ಜಿಂಕೆ ಮಾಂಸದೂಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಭದ್ರಾವತಿ ತಾಲೂಕಿನ ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಭದ್ರಾವತಿ ತಾಲೂಕು ಹುಣಸೇಕಟ್ಟೆ ಗ್ರಾಮದ ವೆಂಕಟೇಶ್ ಎಂಬುವರ ಮನೆಯಲ್ಲಿ ಜಿಂಕೆಯ ಮಾಂಸವನ್ನು ಬೇಯಿಸಿ, ಊಟ ತಯಾರು ಮಾಡುವಾಗ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿ ವೇಳೆ, ಇವರ ಮನೆಯಲ್ಲಿ ಸುಮಾರು ಎರಡು ಕೆಜಿಯಷ್ಟು ಜಿಂಕೆ ಮಾಂಸ ದೊರಕಿದೆ. ಜೊತೆಗೆ ಮನೆ ಪರಿಶೀಲಿಸಿದಾಗ ಮಾಂಸವನ್ನು ಕತ್ತರಿಸುವ ಮರದ ತುಂಡು ಹಾಗೂ ಮಚ್ಚು ಪತ್ತೆಯಾಗಿದೆ. ವೆಂಕಟೇಶ್ ಜೊತೆ ಅವರ ಮಗ ಮಂಜುನಾಥ್ನನ್ನು ಸಹ ಬಂಧಿಸಲಾಗಿದೆ.
ಆರೋಪಿಗಳ ವಿರುದ್ಧ ವನ್ಯಜೀವಿ ಹತ್ಯೆ ಪ್ರಕರಣ ದಾಖಲಿಸಲಾಗಿದೆ. ದಾಳಿಯ ವೇಳೆ ಉಂಬ್ಳೆಬೈಲು ಆರ್ಎಫ್ಒ ತೇಜ್, ಡೆಪ್ಯೂಟಿ ಆರ್ಎಫ್ಒ ಅಬ್ದುಲ್ ಕರೀಂ, ಗಿಡ್ಡುಸ್ವಾಮಿ ಸೇರಿದಂತೆ ಇತರರಿದ್ದರು.