂರಿನಲ್ಲೇನಿದೆ..?? ಈ ಸುದ್ದಿ ನೋಡಿ
ರಿಪ್ಪನ್‌ಪೇಟೆ : ಸಮೀಪದ ಕೋಡೂರಿನ ಬೇಕರಿಯೊಂದರಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು ಎರಡು ಪ್ರತ್ಯೇಕ ಪ್ರಕರಣಗಳು ರಿಪ್ಪನ್‌ಪೇಟೆ ಠಾಣೆಯಲ್ಲಿ ದಾಖಲಾಗಿದೆ.
ಘಟನೆ 1 :
ಕೋಡೂರಿನ ಲಕ್ಷ್ಮಿ ಮಲ್ನಾಡ್ ಬೇಕರಿಯಲ್ಲಿ ಶುಕ್ರವಾರ ಸಂಜೆ ಗುಂಪೊಂದು ಏಕಾಏಕಿ ಬೇಕರಿಗೆ ನುಗ್ಗಿ ಬೇಕರಿ ಮಾಲೀಕನ ಪತ್ನಿ , ತಾಯಿ ಹಾಗೂ ಬೇಕರಿಯ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದು ಮಹಿಳೆಯ ಬಲತ್ಕಾರಕ್ಕೆ ಯತ್ನಿಸಿದ್ದಾರೆ ಎಂದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಆರು ಜನ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ.
ಬೇಕರಿ ಮಾಲೀಕನ ದೂರಿನಲ್ಲೇನಿದೆ..??
ದಿನಾಂಕ:29/02/2024 ರಂದು ಸಂಜೆ ವೇಳೆಗೆ ಕೊಡೂರು ವಾಸಿ ಕೀರ್ತಿ ಮತ್ತು ವಿಕಾಸ್ ರವರು ಬೇಕರಿ ಹತ್ತಿರ ಗಲಾಟೆ ಮಾಡಿಕೊಳ್ಳುತ್ತಿದ್ದು, ಬೇಕರಿಯಲ್ಲಿ ಕೆಲಸಕ್ಕಿರುವ ಭೀಮನು ಗಲಾಟೆ ಮಾಡಿಕೊಳ್ಳುತ್ತಿದ್ದ ಕೀರ್ತಿಯನ್ನು ಹೊರಹಾಕಿದಾಗ, ಬೇಕರಿ ಎದುರಿಗೆ ನಿಂತಿದ್ದ ಯಾರೋ ನಾಲ್ಕು ಜನರಿಗೆ ಕೀರ್ತಿ ಎಂಬಾತನು ಬೈದಿದಕ್ಕೆ ಅವರೆಲ್ಲರೂ ಗಲಾಟೆ ಮಾಡಿಕೊಳ್ಳುತ್ತಿದ್ದಾಗ ಬೇಕರಿ ಮಾಲೀಕ ಅಂಗಡಿಗೆ ಬಂದು ಎಲ್ಲರಿಗೂ ಜೋರು ಮಾಡಿ ಕೀರ್ತಿ ಎಂಬಾತನನ್ನು ಸಮಾಧಾನ ಮಾಡಿ ಕಳುಹಿಸಿದ್ದರು.
ಶುಕ್ರವಾರ ಸಂಜೆ ಸುಮಾರು 4-30 ಗಂಟೆಗೆ ಕೋಡೂರಿನಲಿರುವ ಪ್ರದೀಪ್ ಮಾಲೀಕತ್ವದ ಬೇಕರಿಗೆ ಕೀರ್ತಿ, ಯೋಗೇಂದ್ರ, ಮಂಜುಶೆಟ್ಟಿ, ಕಿರಣ್ ಸಂದೀಪ್ ಶೆಟ್ಟಿರವರು ಏಕಾ ಏಕಿ ಅಕ್ರಮವಾಗಿ ಪ್ರವೇಶ ಮಾಡಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಬೇಕರಿ ಮಾಲೀಕನ ಹೆಂಡತಿ ವಿದ್ಯಾರವರವರಿಗೆ ಅವಾಚ್ಯವಾಗಿ ನಿಂದಿಸಿ ನಿನ್ನ ಗಂಡನನ್ನು ಕರಿಯೇ ನಿನ್ನೆ ಗಲಾಟೆ ಮಾಡುತ್ತಿದ್ದನಲ್ಲ, ಈಗ ಗಲಾಟೆ ಮಾಡಿ ಎಂದು ಕೂಗುತ್ತಿದ್ದು ಈ ಸಂಧರ್ಭದಲ್ಲಿ ಯೊಗೇಂದ್ರ ಎಂಬಾತನು ವಿದ್ಯಾರವರ ಚೂಡಿದಾರ ಹಿಡಿದು ಎಳೆದು ಹರಿದು ಹಾಕಿ, ತಾಳಿ ಬೀಳಿಸಿದ್ದಾನೆ ಈ ಸಂಧರ್ಭದಲ್ಲಿ ವಿದ್ಯಾ ಕೂಗಿ ಕೊಳ್ಳುತ್ತಿದ್ದಂತೆ ಪ್ರದೀಪ್ ಬಿಡಿಸಲು ಹೋದಾಗ ಯೋಗೇಂದ್ರನು ತನ್ನ ಕೈಯಲ್ಲಿ ಸುತ್ತಿಕೊಂಡಿದ್ದ ಬೆಲ್ಟ್ ನಿಂದ ಪ್ರದೀಪ ನ ಬೆನ್ನಿಗೆ ಗುದಿದ, ಕೀರ್ತಿ ಕೈಯಿಂದ ಕೈಯಿಂದ ಎದೆಗೆ ಗುದ್ದಿದನು. ಮಂಜುಶೆಟ್ಟಿಯು ಕಬ್ಬಿಣದ ರಾಡಿನಿಂದ ಬಲಗಾಲಿಗೆ ಹೊಡೆದು ನೋವುಂಟು ಮಾಡಿದ್ದು, ಕಿರಣ ಮತ್ತು ಸಂದೀಪ್ ಶೆಟ್ಟಿ ಕೈಯಿಂದ ಮೈಮೇಲೆ ಹಲೈ ಮಾಡಿರುತ್ತಾರೆ.ಪ್ರದೀಪ್ ಕೂಗಿಕೊಳ್ಳುತ್ತಿದ್ದಂತೆ ಬೇಕರಿಯ ಹಿಂಬಾಗದಲ್ಲಿ ವಾಸವಿರುವ ತಿಲಕ್, ಸಚಿನ್, ತಿಪ್ಪೇಶ, ನಾಗರಾಜ ರವರು ಬಿಡಿಸಲು ಬಂದಾಗ ಯೋಗೇಂದ್ರನು ತಿಲಕ್ ನಿಗೆ ಕೈಗಳಿಂದ ಮೈಮೇಲೆ ಹೊಡೆದು, ಕೀರ್ತಿಯು ಸಚಿನ್ ನಿಗೆ ಬಲಕಪಾಲಿಗೆ,ಬೆನ್ನಿಗೆ ಹೊಡೆದನು,ತಿಪ್ಪೇಶನಿಗೆ ಮಂಜುಶೆಟ್ಟಿಯು ಕಬ್ಬಿಣದ ರಾಡಿನಿಂದ ಹೊಡೆದನು ಸಂದೀಪ್ ಶೆಟ್ಟಿಯು ನಾಗರಾಜ್ ನಿಗೆ ಕೈಗಳಿಂದ ಹಲ್ಲೆ ಮಾಡಿದನು. ಜೊತೆಗೆ ಇನ್ನೂ 5-6 ಜನರು ಸೇರಿ ಹಲ್ಲೆ ಮಾಡಿರುತ್ತಾರೆ.ಅಲಿದ ಜನರು ಸೇರಿ ಬಿಡಿಸಿದ್ದಾರೆ. ಇನ್ನೊಂದು ದಿನ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿ ಹೋಗಿದ್ದು, ಸದರಿ ಮೇಲ್ಕಂಡ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರದೀಪ್ ದೂರು ನೀಡಿದ್ದಾರೆ.
ಈ ದೂರಿನನ್ವಯ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಆರು ಜನರ ವಿರುದ್ದ ಗಂಭೀರ ಪ್ರಕರಣ ದಾಖಲಾಗಿದೆ.
ಘಟನೆ 2
ಗುರುವಾರ ಸಂಜೆ ಬೇಕರಿಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯಾಗಿದ್ದು ಈ ಸಂಧರ್ಭದಲ್ಲಿ ಬೇಕರಿ ಮಾಲೀಕ ಪ್ರದೀಪ್ ಹಾಗೂ ಆತನ ಸ್ನೇಹಿತರು ಕೀರ್ತಿರಾಜ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಐವರ ಮೇಲೆ ಪ್ರಕರಣ ದಾಖಲಾಗಿದೆ.
ಕೀರ್ತಿರಾಜ್ ದೂರಿನಲ್ಲೇನಿದೆ..??
