ವೃದ್ದೆಯನ್ನು ಹತೈಗೈದು ಹುಂಚದ ಮುತ್ತಿನ ಕೆರೆಯಲ್ಲಿ ಬಿಸಾಡಿದ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು – ಬಾಳೂರಿನಲ್ಲಿಯೇ ನಡೆದಿತ್ತು ಹತೈ
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹುಂಚ ಗ್ರಾಮದ ಮುತ್ತಿನಕೆರೆಯಲ್ಲಿ ಮಹಿಳೆಯೊಬ್ಬರನ್ನು ಹತೈಗೈದು ಬಿಸಾಡಿದ ಪ್ರಕರಣದ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೊಳಲೂರು ಗ್ರಾಮದ ಜಯಮ್ಮ(62) ಎಂಬುವವರನ್ನು ಕೋಡೂರು ನಿವಾಸಿ ಮಯೂರ (24) ತನ್ನ ಅಪ್ರಾಪ್ತ ಸ್ನೇಹಿತನೊಂದಿಗೆ ಸೇರಿಕೊಂಡು ಮೈಮೇಲಿದ್ದ ಒಡವೆಗಾಗಿ ಕೊಲೆ ಮಾಡಿದ್ದಾರೆ.ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಡೆದಿದ್ದೇನು ..??
ದಿನಾಂಕ:18/03/2024 ರಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮದ ಮುತ್ತಿನಕೆರೆಯಲ್ಲಿ ಅಪರಿಚಿತ ಮಹಿಳೆಯ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.
ಪ್ರಕರಣವನ್ನು ಕೈಗೆತ್ತಿಕೊಂಡ ಸಿಪಿಐ ಗುರಣ್ಣ ಹೆಬ್ಬಾಳ್ ಹಾಗೂ ಪಿಎಸ್‌ಐ ನಿಂಗರಾಜ್ ಕೆ ವೈ ನೇತ್ರತ್ವದ ಸಿಬ್ಬಂದಿಗಳ ತಂಡ ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದರು.
ಈ ಪ್ರಕರಣದಲ್ಲಿ ಹೊಸನಗರ ತಾಲೂಕು ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡೂರು ಯಳಗಲು ಗ್ರಾಮದ ಮಯೂರ ಕೆ( 24) ವರ್ಷ ಈತನು ತನ್ನ ಅಪ್ರಾಪ್ತ ಸ್ನೇಹಿತ ನೊಂದಿಗೆ ಹಣ ಹಾಗೂ ಬಂಗಾರದ ಆಸೆಯಿಂದ ತನ್ನ ಅತ್ತೆ ಹೊಳಲೂರು ಗ್ರಾಮದ ಸೀತಾರ ರವರು ಕೆಲಸ ಮಾಡುತ್ತಿದ್ದ ಮಠದಲ್ಲಿ, ಕಸಗುಡಿಸುವ ಕೆಲಸ ಮಾಡುತ್ತಿದ್ದ ಜಯಮ್ಮ ಕೋಂ ಕುಮಾರ, 62 ವರ್ಷ ರವರ ಹತ್ತಿರ ಕೈಸಾಲವಾಗಿ ಹಣತೆಗೆದುಕೊಂಡು ಅದನ್ನು ವಾಪಾಸ್ ಕೊಡಲಾಗದೇ ಆಕೆಯ ಹತ್ತಿರ ಹಣ ಮತ್ತು ಬಂಗಾರವಿರುವುದನ್ನು ಗಮನಿಸಿ ಬುದ್ಧಿವಂತಿಕೆಯಿಂದ ರಿಪ್ಪನ್ ಪೇಟೆಯಲಿ ಸೈಟ್ ಕೊಡಿಸುವುದಾಗಿ ನಂಬಿಸಿ ರಿಪ್ಪನ್ ಪೇಟೆಗೆ ಕರೆದುಕೊಂಡು ಬಂದು ನಂತರ ಮಾರುತಿ ವ್ಯಾಗನಾರ್ ಕಾರಿನಲ್ಲಿ ಕೂರಿಸಿಕೊಂಡು ಬಾಳೂರು ಗ್ರಾಮದ ಹತ್ತಿರ ಕಾರಿನಲಿಯೇ ಹಿಂಬದಿಯಿಂದ ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ, ಕೊಲೆಯನ್ನು ಮರೆ ಮಾಚುವ ಉದ್ದೇಶದಿಂದ ಬೇಲಿ ಕಂಬದ ಕಲ್ಲನ್ನು ಜೊತೆಗೆ ಪ್ಲಾಸ್ಟಿಕ್ ಹಗದಿಂದ ಸುತ್ತಿ ಬಿಗಿದು ಅದೇ ದಿನ ರಾತ್ರಿ ಸುಮಾರು 10-45 ಗಂಟೆಗೆ ಹುಂಚಾ ಮುತ್ತಿನ ಕೆರೆಯಲ್ಲಿ ಮೃತದೇಹವನ್ನು ಹಾಕಿ ಹೋಗಿರುತ್ತಾರೆ,
ಕಾರ್ಯಾಚರಣೆಯಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ರವರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ, ಡಿವೈಎಸ್ ಪಿ ಗಜಾನನ ವಾಮನ ಸುತಾರ ನಿರ್ದೇಶನದಲಿ, ಸಿಪಿಐ ಜಿಎಸ್ ಹೆಬ್ಬಾಳ್ ರವರು ಮತ್ತು ಚಾಣಾಕ್ಷ ಅಧಿಕಾರಿ ರಿಪ್ಪನ್ ಪೇಟೆ ಠಾಣಾ ಪಿಎಸ್ ಐ ನಿಂಗರಾಜ್ ಕೆ ವೈ ನೇತ್ರತ್ವದಲ್ಲಿ ಸಿಬ್ಬಂದಿಯವರಾದ ನಗರ ಠಾಣೆಯ ಕಿರಣ್ ಕುಮಾರ ,ರಿಪ್ಪನ್‌ಪೇಟೆ ಠಾಣೆಯ ಶಿವಕುಮಾರ ನಾಯ್ಕ್ ,ಸಂತೋಷ್ ಕೊರವರ ,ಹೊಸನಗರ ಠಾಣೆಯ ಸುನೀಲ್ ರಿಪ್ಪನ್‌ಪೇಟೆ ಠಾಣೆಯ ಉಮೇಶ್ ಹೆಚ್ ಸಿ ಹಾಗೂ ಮಧುಸೂಧನ್ ರವರನೊಳಗೊಂಡ ತಂಡವು ತೀವ್ರ ಕಾರ್ಯಾಚರಣೆಯಿಂದ ಆರೋಪಿತರನ್ನು ಪತ್ತೆ ಹಚ್ಚಿ, ಮಾನ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.