ನಾನು ಕೆಪಿಸಿಸಿ ಅಧ್ಯಕ್ಷನಾಗಿ ಪ್ರತಿಜ್ಞೆ ಸ್ವೀಕರಿಸಿದ ನಂತರ ಪಕ್ಷದ ದಿಲ್ಲಿ ನಾಯಕರನ್ನು ಅಧಿಕೃತವಾಗಿ ಭೇಟಿ ಮಾಡಿರಲಿಲ್ಲ ಹೀಗಾಗಿ ಬಂದಿದ್ದೇನೆ:: ಡಿ ಕೆ ಶಿವಕುಮಾರ್

ನಾನು ಕೆಪಿಸಿಸಿ ಅಧ್ಯಕ್ಷನಾಗಿ ಪ್ರತಿಜ್ಞೆ ಸ್ವೀಕರಿಸಿದ ನಂತರ ಪಕ್ಷದ ದಿಲ್ಲಿ ನಾಯಕರನ್ನು ಅಧಿಕೃತವಾಗಿ ಭೇಟಿ ಮಾಡಿರಲಿಲ್ಲ. ಹೀಗಾಗಿ ಬಂದಿದ್ದೇನೆ. ಸೋನಿಯಾ ಗಾಂಧಿ ಅವರಿಗೆ ಆರೋಗ್ಯ ಸರಿ ಇಲ್ಲ. ಕೋರೋನಾ ಸಮಯದಲ್ಲಿ ದೂರದಿಂದಲೇ ಮಾತಕತೆ ಮಾಡಬೇಕಿದ್ದು, ಹೀಗಾಗಿ ಅವರ ಜತೆ ದೂರವಾಣಿಯಲ್ಲಿ ಮಾತನಾಡಲಾಗುವುದು. ರಾಹುಲ್ ಗಾಂಧಿ ಅವರ ಭೇಟಿಗೂ ಸಮಯ ಕೇಳಿದ್ದು, ಅವರು ಬಿಡುವಿದ್ದರೆ ಭೇಟಿ ಮಾಡುವೆ.

ದಿಢೀರ್​ ರಾಜಕೀಯ ಬೆಳವಣಿಗೆಯಲ್ಲಿ ದಿಲ್ಲಿಗೆ ಬಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದೇನು?
ದಿಢೀರ್​ ರಾಜಕೀಯ ಬೆಳವಣಿಗೆಯಲ್ಲಿ ದಿಲ್ಲಿಗೆ ಬಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದೇನು?

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಸದ್ಯಕ್ಕೆ ತಣ್ಣಗಾದಂತಿದೆ. ಆದ್ರೆ ಇತ್ತ ಕಾಂಗ್ರೆಸ್ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ವಿಚಾರ ತಾರಕಕ್ಕೇರಿದೆ. ಇದರ ಬೆನ್ನಲ್ಲೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೂರು ದಿನಗಳ ಭೇಟಿಗಾಗಿ ಭಾನುವಾರ ದೆಹಲಿಗೆ ಆಗಮಿಸಿದ್ದಾರೆ. ಅವರ ಈ ದಿಢೀರ್​ ದೆಹಲಿ ಭೇಟಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಈಗ ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಅಂದಹಾಗೆ ಅವರಿನ್ನೂ ಸೋನಿಯಾ ಗಾಂಧಿ ಮತ್ತು ರಾಹುಲ್​ ಗಾಂಧಿ ಅವರನ್ನು ಭೇಟಿ ಮಾಡಿಲ್ಲ.

