ರಿಪ್ಪನ್ ಪೇಟೆ : ಕಳಪೆ ಚರಂಡಿ ಕಾಮಗಾರಿ,ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಬರುವೆ ಶಾಲೆಯ ಮುಂಭಾಗದ ರಸ್ತೆ

ರಿಪ್ಪನ್ ಪೇಟೆ: ಇಲ್ಲಿನ ಚೌಡೇಶ್ವರಿ ಬೀದಿಯ ಬರುವೆ ಶಾಲೆಯ ಮುಂಭಾಗ 2018 ರಲ್ಲಿ ಲಕ್ಷಾಂತರ ರೂ ಖರ್ಚು ಮಾಡಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ನಿರ್ಮಿಸಿದ್ದ ಪ್ರವಾಹ ನಿಯಂತ್ರಣ ಕಾಲುವೆಯ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು ನಿರ್ಮಿಸಿದ್ದ ಅಷ್ಟು ಚರಂಡಿಯು ಕುಸಿದು ಮುಚ್ಚಿ ಹೋಗಿದ್ದು ಈ ರಸ್ತೆಯು ಅಪಾಯಕ್ಕೆ ಆಹ್ವಾನ ಕೊಡುತ್ತಿದೆ.

ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಅನುದಾನದದಡಿ  ಲಕ್ಷಾಂತರ ವೆಚ್ಚದಲ್ಲಿ ಕೈಗೊಂಡ ಪ್ರವಾಹ ನಿಯಂತ್ರಣ ಚರಂಡಿ ನಿರ್ಮಾಣ ಕಾಮಗಾರಿ ಕಳಪೆಯಾಗಿ ಮುಚ್ಚಿ ಹೋಗಿದೆ.ಈ ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಯಾವುದೋ ಘಾಟಿಯಲ್ಲಿ ವಾಹನ ಚಲಾಯಿಸಿದ ಅನುಭವವಾಗುತ್ತದೆ.
ಕಾಮಗಾರಿ ನಡೆಸಿ ಮೂರು ವರ್ಷವಾಗಿಲ್ಲ, ಅಷ್ಟರಲ್ಲೇ ಚರಂಡಿ ಕುಸಿದು ಬಿದ್ದಿರುವುದು ಮೇಲ್ನೋಟಕ್ಕೆ ಕಳಪೆ ಎಂದು ಕಂಡು ಬಂದಿದೆ. ಕಾಮಗಾರಿ ಗುಣಮಟ್ಟ ಕಾಪಾಡಬೇಕಾದ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷದಿಂದ ಸರಕಾರದ ಲಕ್ಷಾಂತರ ಹಣ ಪೋಲಾಗಿದೆ. ಇದನ್ನು ಆದಷ್ಟು ಬೇಗನೆ ಸರಿಪಡಿಸಿ ಇದನ್ನು ಆದಷ್ಟು ಬೇಗ ಸರಿಪಡಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಬೇಕಾಗಿದೆ.

ಈ ಬಗ್ಗೆ  ಬೇಸರ ವ್ಯಕ್ತಪಡಿಸಿರುವ ಸ್ಥಳೀಯ ನಿವಾಸಿ ರವಿ ಆಚಾರ್ ಈ ಅವೈಜ್ಞಾನಿಕ ಕಾಮಗಾರಿಯಿಂದ ಮನೆಗಳಿಗೆ ತೆರಳಲು ತೊಂದರೆಯಾಗುತ್ತಿದೆ,ಬಹುತೇಕ ಕೆಸರುಮಯ ವಾತಾವರಣ ಹಾಗೂ ರಸ್ತೆ ಮೇಲೆ ಒಡಾಡಲು ಭಯದ ವಾತಾವರಣ ನಿರ್ಮಾಣವಾಗಿದೆ.ಕೂಡಲೇ ಸರಿಪಡಿಸದೇ ಇದ್ದಲಿ ಈ ರಸ್ತೆಯಲ್ಲಿ ಯಾವುದಾದರು ವಾಹನ ಪಲ್ಟಿಯಾಗಿ ಪಕ್ಕದಲ್ಲಿ ಲಕ್ಷಾಂತರ ರೂ ವೆಚ್ಚ ಮಾಡಿ ನಿರ್ಮಿಸಿರುವ ಬರುವೆ ಶಾಲೆಯ ಕಾಂಪೌಡ್ ಗೆ ಹಾನಿಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ.
2016/17 ರಲ್ಲಿ ಮಳೆ ಬಂದು ರಿಪ್ಪನ್ ಪೇಟೆಯ ತೀರ್ಥಹಳ್ಳಿ ಹಾಗೂ ಶಿವಮೊಗ್ಗ ರಸ್ತೆಯ ಕೆಲವು ವಾಸದ ಮನೆಗೆ ನೀರು ನುಗ್ಗಿದ ಪರಿಣಾಮ ಅನೇಕ ನಷ್ಟವುಂಟಾಗಿತ್ತು ಈ ಕಾರಣಕ್ಕಾಗಿಯೇ ಪರಿಹಾರವಾಗಿ 2017 ರ ಆಗಸ್ಟ್ ತಿಂಗಳಲ್ಲಿ ಈ ಕಾಮಗಾರಿ ಪ್ರಾರಂಭವಾಗಿ ಮೇ 2018 ರಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು.ಆದರೆ ಕಾಮಗಾರಿ ಪೂರ್ಣವಾಗಿ ಕೇವಲ 3 ವರ್ಷದಲ್ಲಿ ಸರ್ಕಾರದ ಲಕ್ಷಾಂತರ ಹಣ ಪೋಲಾಗಿದೆ.ಇದಕ್ಕೆ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಕೈಗೊಳಳ ಬೇಕಾಗಿದೆ.

ಇಲ್ಲಿನ ರಸ್ತೆಯಂತು ನೋಡುವ ಹಾಗಿಲ್ಲ ಸುಮಾರು 20 ವರ್ಷಗಳ ಹಿಂದೆ ಅಂದಿನ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಸ್ವರ್ಣ ಪ್ರಭಾಕರ್ ರವರ ಅನುದಾನದಲ್ಲಿ ರಸ್ತೆಯಾಗಿದ್ದು ಬಿಟ್ಟರೆ ಇಲ್ಲಿವರೆಗೂ ಆ ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ಗೋಜಿಗೆ ಯಾವೊಬ್ಬ ಅಧಿಕಾರಿಯಾಗಲಿ,ಜನಪ್ರತಿನಿಧಿಯಾಗಲಿ ಹೋಗದೇ ಇರುವುದು ದುರದೃಷ್ಟಕರ.
ಒಟ್ಟಾರೆಯಾಗಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.








Leave a Reply

Your email address will not be published. Required fields are marked *