Thirthahalli | ಗ್ಯಾಸ್ ಲೀಕ್ ಆಗಿ ಕಾರು ಸ್ಫೋಟ – ಓರ್ವನಿಗೆ ಗಂಭೀರ ಗಾಯ
ತೀರ್ಥಹಳ್ಳಿ: ಇಲ್ಲಿನ ಗ್ಯಾರೇಂಜೊಂದರಲ್ಲಿ ಗ್ಯಾಸ್ ಲೀಕ್ ಆಗಿ ಕಾರೊಂದು ಸ್ಪೋಟಗೊಂಡು ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ.
ಕೊಪ್ಪ ಸರ್ಕಲ್ ವಿಠಲ ಗ್ಯಾರೇಜ್ ಗ್ಯಾಸ್ ಸ್ಫೋಟಗೊಂಡು ಓರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ವಿಠಲ್ ಎಂಬುವವರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸಿದರು. ಕಾರಿನಲ್ಲಿ ಎಲೆಕ್ಟಿಕಲ್ ಶಾರ್ಟ್ ಸರ್ಕ್ಯುಟ್ ಆಗಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು ಈ ಘಟನೆಯಿಂದ ಗ್ಯಾರೇಜ್ ಸಂಪೂರ್ಣ ಸುಟ್ಟು ಹೋಗಿದೆ.
ಘಟನೆ ನಡೆಯುತ್ತಿದ್ದಂತೆ ತೀರ್ಥಹಳ್ಳಿ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಮುಂದಾಗಬಹುದಾಗಿದ್ದ ದೊಡ್ಡ ಮಟ್ಟದ ಅಪಾಯ ತಪ್ಪಿಸಿದ್ದಾರೆ.