Headlines

ಈ ಬಾರಿ ಶಿವಮೊಗ್ಗದಲ್ಲಿ ವೈಭವದ ದಸರಾಕ್ಕೆ ಮಹಾನಗರ ಪಾಲಿಕೆ ನಿರ್ಧಾರ !

ಶಿವಮೊಗ್ಗ : ಈ ಬಾರಿ ಮೈಸೂರು ದಸರಾ ನೆಡಸಲು ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತಿದ್ದಂತೆ ಶಿವಮೊಗ್ಗದಲ್ಲಿಯೂ ಅದ್ದೂರಿ ದಸರಾ ನಡೆಸಲು ಇಂದು ಮಹಾನಗರ ಪಾಲಿಕೆಯಲ್ಲಿ ನಡೆದ
ಸಭೆಯಲ್ಲಿ ತೀರ್ಮಾನಿಸಲಾಗಿದೆ. 

ಸರ್ಕಾರ ಅನುದಾನ ನೀಡಿದರೆ 9 ದಿನವೂ ವೈಭವದ ದಸರಾ ಆಚರಣೆ ಮಾಡಲು ತೀರ್ಮಾನಿಸಲಾಗಿದ್ದು ಒಂದು ವೇಳೆ ಅನುದಾನ ನೀಡದಿದ್ದರೆ 50 ಲಕ್ಷ ಪಾಲಿಕೆ ಬಜೆಟ್ ನಲ್ಲಿ ಆಚರಿಸುವಂತೆ ತೀರ್ಮಾನ
ಕೈಗೊಳ್ಳಲಾಗಿದೆ. 

ದಸರಾ ವಿಷಯದಲ್ಲಿ ಮೊದಲು ಮಾತನಾಡಿದ ಹೆಚ್ ಸಿ ಯೋಗೇಶ್ ದಸರಾಕ್ಕೆ ಈvಬಾರಿ ಅನುದಾನವೆಷ್ಟು ಎಂಬುದು ಘೋಷಣೆ ಆದರೆ ಚರ್ಚೆಗೆ ಅನುಕೂಲವಾಗಲಿದೆ ಎಂದರು. ನಂತರ ಧೀರಜ್ ಮಾತನಾಡಿ ಅನುದಾನವನ್ನ ಸರ್ಕಾರಕ್ಕೆ ಕೋರಲಾಗಿದೆ ಸರ್ಕಾರ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ ಆದರೆ ದಸರಾಕ್ಕೆ ಸಿದ್ಧತೆ ಮಾಡಿಕೊಳ್ಳೋಣ. ಇಲ್ಲವೆಂದರೆ ನಮ್ಮ ಬಜೆಟ್ ನಲ್ಲಿಯೇ ನಡೆಸೋಣವೆಂದರು.
ನಂತರ ಮಾತನಾಡಿದ ನಾಗರಾಜ್‌ ಕಂಕಾರಿ ಸಂಪ್ರದಾಯ ದಸರಾಕ್ಕೆ ಮೊದಲು ಒತ್ತು ನೀಡಿ ಆನಂತರ  ಕಳೆದ ಬಾರಿ ಸರಳವಾಗಿತ್ತು ಈ ಬಾರಿ ದಸರಾ ಅದ್ದೂರಿಯಾಗಿ ನಡೆಸುವಂತೆ ಕೋರಿದರು.
ಇದಕ್ಕೆ ವಿಶ್ವನಾಥ್ ಬೆಂಬಲಿಸಿ ಅದ್ದೂರಿ ದಸರಾಕ್ಕೆ ಒತ್ತು
ನೀಡಲಾಗಿದೆ. ಸರ್ಕಾರದ ಸುತ್ತೋಲೆ ನಿರ್ದೇಶನ ನೀಡದೆ ಹಬ್ಬ ಆಚರಣೆ ಹೇಗೆ ಮಾಡಲಾಗುತ್ತದೆ ಎಂದು ರಮೇಶ್ ಹೆಗ್ಡೆ ಪ್ರಶ್ನಿಸಿದರು.

ಈ ಎಲ್ಲಾ ಪ್ರೆಶ್ನೆಗಳಿಗೆ ಉತ್ತರಿಸಿದ ಮೇಯರ್ ಸುನೀತಾ ಅಣ್ಣಪ್ಪ ಸರ್ಕಾರದ ಆದೇಶ ಇನ್ನೂ ಬಂದಿಲ್ಲ. ಹಬ್ಬ ಆರಂಭಗೊಳ್ಳಲು ಎರಡು ಮೂರು ದಿನ ಮುಂಚೆ ಬಂದರೆ ನಿರ್ದೇಶನಕ್ಕೆ ಕಾಯಲು ಕಷ್ಟವಾಗುತ್ತದೆ. ಮೂರು ದಿನ ಹಬ್ಬ ಆಚರಣೆಗೊಂಡರೆ ಸದಸ್ಯರ
ಸಲಹೆಏನು ಒಂದು ವೇಳೆ 9 ದಿನದ ಆದೇಶ ಬಂದರೆ ಹೇಗೆ ಎಂಬ ಸಲಹೆ ಏನು ನೀಡಿ ಎಂದು ಕೋರಿದರು.

ಈ ವಿಷಯಕ್ಕೆ ಇಂಡೋರ್ ಹಾಗೂ ಔಟ್ ಡೋರ್ ನಡೆಸಲು ಪಾಲಿಕೆ ಸಿದ್ದವಾಗಿದೆ. ಕನ್ನಡಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ನೇತೃತ್ವದಲ್ಲಿ ಭೇಟಿ ಮಾಡಿ ಪ್ರತಿ ವರ್ಷವೂ ಸರ್ಕಾರ ಕೋಟಿ ಹಣ ಕೊಡುತ್ತಿತ್ತು. ಈ ಬಾರಿ ಕೊಡಿ ಎಂದು ಕೋರಿದ್ದೇವೆ ಎಂದರು.

