ರಿಪ್ಪನ್ ಪೇಟೆ: ಪಟ್ಟಣದ ಬಹುದಿನಗಳ ಬೇಡಿಕೆಯಾಗಿದ್ದ ಮೆಟ್ರಿಕ್ ಪೂರ್ವ ಬಾಲಕರ ವಿಧ್ಯಾರ್ಥಿ ನಿಲಯದ ನೂತನ ಕಟ್ಟಡಕ್ಕೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸುಮಾರು ನಾಲ್ಕು ಕೋಟಿ ಇಪ್ಪತ್ತಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ಶಾಸಕರಾದ ಹರತಾಳು ಹಾಲಪ್ಪ ಇಂದಿಲ್ಲಿ ತಿಳಿಸಿದರು.
ರಿಪ್ಪನ್ ಪೇಟೆ ಯಲ್ಲಿರುವ ಪ್ರಸ್ತುತ ಬಾಲಕರ ವಸತಿ ನಿಲಯವು ಶಿಥಿಲ ಅವಸ್ಥೆಯಲ್ಲಿರುವುದರಿಂದ ಬಹುದಿನದ ಬೇಡಿಕೆಯಾಗಿದ್ದ ವಸತಿ ನಿಲಯದ ಕಟ್ಟಡಕ್ಕೆ ಅನುಮೋದನೆ ಸಿಕ್ಕಿರುವುದರಿಂದ ಹರತಾಳು ಹಾಲಪ್ಪ ನವರು ಸ್ಥಳಕ್ಕೆ ಭೇಟಿ ನೀಡಿ ಕಟ್ಟಡದ ನಿರ್ಮಾಣದ ಬಗ್ಗೆ ಇಂಜಿನಿಯರ್ ಹಾಗೂ ಸಿಬ್ಬಂದಿಗಳೊಂದಿಗೆ ಚರ್ಚೆ ನಡೆಸಿ ಕಟ್ಟಡದ ನೀಲಿ ನಕ್ಷೆಯನ್ನು ವೀಕ್ಷಿಸಿ ಮಾಡಬೇಕಾದ ಬದಲಾವಣೆ ಹಾಗು ಸಲಹೆಯನ್ನು ನೀಡಿದರು..
ಈ ಸಂದರ್ಭದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ ಶಾಸಕರು ಇಲ್ಲಿ ನಿರ್ಮಿಸಲಾಗುವ ಎರಡಂತಸ್ತಿನ ಕಟ್ಟಡವು ಎಲ್ಲಾ ತರಹದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಹೊಂದಿರುತ್ತದೆ.ಮುಂದಿನ ಹದಿನೈದು ದಿನಗಳ ಒಳಗೆ ಗುದ್ದಲಿಪೂಜೆ ನೆರವೇರಿಸಿ,ಆದಷ್ಟು ಬೇಗ ಕಟ್ಟಡ ಉದ್ಘಾಟಿಸಲಾಗುವುದು ಎಂದು ಶಾಸಕ ಹಾರತಾಳು ಹಾಲಪ್ಪ ತಿಳಿಸಿದ್ದಾರೆ.
ಕಟ್ಟಡ ನಿರ್ಮಾಣವಾಗುವವರೆಗೆ ವಸತಿಗೃಹದಲ್ಲಿರುವ ಬಾಲಕರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಶಾಸಕರು ನಿರ್ದೇಶಿಸಿದರು.
ಈ ಸಂಧರ್ಭದಲ್ಲಿ ಅಸಮರ್ಪಕ ಕಟ್ಟಡ ನೀಲನಕ್ಷೆ ಸಿದ್ದಪಡಿಸಿದ್ದ ಸಮಾಜ ಕಲ್ಯಾಣ ಇಲಾಖೆಯ ಇಂಜಿಯರರನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಸಮರ್ಪಕ ಕಟ್ಟಡ ನೀಲನಕ್ಷೆ ಸಿದ್ದಪಡಿಸುವಂತೆ ಸೂಚಿಸಿದರು.
ಬಹುದಿನಗಳ ಬೇಡಿಕೆಯಾಗಿದ್ದ ಮೆಟ್ರಿಕ್ ಪೂರ್ವ ಬಾಲಕರ ವಿಧ್ಯಾರ್ಥಿ ನಿಲಯವನ್ನು ನಿರ್ಮಿಸುವಲ್ಲಿ ಶಾಸಕರು ಸಫಲರಾಗಿರುವುದಕ್ಕೆ ಸಾರ್ವಜನಿಕರು ಶಾಸಕರನ್ನು ಪ್ರಶಂಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರಾದ ಮಂಜುಳಾ ಕೇತಾರ್ಜಿರಾವ್, ಮುಖಂಡರಾದ ಆರ್ ಟಿ ಗೋಪಾಲ, ಎಂ ಬಿ ಮಂಜುನಾಥ್,ಎನ್ ಸತೀಶ್, ಸುಂದರೇಶ್,ಸುಧೀಂದ್ರ
ಪೂಜಾರಿ, ಎ ಟಿ ನಾಗರತ್ನಮ್ಮ ಹಾಗೂ ಇನ್ನಿತರರು ಉಪಸ್ಥಿತರಿದ್ದರು.