January 11, 2026

ಆರಗ ಜ್ಞಾನೇಂದ್ರರಿಗೆ ಅಲ್ಪನಿಗೆ ಐಶ್ವರ್ಯ ಸಿಕ್ಕ ಹಾಗೇ ಆಗಿದೆ: ಬಿ.ಕೆ ಸಂಗಮೇಶ್

ಶಿವಮೊಗ್ಗ : ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರು ಅಲ್ಪನಿಗೆ ಐಶ್ವರ್ಯ ಸಿಕ್ಕ ರೀತಿಯಲ್ಲಿ ಆಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಬಿ.ಕೆ ಸಂಗಮೇಶ್ ಟೀಕಿಸಿದ್ದಾರೆ.

ಗ್ಯಾಂಗ್ ರೇಪ್‍ನಲ್ಲಿ ಅರಗ ಜ್ಞಾನೇಂದ್ರ ಅವರ ಹೇಳಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜ್ಞಾನೇಂದ್ರ ಅವರು ಅಲ್ಪನಿಗೆ ಐಶ್ವರ್ಯ ಸಿಕ್ಕ ರೀತಿಯಲ್ಲಿ ಆಡುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆ ಅವರಿಗೆ ಫಿಟ್ ಆಗಿತ್ತು. ಶಾಂತಿ ಕಾಪಾಡೋದನ್ನು ಬಿಟ್ಟು, ಅಶಾಂತಿ ಮೂಡಿಸುತ್ತಿರುವುದು ದುರಾದೃಷ್ಟಕರವಾದ ಸಂಗತಿಯಾಗಿದೆ. ಅಶಾಂತಿ ಮೂಡಿಸುವ ಗೃಹ ಸಚಿವರು ನಮ್ಮ ಜಿಲ್ಲೆಗೆ ಸಿಕ್ಕಿರುವುದು ದುರಾದೃಷ್ಟ ಎಂದರು.

ಪ್ರಚೋದನೆ ಮೂಡಿಸಲು ಈ ರೀತಿ ಹೇಳಿಕೆ ನೀಡಿದ್ದಾರೆ. ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ನಮ್ಮ ಪಕ್ಷದ ಮೇಲೆ ದೂರನ್ನು ಹೇಳುತ್ತಿದ್ದಾರೆ. ಅವರಿಗೆ ಯಾವುದೇ ರೀತಿಯ ಮಾಹಿತಿಗಳಿಲ್ಲ. ಅದಕ್ಕೆ ಈ ರೀತಿಯ ಹೇಳಿಕೆಗಳನ್ನು ನೀಡಿ ಅಶಾಂತಿಯನ್ನು ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದರು. 

ಜನರಿಗೆ ಕಾಂಗ್ರೆಸ್ ಬಗ್ಗೆ ತಪ್ಪು ಮಾಹಿತಿ ನೀಡುವ ಮೂಲಕ ತೇಜೋವಧೆ ಮಾಡಲು ಹೋಗುತ್ತಿದ್ದಾರೆ. ಆದರೆ ಜನರು ನಮ್ಮ ಪರ ಇದ್ದಾರೆ. ಮುಂದಿನ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.





ನಿರಂತರ ಸ್ಥಳೀಯ ಸುದ್ದಿಯನ್ನು ಪಡೆಯಲು ಪೋಸ್ಟ್ ಮ್ಯಾನ್ ನ್ಯೂಸ್ ನ ಫೇಸ್‌ಬುಕ್‌ ಪೇಜ್ ನ್ನು ಲೈಕ್ ಮಾಡಿ. 👇👇👇



About The Author

Leave a Reply

Your email address will not be published. Required fields are marked *