Headlines

ರಿಪ್ಪನ್‌ಪೇಟೆ : ಮಹಿಳಾ ಪೊಲೀಸರಿಗೆ ಬಾಗಿನ ಅರ್ಪಿಸಿ,ಪುರುಷರಿಗೆ ರಾಖಿ ಕಟ್ಟಿ ಸೋದರತ್ವ ಮೆರೆದ ಸಾಮಾಜಿಕ ಕಾರ್ಯಕರ್ತೆ ಯಶಸ್ವತಿ ಜೈನ್

ರಿಪ್ಪನ್‌ಪೇಟೆ : ಹಬ್ಬ ಹರಿದಿನಗಳಲ್ಲಿ ತವರು ಮನೆಗೆ ಹೋಗಿ ಬರುವಷ್ಟು ಸಮಯವಿರದಂತಹ ಸ್ಥಿತಿಯಲ್ಲಿರುವ ಪೊಲೀಸ್ ಇಲಾಖೆಯ ಮಹಿಳಾ ಸಿಬ್ಬಂದಿಗಳಿಗೆ ಹೊಂಬುಜ ಗ್ರಾಮ ಪಂಚಾಯ್ತಿ ಸದಸ್ಯೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಯಶಸ್ವತಿ ವೃಷಭರಾಜ್ ಜೈನ್ ಕುಟುಂಬ ವರ್ಗದವರು ಬಾಗಿನ ನೀಡಿ ಸತ್ಕರಿಸಿದರು.


ಇಂದು ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಅರಿಶಿಣ ಕುಂಕುಮ ಮತ್ತು ಅರತಿ ಬೆಳಗಿ ಬಾಗಿನ ಅರ್ಪಿಸಿದರು.



ಇದೇ ಸಂಧರ್ಭದಲ್ಲಿ ವೃತ್ತ ನಿರೀಕ್ಷಕ ಗಿರೀಶ್ ಹಾಗೂ ಪಿಎಸ್‌ಐ ಶಿವಾನಂದ ಕೋಳಿ, ಎಎಸ್‌ಐ ಗಣಪತಿ,ಹಾಲಪ್ಪ,ಮಂಜಪ್ಪ ಹಾಗೂ ಇನ್ನಿತರ ಪೊಲೀಸ್ ಸಿಬ್ಬಂದಿ ವರ್ಗದವರಿಗೆ ರಾಕಿ ಕಟ್ಟುವ ಮೂಲಕ ಅಣ್ಣ ತಂಗಿಯರ ಸಂಬಂಧ ಸೋದರತ್ವ ಭಾವನೆ ಮೂಡಿಸುವ ಕಾರ್ಯವನ್ನು ನೆರವೇರಿಸಿದರು.



ಈ ಸಂದರ್ಭದಲ್ಲಿ ಯಶಸ್ವತಿ ವೃಷಭರಾಜ್ ಜೈನ್ ಮತ್ತು ವೃಷಭರಾಜ್ ಜೈನ್,ಸೇರಿದಂತೆ ಪೊಲೀಸ್ ಸಿಬ್ಬಂದಿಯವರು  ಹಾಜರಿದ್ದರು.

Leave a Reply

Your email address will not be published. Required fields are marked *