ನಂತರ ಸರ್ಕಾರದಿಂದ ನಿಯಮಾವಳಿ ಬಂದಿಲ್ಲವೆಂದರೆ ಹೇಗೆ ಯಾವ ಗೈಡ್ ಲೈನ್ ಆಧಾರದ ಮೇಲೆ ಹಬ್ಬ ಆಚರಿಸುತ್ತೀರಾ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಆಯುಕ್ತ ಚಿದಾನಂದ ವಟಾರೆ ವೈಯುಕ್ತಿಕ ಆಚರಣೆಗೆ ಮಾತ್ರ ಗೈಡ್ ಲೈನ್ ಇದೆ. ರಾಜಕೀಯ ಮತ್ತು ಸಾರ್ವಜನಿಕ ಆಚರಣೆಗೆ ಇಲ್ಲ. 

ಸರ್ಕಾರದಿಂದ ಕಳೆದ ಬಾರಿ ದಸರಾಕ್ಕೂ ಅನುದಾನ
ಬಂದಿರಲಿಲ್ಲ. ಕಳೆದ ಬಾರಿ 40 ಲಕ್ಷ ಖರ್ಚಾಗಿದೆ. ಈ ಬಾರಿ 2 ಗ್ರಾಂಟ್ಸ್ ಬರಬಹುದು ಎಂಬ ನಿರೀಕ್ಷೆ. 38 ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ. ಈಗ ಪ್ರಸ್ತುತ 29 ಕೋಟಿ ಹಣ ಸಂಗ್ರಹವಾಗಿದೆ. ಶೇ. 70.7 ರಷ್ಟು ಹಣ ಸಂಗ್ರಹವಾಗಿದೆ ಎಂದರು.
ಒಂದು ವೇಳೆ ಅನುದಾನ ಬರದಿದ್ದರೆ 50 ಲಕ್ಷ ಹಣವನ್ನ ತೆರಿಗೆ ಹಣದಿಂದ ಬಳಸಿಕೊಳ್ಳುವ ನಿರೀಕ್ಷೆ ಆಗಿದೆ ಎಂದು ಆಯುಕ್ತರು ಸಭೆಗೆ ತಿಳಿಸಿದರು. 15 ದಿನ ಪೂರ್ವಸಿದ್ಧತೆ ಬೇಕು,ಕಮಿಟಿ ರಚಿಸಬೇಕು ಎಂದು ನಾಗರಾಜ್‌ ಕಂಕಾರಿ ಮತ್ತು ಯೋಗೀಶ್
ಆಗ್ರಹಿಸಿದರು.

ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಮಾತನಾಡಿ ಅದ್ದೂರಿ ದಸರಾ ಮಾಡೇ ಮಾಡುತ್ತೇವೆ. ದಸರಾವನ್ನ ಹಂತ ಹಂತವಾಗಿ ವೈಭವದಿಂದ ಆಚರಿಸುತ್ತಾ ಬರುತ್ತದೆ. ಮೈಸೂರು ಮತ್ತು ಕೊಡಗು ನಮಗೆ ದಸರಾ ಹಬ್ಬಕ್ಕೆ ಮಾದರಿ. ಅದರಂತೆ ಶಿವಮೊಗ್ಗದಲ್ಲಿ ಆಚರಣೆ ಮಾಡಲಾಗುವುದು. 

ಎರಡು ಕೋಟಿ ರೂ ಹಣ ತರುವುದು ಪಾಲಿಕೆ ಜವಬ್ದಾರಿ ಎಂದರು. 14 ಕಮಿಟಿ ರಚಿಸಿಕೊಳ್ಳೋಣ, ವೈಭವ ದಸರಾಕ್ಕೆ ಹೇಗೆ ತಯಾರಿ ಮಾಡಿಕೊಳ್ಳೋಣವೆಂದು ಚೆನ್ನಿ ತಿಳಿಸಿದರು. ಮೇಯರ್ ಸುನೀತಾ ಅಣ್ಣಪ್ಪ ಮಾತನಾಡಿ, ಮೈಸೂರಿನಲ್ಲಿ ದಸರಾ ನಡೆಸುವಂತೆ ತೀರ್ಮಾನಿಸಲಾಗಿದೆ.

ಅದರಂತೆ ಶಿವಮೊಗ್ಗದಲ್ಲಿ ಆಚರಿಸುತ್ತೇವೆ ಎಂದು ಭರವಸೆ ನೀಡಿದರು.ಅರಮನೆಯಿಂದ ಉತ್ಸವ ಹೋರಡಬೇಕು.ಸ್ಮಾರ್ಟ್ ಸಿಟಿ ಕಾಮಗಾರಿ ನಿಲ್ಲಿಸಿ ಎಂದು ಹೇಳಿದ್ದಕ್ಕೆ ಪಾಲಿಕೆ ಆಯುಕ್ತರು ಮಾತನಾಡಿ ಸ್ಮಾರ್ಟ್ ಸಿಟಿಕಾಮಗಾರಿಗಾಗಿ ಈಗಾಗಲೇ ಅಗೆಯಲಾಗಿದೆ. ಹಾಗಾಗಿ ಮುಂಭಾಗದಿಂದ ಹೊರಡಲು ಚೆನ್ನಬಸಪ್ಪ ಸೂಚನೆ ನೀಡಿದರು. 

Leave a Reply

Your email address will not be published. Required fields are marked *