ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ್ ಪಟ್ಟಣದ ಶಿಕ್ಷಣ ಪ್ರೇಮಿ ನೂರ ಅಹ್ಮದ್ ಮಳಗಿ ರವರು ಜಮಾದಾರ್ ಓಣಿಯ ಸರ್ಕಾರಿ ಉರ್ದು ಶಾಲೆಯಲ್ಲಿ ಎಲ್ ಕೆಜಿ ಮಕ್ಕಳಿಗೆ ಸಮವಸ್ತ್ರಗಳು ಹಾಗೂ ಪುಸ್ತಕ, ಬ್ಯಾಗ್ ವಿತರಿಸಿದರು.
ಶಿಗ್ಗಾವಿ ಸವಣೂರ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾದ ನೂರ್ ಅಹ್ಮದ್ ಮಳಗಿ ಬಡ ಮಕ್ಕಳಿಗೆ ಸತತವಾಗಿ ಕ್ಷೇತ್ರದಲ್ಲಿ ಅನೇಕ ಸ್ಕೂಲ್ ಗಳಿಗೆ ಬ್ಯಾಗ್ ಗಳನ್ನು ಕೊಡುತ್ತಿರುವ ಶಿಕ್ಷಣ ಪ್ರೇಮಿಯಾಗಿದ್ದು, ಉಚಿತ ಸ್ಕೂಲ್ ಬ್ಯಾಗ್ ಹಾಗೂ ಆಯ್ದ ವಿದ್ಯಾರ್ಥಿಗಳಿಗೆ ಪಾಠೋಪಕರಣ ವಿತರಿಸುವ ಮೂಲಕ ಶೈಕ್ಷಣಿಕ ಪ್ರೇಮ ಮೆರೆದರು.
ವರದಿ : ನಿಂಗರಾಜ್ ಕೊಡಲ್ ಹಾವೇರಿ ಜಿಲ್ಲೆ ಬಂಕಾಪುರ.
 
                         
                         
                         
                         
                         
                         
                         
                         
                         
                        