Headlines

ಬಾವಿಯಲ್ಲಿ ಪೌರಕಾರ್ಮಿಕನ ಮೃತದೇಹ ಪತ್ತೆ|dead body found in


ಬಾವಿಯಲ್ಲಿ ಶವವೊಂದು ಪತ್ತೆಯಾಗಿರುವ ಘಟನೆ ನಡೆದಿದೆ. ಶಿವಮೊಗ್ಗದ KSRTC ಬಸ್ ನಿಲ್ದಾಣದ ಪಕ್ಕವಿರುವ ಬಿಎಂವಿ ಪಾರ್ಕಿಂಗ್ ಮತ್ತು ಎಸ್ ಡಿಪಿ ಪಾರ್ಕಿಂಗ್ ಮಧ್ಯ ಇರುವ ಬಾವಿಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ.

ಬಾವಿಯಲ್ಲಿ ಪತ್ತೆಯಾದ ಮೃತ ದೇಹವನ್ನ ಮಾರ್ನಮಿಬೈಲು ನಿವಾಸಿ ದಿಬ್ಬಯ್ಯ (52) ಎಂದು ಗುರುತಿಸಲಾಗಿದೆ. ಬಾವಿಗೆ ಬಿದ್ದ ದಿಬ್ಬಯ್ಯ ಕಳೆದ ಐದು ದಿನಗಳಿಂದ ಮನೆಗೆ ಹೋಗಿರಲಿಲ್ಲ ಎಂದು ಕುಟುಂಬ ತಿಳಿಸಿದೆ. ನಾಪತ್ತೆಯಾಗಿದ್ದ ಮನೆಯವರೂ ಹುಡುಕಾಡುತ್ತಿದ್ದರು. ಆದರೆ ಪಾರ್ಕಿಂಗ್ ಸ್ಥಳದಲ್ಲಿರುವ ಬಾವಿಯಲ್ಲಿ ಆತನ ಮೃತ ದೇಹ ಪತ್ತೆಯಾಗಿದೆ.

ಪಾರ್ಕಿಂಗ್ ನೋಡಿಕೊಳ್ಳುವ ವ್ಯಕ್ತಿ ಪೊಲೀಸ್ ಮತ್ತು ಅಗ್ನಿಶಾಮಕ ದಳ ಸ್ಣತಳಕ್ಕೆ ವಿಷಯ ತಿಳಿಸಿದ್ದಾರೆ. ಪಾರ್ಕಿಂಗ್ ನವರಿಗೆ ದಿಬ್ಬಯ್ಯ ಪರಿಚಯವಿದ್ದರಿಂದ ಆತನ ಕುಟುಂಬಕ್ಕೆ ತಿಳಿಸಿದ್ದಾರೆ. ದಿಬ್ಬಯ್ಯನವರಿಗೆ ಇಬ್ಬರು ಮಕ್ಕಳಿದ್ದಾರೆ. ಸ್ಥಳಕ್ಕೆ ಬಂದ ಮಕ್ಕಳು ಅಪ್ಪನನ್ನ ನೆನೆದು ಕಣ್ಣೀರಿಟ್ಟಿದ್ದಾರೆ.

ದಿಬ್ಬಯ್ಯ ಪಾಲಿಕೆಯ ಖಾಯಂ ಪೌರಕಾರ್ಮಿಕರಾಗಿದ್ದಾರೆ. ಅಗ್ನಿಶಾಮಕ ದಳ ಬಾವಿಗೆ ಬಿದ್ದ ಮೃತ ದೇಹವನ್ನ ಮೇಲೆತ್ತಿದೆ. ನೀರಿನಲ್ಲಿದ್ದ ಕಾರಣ ಮುಖವೆಲ್ಲಾ ಬಾತುಕೊಂಡು ಕೊಳೆಯುವ ಸ್ಥಿತಿ ತಲುಪಿದೆ. ಕುತ್ತಿಗೆ ಬಳಿ ರಕ್ತ ಕಾಣಿಸಿಕೊಂಡಿದೆ ಚರ್ಮವೆಲ್ಲಾ ಬಿಳಿಚಿಕೊಂಡಿದೆ.

ಆತನ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. 



About The Author

Leave a Reply

Your email address will not be published. Required fields are marked *