Headlines

Ripponpete | ಪಟ್ಟಣದ ಹೆಸರಾಂತ ವೈದ್ಯ ಡಾ. ಮಂಜುನಾಥ್ ರಾವ್ (ಕಿರಣ್ ಡಾಕ್ಟರ್) ನಿಧನ

Ripponpete | ಪಟ್ಟಣದ ಹೆಸರಾಂತ ವೈದ್ಯ ಡಾ. ಮಂಜುನಾಥ್ ರಾವ್ (ಕಿರಣ್ ಡಾಕ್ಟರ್) ನಿಧನ


ರಿಪ್ಪನ್‌ಪೇಟೆ ; ವಿಶ್ರಾಂತ ವೈದ್ಯರೂ ಹಾಗೂ ಜಿ ಎಸ್ ಬಿ ಸಮಾಜದ ಹಿರಿಯರಾದ ಡಾ. ಮಂಜುನಾಥ್ ರಾವ್ ( ಕಿರಣ್ ಡಾಕ್ಟರ್) ಇಂದು ಬೆಳಗ್ಗೆ 3:30 ಕ್ಕೆ ತೀರ್ಥಹಳ್ಳಿಯಲ್ಲಿರುವ ನಿವಾಸದಲ್ಲಿ ದೈವಾಧೀನರಾಗಿದ್ದಾರೆ.

ರಿಪ್ಪನ್‌ಪೇಟೆಯಲ್ಲಿ ಕಿರಣ್ ಕ್ಲಿನಿಕ್ ಎಂಬ ಹೆಸರಿನ ಚಿಕಿತ್ಸಾ ಕೇಂದ್ರದಲ್ಲಿ ಮೂವತ್ತು ವರ್ಷಕ್ಕೂ ಅಧಿಕ ಕಾಲ ಜನರ ಸೇವೆ ಸಲ್ಲಿಸಿದ್ದರು.ಬಡವರಿಗೆ ಉಚಿತವಾಗಿ ಸೇವೆ ನೀಡುತಿದ್ದರು. ವೈದ್ಯಕೀಯ ವೃತ್ತಿಯಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ ಮಂಜುನಾಥ್ ರಾವ್ ರವರ ಕ್ಲಿನಿಕ್ ಗೆ ಆ ಕಾಲದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ರೋಗಿಗಳು ಬರುತಿದ್ದರು.


ತೀರ್ಥಹಳ್ಳಿಯ ಕಿರಣ್ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ. ಗಣೇಶ್ ನಾಯಕ್ ರವರ ತಂದೆ ಡಾ.ಮಂಜುನಾಥ್ ರಾವ್(ಕಿರಣ್ ಡಾಕ್ಟರ್) ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 3:00 ಘಂಟೆಗೆ ತೀರ್ಥಹಳ್ಳಿಯಲ್ಲಿ ನೆರವೇರಲಿದೆ ಎಂದು ಅವರ ಕುಟುಂಬದ ಮೂಲದವರು ತಿಳಿಸಿದ್ದಾರೆ.

ಸಂತಾಪ : 

ರಿಪ್ಪನ್‌ಪೇಟೆ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ ಗಣನೀಯ ಸೇವೆ ಸಲ್ಲಿಸಿದ್ದ ಡಾ. ಮಂಜುನಾಥ್ ರಾವ್ (ಕಿರಣ್ ಡಾಕ್ಟರ್) ರವ ನಿಧನಕ್ಕೆ ಪಟ್ಟಣದ ಸಂಘ ಸಂಸ್ಥೆಗಳು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *