ಶಿವಮೊಗ್ಗ:ಯುವಕನೊಬ್ಬ ಪ್ರೀತಿಯ ಹೆಸರಲ್ಲಿ ಮೋಸ ಮಾಡಿದ ಕಾರಣ ಮುಗ್ಧ ಯುವತಿಯೊಬ್ಬಳು ಬಲಿಯಾಗಿದ್ದಾಳೆ. ಬದುಕಿ ಬಾಳಬೇಕಾಗಿದ್ದ ಯುವತಿಯು ಮದುವೆಗೆ ಮೊದಲೇ ಗರ್ಭವತಿಯಾಗಿ ಮಗುವಿನೊಂದಿಗೆ ತಾಯಿಯೂ ಅಸುನೀಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ ಕುಂಸಿಯ ಅಶ್ವಿನಿಗೆ ಭದ್ರಾವತಿ ಮೂಲದ ಬಸವರಾಜ್ ಎಂಬ ಯುವಕನೊಂದಿಗೆ ಪರಿಚಯವಾಗಿ ಇಬ್ಬರಲ್ಲೂ ಪ್ರೇಮಾಂಕುರವಾಗುತ್ತದೆ.ನಂತರ ಬಸವರಾಜ್ ಯುವತಿಯನ್ನು ಗರ್ಭವತಿಯನ್ನಾಗಿ ಮಾಡಿದ್ದನು. ಮನೆಯಲ್ಲಿ ತಾನು ಗರ್ಭವತಿ ಎಂದು ಹೇಳಿಕೊಳ್ಳದ ಅಶ್ವಿನಿ ಹೊಟ್ಟೆ ಮುಂದೆ ಬಂದಿರುವುದು ಗ್ಯಾಸ್ಟ್ರಿಕ್ ನಿಂದ ಎಂದು ಸಾಗು ಹಾಕಿದ್ದಳು.
ಏಳು ತಿಂಗಳಿಗೆ ಪ್ರಸವಪೂರ್ವ ಗರ್ಭಪಾತವಾಗಿ ಬ್ಲೀಡಿಂಗ್ ಆಗಿದೆ. ಭಾನುವಾರ ಬೆಳಿಗ್ಗೆ ಮೆಗ್ಗಾನ್ ಗೆ ಬಂದು ಅಶ್ವಿನಿ ದಾಖಲಾಗಿದ್ದಾಳೆ. ಆದರೆ ಏಳು ತಿಂಗಳ ಮಗು ಹೊಟ್ಟೆಯೊಳಗೆ ಅಸುನೀಗಿದ್ದು ನಂತರ ಚಿಕಿತ್ಸೆ ಫಲಕಾರಿಯಾಗದೇ ಅಶ್ವಿನಿ ಕೂಡಾ ಮೃತಪಟ್ಟಿದ್ದಾಳೆ.
ಯುವತಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತ ಪಟ್ಟಿರುವ ವಿಷಯ ಅಶ್ವಿನಿ ಕುಟುಂಬದವರೆಗೆ ತಿಳಿದೇ ಇರಲಿಲ್ಲ. ಪೊಲೀಸರಿಂದ ಕುಟುಂಬಕ್ಕೆ ಮಾಹಿತಿ ಸಿಕ್ಕಿದೆ.
ಅಶ್ವಿನಿ ಹಾಗೂ ಆಕೆಯ ಏಳು ತಿಂಗಳಿನ ಮಗುವಿನ ಸಾವಿಗೆ ಕಾರಣನಾದ ಬಸವರಾಜ್ ಹಾಗು ಮತ್ತಿಬ್ಬರು ಯುವಕರನ್ನು ಬಂಧಿಸಲು ಕುಂಸಿ ಪೊಲೀಸರು ಬಲೆ ಬೀಸಿದ್ದಾರೆ.
ವರದಿ : ದೇವರಾಜ್ ಆರಗ