ಬೈಕ್ ಸಮೇತ ಹಳ್ಳಕ್ಕೆ ಬಿದ್ದು ವ್ಯಕ್ತಿ ಸಾವು – ಆಸ್ಪತ್ರೆಗೆ ಶಾಸಕರ ಆಪ್ತರ ಭೇಟಿ
ರಿಪ್ಪನ್‌ಪೇಟೆ : ಇಲ್ಲಿನ ಅರಸಾಳು ಗ್ರಾಪಂ ವ್ಯಾಪ್ತಿಯ ಅಡ್ಡೆರಿ ಗ್ರಾಮದ ಬಳಿಯಲ್ಲಿ ಮಳೆಯಿಂದ ಕೊರೆದಿರುವ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆಯ ಹಿನ್ನಲೆಯಲ್ಲಿ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಪಟ್ಟಣದ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಶಾಸಕ ಬೇಳೂರು ಗೋಪಾಲಕೃಷ್ಣ ರವರು ವಿಧಾನಸಭೆ ಅಧಿವೇಶನದಲ್ಲಿರುವ ಹಿನ್ನಲೆಯಲ್ಲಿ ಅವರ ಸೂಚನೆ ಮೇರೆಗೆ ಶಾಸಕರ ಆಪ್ತರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದ್ದಾರೆ.
ಹಾರೋಹಿತ್ತಲು ಗ್ರಾಮದ ವಾಸಿಯಾದ ದೇವೇಂದ್ರಪ್ಪ ರವರು ಗುರುವಾರ ಸಂಜೆ ಬೈಕ್ ನಲ್ಲಿ ತೆರಳುತಿದ್ದಾಗ ಈ ಹಿಂದೆ ಬಂದ ಮಳೆಯಿಂದ ಕೊರೆದಿರುವ ರಸ್ತೆಯ ಹಳ್ಳಕ್ಕೆ ಬೈಕ್ ಸಮೇತ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಶವಗಾರದಲ್ಲಿರಿಸಲಾಗಿದೆ.
ಈ ಸಂಧರ್ಭದಲ್ಲಿ ಜಿಪಂ ಮಾಜಿ ಸದಸ್ಯ ಬಿ ಪಿ ರಾಮಚಂದ್ರ , ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಜಾ , ಮುಖಂಡರಾದ ಈಶ್ವರಪ್ಪ ಗೌಡ ,ಪಿಎಸ್‌ಐ ಪ್ರವೀಣ್ ಎಸ್ ಪಿ ಹಾಗೂ ಇನ್ನಿತರರಿದ್ದರು.