Headlines

ಹದಗೆಟ್ಟ ರಸ್ತೆ – ರಾಜ್ಯ ಹೆದ್ದಾರಿಯ ಮಧ್ಯೆ ಬಾಳೆಗಿಡ ನೆಟ್ಟು ಪ್ರತಿಭಟನೆ

ಸೂಡೂರು :  ಶಿವಮೊಗ್ಗ-ಹೊಸನಗರ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯು ಸಂಪೂರ್ಣ ಹದಗೆಟ್ಟಿದ್ದು ಹೊಂಡ ಗುಂಡಿಗಳಿಂದ ಕೂಡಿದ್ದು ಪ್ರತಿ ನಿತ್ಯ ಒಂದೆರಡು ಅಪಘಾತಗಳು ನಡೆಯುತಿದ್ದು ಈ ರಸ್ತೆಯನ್ನು ತಕ್ಷಣ ಸರಿಪಡಿಸಿ ಎಂದು ಒತ್ತಾಯಿಸಿ ಕೂರಂಬಳ್ಳಿ ಗ್ರಾಮಸ್ಥರು ರಸ್ತೆ ಮಧ್ಯದಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿದರು.



ಐದನೇ ಮೈಲಿಕಲ್ಲು ಹಾಗೂ ಚಿನ್ನಮನೆ ಗ್ರಾಮದ ನಡುವಿನ ರಸ್ತೆಯಲ್ಲಿ ಹಲವಾರು ಗುಂಡಿಗಳು ಬಿದ್ದಿದ್ದು ಹಲವಾರು ಅಪಘಾತಗಳು ನಡೆದಿದ್ದವು ಈ ಹಿನ್ನಲೆಯಲ್ಲಿ ಕೂರಂಬಳ್ಳಿ ಗ್ರಾಮಸ್ಥರು ಇಂದು ರಸ್ತೆ ಮಧ್ಯೆ ಬಾಳೆ ಗಿಡ ನೆಟ್ಟು ವಿನೂತನವಾಗಿ ಪ್ರತಿಭಟಿಸಿದರು.


 ಹಲವಾರು ಸಮಯದಿಂದ ಯಾವುದೇ ರಸ್ತೆಗಳಿಗೆ ಹೊಸದಾಗಿ ಡಾಂಬರೀಕರಣ ಮಾಡಲು ಸಾಧ್ಯವಾಗಿಲ್ಲ. ಕನಿಷ್ಠ ಗುಂಡಿಗಳನ್ನು ಮುಚ್ಚಿ ಡಾಂಬರು ಹಾಕಲಾಗುತ್ತಿಲ್ಲ.ಗ್ರಾಮದ ಅಭಿವೃದ್ಧಿ ಕಾರ್ಯ ಮಾಡುವಲ್ಲಿ ಶಾಸಕರು ಮತ್ತು ಅಧಿಕಾರಿಗಳು ವಿಫಲರಾಗುತ್ತಿದ್ದಾರೆ’ ಎಂದು ಗ್ರಾಮಸ್ಥರು ಆರೋಪಿಸಿದರು.

 ಮುಖ್ಯರಸ್ತೆ ತುಂಬ ಹೊಂಡಗಳಿಂದ ತುಂಬಿವೆ.  ನಿತ್ಯ ಪ್ರವಾಸಿಗರು, ಸ್ಥಳೀಯರು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಧಾರ್ಮಿಕ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಡಾಂಬರೀಕರಣ ಮಾಡಲು ಸಾಧ್ಯವಾಗದೆ ಇರುವುದು ವಿಷಾದನೀಯ’ ಗ್ರಾಮಸ್ಥ ಶುಭೋದಯ್ ಆಕ್ರೋಶ ವ್ಯಕ್ತಪಡಿಸಿದರು.




ಈ ಪ್ರತಿಭಟನೆಯಲ್ಲಿ ರವೀಂದ್ರ,ಜವುಳಿ ಸತ್ಯನಾರಾಯಣ್,ಕುಮಾರ್ ,ಸಂತೋಷ್,ಜಗದೀಶ್ ,ಸುಜಿತ್, ದಿಲೀಪ್ ,ಪ್ರಜ್ವಲ್ ,ಪವನ್ ,ರಾಘು ,ಗಿರೀಶ್ ಹಾಗೂ ಇನ್ನಿತರರಿದ್ದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *