ತನ್ನ ಸ್ನೇಹಿತರೊಂದಿಗೆ ಶಿವಮೊಗ್ಗದ ಶಕ್ತಿಧಾಮದ ಖಾಸಗಿ ಈಜುಕೊಳಕ್ಕೆ ತೆರಳಿದ್ದ ಜೋಸೆಫ್ ನಗರದ ಯುವಕ ರಾಕೇಶ್ ಎಂಬ 18 ವರ್ಷದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಡಿವಿಎಸ್ ಕಾಮರ್ಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ರಾಕೇಶ್ ಎರಡು ಮೂರು ದಿನಗಳಿಂದ ಸ್ನೇಹಿತರೊಂದಿಗೆ ಈಜುಕೊಳದಲ್ಲಿ ತೆರಳಿ ಈಜು ಹೊಡೆಯಲು ಯೋಜನೆ ಹಾಕಿಕೊಂಡಿದ್ದ. ಇಂದು ಮಧ್ಯಾಹ್ನ ಈಜುಕೊಳಕ್ಕೆ ತೆರಳಿದ್ದ ಯುವಕ ಮನೆಗೆ ಹೊರಡುವ ವೇಳೆ ನೀರಿನಿಂದ ಮೇಲೆ ಬರಲಿಲ್ಲವೆಂಬುದು ಜೊತೆಗೆ ತೆರಳಿದ್ದ ಸ್ನೇಹಿತರ ಆರೋಪವಾಗಿದೆ.
ರಾಕೇಶ್ ನೀರಿನಲ್ಲಿ ಮುಳುಗಿ ಸಾವನ್ನಪ್ಪುವ ಮುಂಚೆ ನೀರಿನಲ್ಲಿ ಸ್ನೇಹಿತರೊಂದಿಗೆ ನಿಂತಿರುವ ಸೆಲ್ಫಿ ತೆಗೆದುಕೊಂಡಿದ್ದಾರೆ. ಸ್ನೇಹಿತರೆಲ್ಲಾ ನೀರಿನಿಂದ ಮೇಲೆ ಎದ್ದು ಮನೆಗೆ ಹೋಗುವಾಗ ರಾಕೇಶ್ ನೀರಿನಿಂದ ಮೇಲೇಳಲಿಲ್ಲವೆಂದು ಸ್ನೇಹಿತರು ದೂರಿದ್ದಾರೆ.
ಶವವನ್ನು ಮೆಗ್ಗಾನ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಶವಗಾರದ ಬಳಿ ಕುಟುಂಬಸ್ಥರ ಆಕ್ರಂಧನ ಮುಗಿಲುಮುಟ್ಟಿದೆ.
ಖಾಸಗಿ ಈಜುಕೊಳದ ಮಾಲೀಕರ ನಿರ್ಲಕ್ಷದಿಂದ ಇಲ್ಲಿ ಯಾವುದೇ ಮುಂಜಾಗ್ರತಾ ಕ್ರಮವಿರಲಿಲ್ಲ ಎನ್ನಲಾಗುತ್ತಿದೆ. ಈಜು ಬರುತ್ತಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂಬುದು ಸಹ ಕುತೂಹಲ ಕೆರಳಿಸಿದೆ.