ಡಿ.ಕೆ. ಶಿವಕುಮಾರ್ ಮಾಧ್ಯಮಗೋಷ್ಠಿಯಲ್ಲಿ ಮುಖ್ಯಾಂಶಗಳು ಹೀಗಿವೆ:*

 ನಾನು ಕೆಪಿಸಿಸಿ ಅಧ್ಯಕ್ಷನಾಗಿ ಪ್ರತಿಜ್ಞೆ ಸ್ವೀಕರಿಸಿದ ನಂತರ ಪಕ್ಷದ ದಿಲ್ಲಿ ನಾಯಕರನ್ನು ಅಧಿಕೃತವಾಗಿ ಭೇಟಿ ಮಾಡಿರಲಿಲ್ಲ. ಹೀಗಾಗಿ ಬಂದಿದ್ದೇನೆ. ಸೋನಿಯಾ ಗಾಂಧಿ ಅವರಿಗೆ ಆರೋಗ್ಯ ಸರಿ ಇಲ್ಲ. ಕೋರೋನಾ ಸಮಯದಲ್ಲಿ ದೂರದಿಂದಲೇ ಮಾತಕತೆ ಮಾಡಬೇಕಿದ್ದು, ಹೀಗಾಗಿ ಅವರ ಜತೆ ದೂರವಾಣಿಯಲ್ಲಿ ಮಾತನಾಡಲಾಗುವುದು. ರಾಹುಲ್ ಗಾಂಧಿ ಅವರ ಭೇಟಿಗೂ ಸಮಯ ಕೇಳಿದ್ದು, ಅವರು ಬಿಡುವಿದ್ದರೆ ಭೇಟಿ ಮಾಡುವೆ.

* ಪ್ರದೇಶ ಕಾಂಗ್ರೆಸ್ ಪದಾಧಿಕಾರಿಗಳ ಬದಲಾವಣೆ ಮಾಡಬೇಕಿದೆ. ಅದರ ಮಾರ್ಗಸೂಚಿ ಬಗ್ಗೆ ಪಕ್ಷದ ನಾಯಕರ ಜತೆ ಮಾತನಾಡಲು ಬಂದಿದ್ದೇನೆ. ಸದ್ಯಕ್ಕೆ ಕೆಲವು ಕಾರ್ಯಾಧ್ಯಕ್ಷರು ಮಾತ್ರ ಇದ್ದು, ಉಳಿದಂತೆ ಅಧಿಕೃತ ಸಮಿತಿ ಇಲ್ಲ. ಕೆಲವು ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳ ಬದಲಾವಣೆ ಮಾಡಬೇಕಿದೆ. ಸಮಿತಿ ಗಾತ್ರ ಹೆಚ್ಚಿಸಬೇಕೆ, ಇಳಿಸಬೇಕೆ ಎಂದು ಎರಡು ಮೂರು ವರ್ಷಗಳಿಂದ ಚರ್ಚೆ ನಡೆದಿದೆ. ಈ ಬಗ್ಗೆ ನಮ್ಮ ಪ್ರಧಾನ ಕಾರ್ಯದರ್ಶಿಗಳ ಜತೆ ಮಾತನಾಡಲು ಬಂದಿದ್ದೇನೆ. ನಾಳೆ ಬೆಳಗ್ಗೆ ಸುರ್ಜೆವಾಲ ಅವರನ್ನು ಭೇಟಿ ಮಾಡಲಿದ್ದೇನೆ.

* ಪಕ್ಷದಲ್ಲಿ ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ನಾನು ಒಂದು ವರ್ಷದಿಂದ ನೋಡಿದ್ದೇನೆ. ಕೆಲವು ಬದಲಾವಣೆ ಆಗಬೇಕಿದೆ. ಎಲ್ಲೆಲ್ಲಿ ಐದಾರು ವರ್ಷಗಳಿಂದ ಅಧ್ಯಕ್ಷರಿದ್ದಾರೋ ಅಲ್ಲಿ ಬದಲಾವಣೆ ಮಾಡಬೇಕು ಎಂದು ಹಿರಿಯ ನಾಯಕರ ಸಭೆಯಲ್ಲಿ ತೀರ್ಮಾನವಾಗಿದೆ. ಬ್ಲಾಕ್ ಅಥವಾ ಜಿಲ್ಲಾಧ್ಯಕ್ಷರು ಸತತ ಎರಡು ಬಾರಿ ಅಧ್ಯಕ್ಷರಾಗಿದ್ದರೆ ಬದಲಾವಣೆ ಮಾಡಬೇಕು ಎಂದು ತೀರ್ಮಾನಿಸಲಾಗಿದೆ. ಕೊರೋನಾ ಸಮಯದಲ್ಲಿ ಬದಲಾವಣೆ ಬೇಡ ಅಂತಾ ಸುಮ್ಮನಿದ್ದೆವು. ಕೊರೋನಾ ಸಮಯದಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ.

