Headlines

ದಳಪತಿಗಳನ್ನು ಹಾಡಿ ಹೊಗಳಿದ ಸಿ ಎಂ ಇಬ್ರಾಹಿಂ

ಭದ್ರಾವತಿ : ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ  ಕುಮಾರ ಸ್ವಾಮಿಯವರನ್ನು ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಇಂದು ಹಾಡಿಹೊಗಳಿದ್ದಾರೆ.‌

ಅವರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡಿನಲ್ಲಿ ನಡೆದ ಮಾಜಿ ಶಾಸಕ ದಿ. ಅಪ್ಪಾಜಿಗೌಡರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ  ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕಿದೆ ಎಂದರು.

ಯಡಿಯೂರಪ್ಪ ಫೇಲಾದ್ರೆ, ಕುಮಾರಸ್ವಾಮಿ ಆಹಾ ರುದ್ರ, ಆಹಾ ದೇವ ಅಂತಾ ಖಡ್ಗ ಹಿಡಿದುಕೊಂಡು ಹೊರಡಬೇಕಾಗುತ್ತದೆ.ಅಂತಹ ಕೆಲಸವನ್ನು ನಾವು ಮಾಡುತ್ತೇವೆ.ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಕೈ ಬಲಪಡಿಸುತ್ತೆವೆ ಎಂದು ಇಬ್ರಾಹಿಂ ತಿಳಿಸಿದರು.

ಪಂಜಾಬ್ ನಲ್ಲಿ ಗೋದಿಯ ಒಂದು ತಳಿಗೆ ದೇವೆಗೌಡ ಎಂದು ಹೆಸರಿಡಲಾಗಿದೆ.ದೇವೇಗೌಡರು ಅಪ್ಪಿತಪ್ಪಿ ಒಕ್ಕಲಿಗರ ಜಾತಿಯಲ್ಲಿ ಹುಟ್ಟಿದರು. ಬೇರೆ ಜಾತಿಯಲ್ಲಿ ಹುಟ್ಟಿದ್ದರೆ ಹಳ್ಳಿ ಹಳ್ಳಿಗಳಲ್ಲಿ ಜನರು ಅವರ ಪ್ರತಿಮೆ ಅನಾವರಣ ಮಾಡುತ್ತಿದ್ದರು ಎಂದರು.

ಕರ್ನಾಟಕದಲ್ಲಿ ಇವತ್ತಿನಿಂದ ಶುಭ ಕಾಲ ಆರಂಭವಾಗಿದೆ,ರಾಜ್ಯದಲ್ಲಿ ಉತ್ತಮವಾದ ಕಾಲ ಕಾಣುತ್ತೇವೆ. ದೇವೇಗೌಡರು 11 ತಿಂಗಳು ಪ್ರಧಾನಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಸಂಧರ್ಭದಲ್ಲಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನು ಸಿ ಎಂ ಇಬ್ರಾಹಿಂ ಹಾಡಿ ಹೊಗಳಿದರು.

Leave a Reply

Your email address will not be published. Required fields are marked *