ದಿನಾಂಕ: 29/02/2024 ರಂದು ಸಂಜೆ 5-00 ಗಂಟೆಗೆ ಕೀರ್ತಿರಾಜ್ ಆಟೋವನ್ನು ಸ್ಯಾಂಡ್ ನಲ್ಲಿ ಹಾಕಿ ಪ್ರದೀಪ ರವರ ಬೇಕರಿ ಮುಂಭಾಗ ಸಾರ್ವಜನಿಕ ರಸ್ತೆ ಪಕ್ಕದಲ್ಲಿ ಸ್ನೇಹಿತನೊಂದಿಗೆ ಮಾತನಾಡುತ್ತಾ ನಿಂತಿದ್ದಾಗ ಸ್ನೇಹಿತ ಬೇಕರಿಯ ಒಳಗಡೆ ಹೋದಾಗ ಅಲ್ಲಿಗೆ ಯಾಕೆ ಹೋಗುತ್ತೀಯಾ ಹೊರಗೆ ಬಾ ಎಂದು ಕರೆದಿದ್ದು ಅದಕ್ಕೆ ಬೇಕರಿಯಲಿದ್ದ ಭೀಮ ಎಂಬಾತನು ನೀನು ಯಾರೋ ಅವನನ್ನು ಕರೆಯಲು ಹೊರಗೆ ಹೋಗು ಎಂದು ಹೇಳಿದನು, ಕೀರ್ತಿರಾಜ್ ಅದಕ್ಕೆ ನೆಟ್ಟಗೆ ಮಾತನಾಡು ಎಂದು ಹೇಳುತ್ತಿದಾಗ ಭೀಮ ಒಳಗಿನಿಂದ ಬಂದವನ ಮಗನೇ ಅಂತ ಕೀರ್ತಿಯನ್ನು ತಳ್ಳಿ, ಕೈಯಿಂದ ಎಡಭಾಗದ ಕಪಾಲಿಗೆ ಜೋರಾಗಿ ಹೊಡೆದನು. ಸುಧಾ ಕುನ್ನೂರು ಈತನು ಅಲ್ಲೆ ಇದ್ದು ಕಲ್ಲನ್ನು ತೆಗೆದುಕೊಂಡು ಫಿರ್ಯಾಧಿಯವರ ಎಡಕುತ್ತಿಗೆಗೆ ಹೊಡೆದನು, ಪ್ರದೀಪನ ಮನೆಯಲ್ಲಿ ಬಾಡಿಗೆಯಿರುವ 4 ಜನ ಕಾಸರಗೋಡಿನ ಹುಡುಗರು ಓಡಿ ಬಂದವರೆ ಕೈಗಳಿಂದ ಕೀರ್ತಿ ಮೈ ಕೈಗೆ ಹೊಡೆದು ಕೆಳಗೆ ಕೆಡವಿ ಕಾಲಿನಿಂದ ತುಳಿದರು ಆಗ ಅಲಿಗೆ ಬಂದ ಪ್ರದೀಪ ಮತ್ತು ತಿಲಕ್ ರವರು ಇವನದು ಇದೇ ಆಯ್ತು ಅಂತ ಪ್ರದೀಪ ರಾಡಿನಿಂದ ಕೀರ್ತಿಯ ಬೆನ್ನಿಗೆ ಮತ್ತು ಬಲಕಾಲಿಗೆ ಹೊಡೆದನು. ತಿಲಕನು ಕೈಗಳಿಂದ ಮೈ ಮೇಲೆ ಹೊಡೆದನು ಆಗ ಕೀರ್ತಿ ಜೋರಾಗಿ ಕೂಗಿಕೊಂಡಾಗ ವಿಕಾಸ ಸಂದೀಪ ಗಲಾಟೆ ಬಿಡಿಸಿದರು ಆಗ ಅವರೆಲ್ಲರೂ ಕಲ್ಲು, ಮತ್ತು ರಾಡನ್ನು ಅಲೆ ಬಿಸಾಡಿ ಬೋ**ಮಗನೇ ಈ ದಿವಸ ಉಳಿದುಕೊಂಡಿದ್ದೀಯಾ ಇನ್ನೊಂದು ದಿವಸ ನಿನ್ನ ಜೀವ ಸಹಿತ ಉಳಿಸುವುದಿಲ್ಲ. ಅಂತ ಜೀವ ಬೆದರಿಕೆ ಹಾಕಿ ಹೊರಟು ಹೋಗಿದ್ದು, ನಂತರ ಕೀರ್ತಿರಾಜ್ ಹೊಸನಗರ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆ ಪಡೆದು ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತ ನೀಡಿದ ದೂರಿನ ಮೇರೆಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ದೂರಿನನ್ವಯ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ದ ಪ್ರಕರಣ ದಾಖಲಾಗಿದೆ.