* ಮಧ್ಯಂತರ ಚುನಾವಣೆ ವಿಚಾರ ಬಿಜೆಪಿಗೆ ಬಿಟ್ಟ ವಿಚಾರ. ಒಂದು ವಿಚಾರ ಏನೆಂದರೆ ಬಿಜೆಪಿಯಿಂದ ಆಡಳಿತ ನಡೆಸಲು ಸಾಧ್ಯವಿಲ್ಲ ಅನ್ನೋದು ರುಜುವಾತಾಗಿದೆ. ಕೊರೋನಾ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದ್ದನ್ನು ಬೆಳಕಿಗೆ ತಂದಿದ್ದೆವು. ಈಗ ಬಿಜೆಪಿ ಶಾಸಕರುಗಳೇ ನಮಗಿಂತ ಹೆಚ್ಚಾಗಿ ಮಾತನಾಡುತ್ತಿದ್ದಾರೆ. ಆ ಮೂಲಕ ನಮ್ಮ ಮಾತಿಗೆ ಪುಷ್ಠಿ ನೀಡುತ್ತಿದ್ದಾರೆ. ಸದ್ಯಕ್ಕೆ ನಾವು ಜಿಲ್ಲಾ ಪಂಚಾಯಿತಿ, ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಗಮನ ಹರಿಸುತ್ತಿದ್ದೇವೆ.

ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ:

* ಯಾವುದೇ ನಾಯಕರಾದರೂ ಪಾಲಿಕೆ ಹಾಗೂ ಪಂಚಾಯಿತಿ ಚುನಾವಣೆ ಗೆಲ್ಲಬೇಕು. ಈಗ ಸಿಎಂ ಸ್ಥಾನ ಖಾಲಿ ಇಲ್ಲ. ಸಿಎಂ ಯಾರಾಗಬೇಕು ಎಂದು ತೀರ್ಮಾನ ಮಾಡೋರು ದೆಹಲಿ ನಾಯಕರು. ಸಿಎಂ ಸ್ಥಾನದ ಬಗ್ಗೆ ಬಿಜೆಪಿಯವರು ಮಾತನಾಡಬೇಕು. ನಮ್ಮ ಪಕ್ಷದವರಲ್ಲ. ನಾನು ಪ್ರತಿಜ್ಞೆ ಸ್ವೀಕಾರ ಮಾಡುವಾಗ ಸ್ಪಷ್ಟವಾಗಿ ಹೇಳಿದ್ದೆ, ವ್ಯಕ್ತಿ ಪೂಜೆಗೆ ಅವಕಾಶವಿಲ್ಲ, ಪಕ್ಷ ಪೂಜೆಗೆ ಮಾತ್ರ ಅವಕಾಶ ಎಂದು. ಆ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ.

* ಪಕ್ಷದಲ್ಲಿ ಯಾವುದೇ ಗುಂಪಿಲ್ಲ. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನೇ ಹೊರತು, ಯಾವುದೇ ಗುಂಪಿನ ನಾಯಕನಲ್ಲ. ಗುಂಪುಗಾರಿಕೆಗೆ ಅವಕಾಶವಿಲ್ಲ. ನನ್ನದು ಯಾವ ಗುಂಪು ಇಲ್ಲ, ಬೇರೆಯವರ ಗುಂಪೂ ಇಲ್ಲ. ಇರುವುದು ಒಂದೇ ಗುಂಪು, ಅದು ಕಾಂಗ್ರೆಸ್. ಎಲ್ಲರೂ ಇದೇ ಹಾದಿಯಲ್ಲಿ ಸಾಗುತ್ತಾರೆ. ಸಣ್ಣ-ಪುಟ್ಟ ವಿಚಾರಗಳನ್ನು ನಾನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ನನ್ನ ಹೆಸರನ್ನು ಯಾರೂ ಹೇಳಬಾರದು. ಸದ್ಯ ಮುಂಬರುವ ಚುನಾವಣೆಗಳಲ್ಲಿ ಗೆಲ್ಲಬೇಕು. ಕೊರೋನಾ ಸಮಯದಲ್ಲಿ ಜನರನ್ನು ಉಳಿಸೋಣ. ಆರ್ಥಿಕ ಸಂಕಟಕ್ಕೆ ಪರಿಹಾರ ಕೊಡಲು ಶ್ರಮಿಸೋಣ.

