ಅಕ್ರಮ ಮರ ಕಡಿತಲೆ ಮಾಡಿ ನಾಟಾ ಸಾಗಾಟ, ಪ್ರಕರಣ ದಾಖಲು
ಹೊಸನಗರ(Hosanagara) : ಅಕ್ರಮವಾಗಿ ಮರ ಕಡಿತಲೆ ಮಾಡಿ ನಾಟಾ ಮಾಡಿ ಸಾಗಿಸಿದ್ದ ಪ್ರಕರಣವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ತಾಲೂಕಿನ ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಂಬೆಕೊಪ್ಪದಲ್ಲಿ ಜೋಸ್ ಮ್ಯಾಥ್ಯೂಸ್ ಎಂಬುವವರ ಖಾತೆ ಜಮೀನಿನಲ್ಲಿದ್ದ ಹೊನ್ನೆ ಜಾತಿಯ ಮರವನ್ನು ಕಡಿತಲೆ ಮಾಡಿ ಸಾಗಿಸಲಾಗಿತ್ತು. ತನಿಖೆ ನಡೆಸಿದ ಅಧಿಕಾರಿಗಳು ತಾಲೂಕಿನ ಜಯನಗರದ ಖಾಸಿಂ ಸಾಬ್ ಎಂಬಾತನ ಮನೆಯಲ್ಲಿ 24 ಘನ ಅಡಿ ನಾಟಾ ಸಂಗ್ರಹಿಸಿಟ್ಟಿದ್ದನ್ನು ಪತ್ತೆ ಹೆಚ್ಚಿ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಮರ ಕಡಿತಲೆ ಮಾಡಿದ ಸ್ಥಳದಿಂದ 4 ಮರದ ದಿಮ್ಮಿಗಳನ್ನು ಸಹಾ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ.
ಮರಕಡಿತಲೆ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳು ಶಾಮೀಲಾಗಿರುವ ಕುರಿತು ವದಂತಿಗಳು ಹರಿದಾಡಿದ್ದು ಅರಣ್ಯ ಇಲಾಖೆಯವರ ತನಿಖೆಯಿಂದ ಪ್ರಭಾವಿ ರಾಜಕೀಯ ನಾಯಕರ ಮನೆಗೆ ಎಷ್ಟು ಅಕ್ರಮ ನಾಟ ಹೋಗಿದೆ ಎಂಬುವುದು ತಿಳಿಯಬೇಕಾಗಿದೆ ಹಾಗೂ ಯಾರ‍್ಯಾರು ಶಾಮೀಲು ಆಗಿದ್ದಾರೆ ಎಂಬುವುದು ತಿಳಿಯಬೇಕಾದರೆ ಅರಣ್ಯ ಇಲಾಖೆ ಯಾವುದೇ ರಾಜಕೀಯಕ್ಕೆ ಪ್ರಭಾವಕ್ಕೆ ಒಳಗಾಗದೇ ನಿಷ್ಪಾಕ್ಷಪಾತ ತನಿಖೆ ಮಾಡಿದರೇ ಮಾತ್ರ ಹೊರಬರಲಿದ್ದು ಇಲ್ಲವಾದರೇ ತನಿಖೆ ಇಲ್ಲಿಗೆ ಅಂತ್ಯವಾಗಲಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದು ಪ್ರಭಾವಿ ರಾಜಕಾರಣಯೊಬ್ಬರು ಜಯನಗರದಲ್ಲಿ ಮನೆ ನಿರ್ಮಿಸುತ್ತಿದ್ದು ಅವರಿಗೂ ಇಲ್ಲಿಂದ ನಾಟ ಹೋಗಿದೆ ಎಂಬ ಸಂಶಯ ಜನರು ವ್ಯಕ್ತಪಡಿಸುತ್ತಿದ್ದಾರೆ.