Headlines

ಶಿವಮೊಗ್ಗ ವಿಧಾನ ಪರಿಷತ್ ಚುನಾವಣೆ ಬಿಜೆಪಿ ಅಭ್ಯರ್ಥಿ ಡಿ ಎಸ್ ಅರುಣ್ ಜಯಭೇರಿ

ಶಿವಮೊಗ್ಗ : ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಇಂದು ಘೋಷಣೆಯಾಗಿದ್ದು, ಬಿಜೆಪಿ ಅಭ್ಯರ್ಥಿ ಡಿ.ಎಸ್. ಅರುಣ್ 400 ಮತಗಳ ಅಂತರದಿಂದ ಭರ್ಜರಿ ಜಯಭೇರಿ
ಭಾರಿಸಿದ್ದಾರೆ.

ಇಂದು ಮುಂಜಾನೆ ಸಹ್ಯಾದ್ರಿ ಕಾಲೇಜಿನಲ್ಲಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ನೇತೃತ್ವದಲ್ಲಿ ಸ್ಟ್ರಾಂಗ್ ರೂಮ್ ತೆರೆದು ಮತ ಎಣಿಕೆ ಆರಂಭಿಸಲಾಯಿತು. 11:30ರ ಸುಮಾರಿಗೆ
ಫಲಿತಾಂಶ ಘೋಷಣೆಯಾಗಿದ್ದು, ಅರುಣ್ ಮೊದಲ
ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ್ದಾರೆ.

ಈ ಮೂಲಕ ರಾಜ್ಯದ ಹಿರಿಯ ರಾಜಕಾರಣಿ ಡಿ.ಹೆಚ್.
ಶಂಕರಮೂರ್ತಿ ಅವರ ಪುತ್ರ ತಮ್ಮ ಮೊದಲ
ಚುನಾವಣೆಯ ಗೆಲುವಿನಿಂದ ಪರಿಷತ್‌ ಪ್ರವೇಶಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಎಮ್‌ಎಲ್‌ಸಿ ಆರ್. ಪ್ರಸನ್ನಕುಮಾರ್ 1820 ಮತ ಪಡೆದಿದ್ದರೆ, ಬಿಜೆಪಿ ಅರುಣ್ 2208 ಮತಗಳನ್ನು ಪಡೆದುಕೊಂಡಿದ್ದಾರೆ.

ಅರುಣ್ ಗೆಲುವಿನ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಮತ್ತಷ್ಟು ಹೆಚ್ಚಿದ್ದು ಕಾಂಗ್ರೆಸ್ ಒಂದು ಪ್ರಮುಖ ಸ್ಥಾನವನ್ನು ಕಳೆದುಕೊಂಡಿದೆ.

About The Author

Leave a Reply

Your email address will not be published. Required fields are marked *