* ನಾನು ಈ ಹಿಂದೆ ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ನನಗೆ ಶೇ. 95 ರಷ್ಟು ಸಹಕಾರ ಸಿಗುತ್ತಿದೆ. ಉಳಿದ ಶೇ. 5 ರಷ್ಟು ಜನ ಕೊರೋನಾ ವಿಚಾರವಾಗಿ ಗಾಬರಿಯಾಗಿದ್ದಾರೆ. ಮನೆಯಿಂದ ಈಚೆ ಬರಲು ಹೆದರುತ್ತಿದ್ದಾರೆ. ಖರ್ಗೆ ಅವರು, ಸಿದ್ದರಾಮಯ್ಯ ಅವರು, ಹರಿಪ್ರಸಾದ್, ದೇಶಪಾಂಡೆ ಅವರು, ಹೆಚ್.ಕೆ ಪಾಟೀಲ್, ಕೆ.ಎಚ್ ಮುನಿಯಪ್ಪ ಅವರು ಹೇಳಿದ ಕಡೆಯೆಲ್ಲ ಹೋಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಆ ಮೂಲಕ ಎಲ್ಲ ಹಿರಿಯ ನಾಯಕರು ನಮಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಕೊಟ್ಯಂತರ ರೂಪಾಯಿ ಸ್ವಂತ ಹಣ ಕೊಟ್ಟು ಲಸಿಕೆ ಹಾಕಿಸುತ್ತಿದ್ದಾರೆ. ಇದಕ್ಕಿಂತ ಇನ್ನೇನು ಸಹಕಾರ ಬೇಕು.

* ಮೈಸೂರು ಮೇಯರ್ ವಿಚಾರದ ಜವಾಬ್ದಾರಿಯನ್ನು ಕಾರ್ಯಾಧ್ಯಕ್ಷರಾದ ಧೃವನಾರಾಯಣ್ ಹಾಗೂ ಸ್ಫಳೀಯ ಅಧ್ಯಕ್ಷರಿಗೆ ನೀಡಿದ್ದೇನೆ. ಸ್ಥಳೀಯ ಪರಿಸ್ಥಿತಿ ಅವಲೋಕಿಸಿ ತೀರ್ಮಾನಿಸಲು ಹೇಳಿದ್ದೇನೆ.

