ಕೆ ಎಸ್ ಈಶ್ವರಪ್ಪನವರಿಗೆ ಜಿಲ್ಲಾದ್ಯಂತ ಅಭೂತಪೂರ್ವ ಬೆಂಬಲ
ರಿಪ್ಪನ್ ಪೇಟೆ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗದ ನೇತಾರ ಪಕ್ಷೇತರ ಅಭ್ಯರ್ಥಿ ಕೆಎಸ್ ಈಶ್ವರಪ್ಪನವರಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಕೆ ಎಸ್ ಈಶ್ವರಪ್ಪ ಬಳಗದ ಸಂಚಾಲಕರಾದ ವಾಟಗೋಡು ಸುರೇಶ್ ಮತ್ತು ತ.ಮ.ನರಸಿಂಹ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕುಟುಂಬ ರಾಜಕಾರಣ ಮತ್ತು ಭಾರತೀಯ ಜನತಾ ಪಕ್ಷದ ಶುದ್ಧೀಕರಣಕ್ಕಾಗಿ ಹೋರಾಟ ನಡೆಸುತ್ತಿರುವ ಕೆ ಎಸ್ ಈಶ್ವರಪ್ಪ ರವರ ಹೋರಾಟಕ್ಕೆ ಬಿಜೆಪಿಯಲ್ಲಿ ನೊಂದ ಅನೇಕ ಕಾರ್ಯಕರ್ತರು ಮತ್ತು ಬೇರೆ ಬೇರೆ ಪಕ್ಷದ ನೊಂದ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
1980 ರಿಂದ ಇಲ್ಲಿಯವರೆಗೆ ಪಕ್ಷದ ವಿವಿಧ ಹುದ್ದೆಗಳನ್ನು ನಿರ್ವಹಿಸಿರುವ ಬೂತ್ ಮಟ್ಟದಿಂದ ಮೇಲ್ಮಟ್ಟದ ನೊಂದ ಕಾರ್ಯಕರ್ತರು ನಮ್ಮ ಜೊತೆ ಕೈಜೋಡಿಸುತ್ತಿದ್ದಾರೆ.ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಕಾರ್ಯಾಲಯವನ್ನು ಈಗಾಗಲೇ ಶಿವಮೊಗ್ಗದಲ್ಲಿ ಪ್ರಾರಂಭವಾಗಿದ್ದು, ಸಾಗರ ವಿಧಾನಸಭಾ ಕ್ಷೇತ್ರದ ಕಾರ್ಯಾಲಯ ಇತ್ತೀಚಿಗೆ ಉದ್ಘಾಟನೆಯಾಗಿದೆ. ಇನ್ನು ಒಂದು ವಾರದೊಳಗೆ ಕ್ಷೇತ್ರದಾದ್ಯಂತ ಬೈಂದೂರು ಸೇರಿ ಎಲ್ಲಾ ತಾಲೂಕುಗಳಲ್ಲಿ ಚುನಾವಣಾ ಕಾರ್ಯಾಲಯ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಹೊಸನಗರ ತಾಲೂಕಿನಲ್ಲಿ ಈಗಾಗಲೇ ಅನೇಕ ಬೂತ್ ಸಮಿತಿಗಳನ್ನು ಮಾಡಲಾಗಿದ್ದು,ಸದ್ಯದಲ್ಲಿಯೇ ರಿಪ್ಪನ್ ಪೇಟೆ ಮತ್ತು ಹೊಸನಗರದಲ್ಲಿ ಚುನಾವಣಾ ಕಾರ್ಯಲಯ ತೆರೆಯಲಾಗುವುದು ಎಂದು ತಿಳಿಸಿದರು.
ಹೊಸನಗರ ತಾಲೂಕಿನಲ್ಲಿ ನಾಲ್ಕು ಹೋಬಳಿಗಳಿದ್ದು ಎಲ್ಲಾ ಹೋಬಳಿಗಳಲ್ಲಿ ಈಶ್ವರಪ್ಪ ಬೆಂಬಲಿಗರು ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಹೊಸನಗರ ತಾಲೂಕು ಈಶ್ವರಪ್ಪನವರಿಗೆ ಹೆಚ್ಚಿನ ಮತ ನೀಡುವುದರಲ್ಲಿ ಸಂದೇಹವಿಲ್ಲವೆಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಿರೂಪ್,ಕುಕ್ಕಳಲೆ ಈಶ್ವರಪ್ಪಗೌಡ,
ತಟಗೋಡು ಈಶ್ವರಪ್ಪಗೌಡ, ರಂಜನ್ ಸೋನಲೆ ಮತ್ತಿತರರು ಹಾಜರಿದ್ದರು.