ಬಿಜೆಪಿಯಲ್ಲಿ ರಾಜೀನಾಮೆ ನೀಡುವ ಬ್ಲಾಕ್ ಮೇಲ್ ಗಳು

 ನಡೆಯುತ್ತಲೇ ಇವೆ. ನಾನ್ಯಾಕೆ ಅವರ ವಿಚಾರ ಮಾತನಾಡಲಿ. ಅವರು ಪಕ್ಷಕ್ಕೆ ಬರುವ ಅರ್ಜಿ ಬಂದಾಗ ಆ ಬಗ್ಗೆ ಮಾತನಾಡೋಣ. ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಒದಗಿಸಲು ಹೋರಾಟ ಮಾಡುತ್ತಿದ್ದೇವೆ. ರಾಜ್ಯದ ಜನ ಕೂಡ ಎಲ್ಲವನ್ನು ನೋಡುತ್ತಿದ್ದಾರೆ. ವಿರೋಧ ಪಕ್ಷವಾಗಿ ನಾವು ಈ ವಿಚಾರದಲ್ಲಿ ಸುಮ್ಮನೆ ಕೂರುವುದಿಲ್ಲ. ಈ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಉತ್ತರ ಕೊಡಬೇಕು. ತಮಿಳುನಾಡಿನಲ್ಲಿ ಮಾಜಿ ಸಚಿವರ ಅತ್ಯಾಚಾರ ಪ್ರಕರಣ ಏನಾಗಿದೆ? ಕರ್ನಾಟಕದಲ್ಲಿ ಯಾಕಾಗುತ್ತಿಲ್ಲ? ರಾಜ್ಯದ ಪೊಲೀಸ್ ವ್ಯವಸ್ಥೆ ಹಾಗೂ ಕಾನೂನಿಗೆ ಕಳಂಕ ಬರುತ್ತಿದೆ. ಆರೋಪಿಗಳಿಗೆ ರಕ್ಷಣೆ ನೀಡಲಾಗುತ್ತಿದೆ. ಪ್ರಕರಣ ತಿರುಚಲು ಯತ್ನಿಸುತ್ತಿದ್ದಾರೆ.

* ಬಿಜೆಪಿ ಶಾಸಕರೇ ಮಾಡಿರುವ ಭ್ರಷ್ಟಾಚಾರ ಆರೋಪಗಳ ಕುರಿತು ಚರ್ಚೆ ಮಾಡಲು ವರ್ಚುವಲ್ ಸಭೆ ಕರೆಯಿರಿ ಅಂತಾ ಅಗ್ರಹಿಸಿದ್ದೇವೆ. ಈ ವಿಚಾರವಾಗಿ ತನಿಖೆ ಮಾಡಲು ಜಂಟಿ ಸದನ ಸಮಿತಿ ರಚಿಸಲು ಒತ್ತಾಯಿಸಿದ್ದೇವೆ. ನೀರಾವರಿ ಖಾತೆ ಇಟ್ಟುಕೊಂಡಿರುವ ಮುಖ್ಯಮಂತ್ರಿಗಳು ಈ ಆರೋಪಗಳಿಗೆ ಉತ್ತರ ನೀಡದೇ, ಇವುಗಳನ್ನು ನಿಜ ಎಂದು ಒಪ್ಪಿಕೊಂಡಿದ್ದಾರೆ. ಕೊರೋನಾ ಪರಿಸ್ಥಿತಿಯಿಂದಾಗಿ ಸರ್ಕಾರದ ಭ್ರಷ್ಟಾಚಾರ ವಿರುದ್ಧ ದೊಡ್ಡಮಟ್ಟದ ಹೋರಾಟ ಮಾಡಲು ಆಗುತ್ತಿಲ್ಲ.

* ಸಿದ್ದರಾಮಯ್ಯ ಅವರ ಕಾಲದಲ್ಲಿ ಬಂದ ವಿಚಾರಗಳ ಬಗ್ಗೆ ಬಿಜೆಪಿಯವರ ಹೋರಾಟ ನೋಡಿದ್ದೇವೆ. ಕುಮಾರಸ್ವಾಮಿ ಅವರ ಸರ್ಕಾರ ಸಮಯದಲ್ಲಿ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಯಡಿಯೂರಪ್ಪನವರು ಸಿಬಿಐಗೆ ಕೊಟ್ಟರು. ಈಗ ಅವರದೇ ಸರ್ಕಾರ, ಅವರದೇ ಪಕ್ಷದ ಶಾಸಕರು ಆರೋಪ ಮಾಡಿದ್ದು, ಈಗಲೂ ಸಿಬಿಐಗೆ ನೀಡಲಿ. ಹಳೇ ಪ್ರಕರಣದಲ್ಲಿ ಸಿಬಿಐನವರು ನಮ್ಮ ನಾಯಕರಾದ ಬ್ರಿಜೇಶ್ ಕಾಳಪ್ಪ ಅವರಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಿದ್ದರು. ಪಕ್ಷದ ವಕ್ತಾರರಿಗೂ ಕದ್ದಾಲಿಕೆಗೂ ಏನು ಸಂಬಂಧ?

Leave a Reply

Your email address will not be published. Required fields are marked *