Headlines

ಸಾಲದ ಒಡೆಯನಾದ ನನ್ನ ಮನೆಗೆ ಈಡಿ,ಐಟಿ ಬಂದರೆ ಅವರೆ ಕೊಟ್ಟು ಹೋಗಬೇಕು – ಕಿಮ್ಮನೆ ರತ್ನಾಕರ್|kimmane

ಶಿವಮೊಗ್ಗ : ಬುಧವಾರ ತೀರ್ಥಹಳ್ಳಿಯಲ್ಲಿ ನಡೆದ ಇಡಿ ದಾಳಿಯನ್ನೂ ಬಿಜೆಪಿ ರಾಜಕೀಯ ಪ್ರೇರಿತವಾಗಿ ಬಿಂಬಿಸಲಾಗಿದೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಆರೋಪಿಸಿದರು.




ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತೀರ್ಥಹಳ್ಳಿಯಲ್ಲಿ ನಡೆದ ಘಟನೆ ಕೆಲವು ಮಾಧ್ಯಮಗಳಲ್ಲಿ ಸ್ವಯಂ ಘೋಷಿತ ಹೇಳಿಕೆ ಆಗಿದೆ. ತೀರ್ಥಹಳ್ಳಿಗೆ ನಿನ್ನೆ ಇಡಿ ಬಂದಿದ್ದರು. ಕಚೇರಿಗೆ ಬಂದು ಕರೆಮಾಡಿದ್ದರು. 2015 ರಲ್ಲಿ 10 ಲಕ್ಷ ರೂ. ಹಣವನ್ನ ಕಟ್ಟಡದ ಅಡ್ವಾನ್ಸ್ ನೀಡಲಾಗಿದೆ. ಇದನ್ನ ರಾಜಕೀಯವಾಗಿ ಇಡಿ ದಾಳಿ ಎಂದು ಬಣ್ಣಿಸಲಾಗುತ್ತಿದೆ ಎಂದರು.

ಕುಕ್ಕರ್ ಹಿಡಿದಿರುವುದನ್ನು ಕೆಲ ಮಾಧ್ಯಮಗಳಲ್ಲಿ ಬಿಂಬಿಸಲಾಗಿತ್ತು. ಬಿಜೆಪಿ ಸ್ಥಳೀಯವಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ತಿದೆ. ನನ್ಮ ಕಟ್ಟಡದ ಬಾಡಿಗೆ ವಿಚಾರದಲ್ಲಿ ಅಣ್ಣನ ಮಗನ ಹೆಸರಿನಲ್ಲಿ ಅಗ್ರಿಮೆಂಟ್ ಆಗಿದೆ. ಚುನಾವಣೆ ಇರುವುದರಿಂದ ಬಿಜೆಪಿ ಭಯ‌ಹುಟ್ಟಿಸಲು ನೋಡ್ತಾ ಇದೆ. ಆದರೆ ಇದು ಭಯ ಬಿಜೆಪಿಗೆ ಇರುತ್ತದೆ ನನಗೆ ಅಲ್ಲ. ನಂದಿತ ಪ್ರಕರಣದಲ್ಲಿ ಆಗಿರುವ ನಾಟಕವನ್ನ ಬಿಜೆಪಿ ಈಗ ಕುಕ್ಕರ್ ಹಿಡಿದು ಬಿಂಬಿಸಲು ಹೊರಟಿದೆ ಎಂದರು.




ಕೆಲವರು ಕಿಮ್ಮನೆ ಮನೆ ದಾಳಿ ಆಗಿದೆ ಅಂತೆ ಎಂದು ಸುದ್ದಿ ಮಾಡಿದ್ದಾರೆ. ಸಮಾಜ ಸರಿ ಪಡಿಸುವ ವರ್ಗ ಕೆಲ ಚಾನೆಲ್ ನಲ್ಲಿ ಶಾರೀಕ್ ಬ್ಲಾಸ್ಟ್ ಮಾಡಿರುವ ದೃಶ್ಯ ನನ್ನ ಭಾವಚಿತ್ರವನ್ನ ದೊಡ್ಡದಾಗಿ ಬಿಂಬಿಸಲಾಗಿದೆ. ಇದು ಯೋಚನೆ ಮಾಡುವ ಪರಿಸ್ಥಿತಿ. ನಾನು ಓಡಿಹೋಗಿಲ್ಲ. ತೀರ್ಥಹಳ್ಳಿ ಜನಕ್ಕೆ ನಾನು ಏನು ಎಂಬುದು ಗೊತ್ತಿದೆ ಎಂದರು.

10 ವರ್ಷ ಶಾಸಕನಾಗಿದ್ದೇನೆ. ಇದರಿಂದ ಹೆದರುವುದಿಲ್ಲ. ರಾಜಕೀಯಕ್ಕೆ ಬಂದಿದ್ದುಸಮಾಜ ಸೇವೆಗಾಗಿ. ಇದನ್ನ ಸವಾಲಾಗಿ ಸ್ವೀಕರಿಸುವುದಾದರೆ ಸವಾಲಾಗಿ ಸ್ವೀಕರಿಸುವೆ. ಆರಗ ಜ್ಞಾನೇಂದ್ರರವರಿಗೆ ಈ ಬಗ್ಗೆ ಸವಾಲು ಎಸೆಯುವೆ. ಅಮಿತ್ ಶಾ ಮತ್ತು ಜ್ಞಾನೇಂದ್ರ ಇಬ್ವರೂ ನನ್ನ ವಿರುದ್ಧ ಈ ವಿಚಾರದಲ್ಲಿ ಸಿಬಿಐ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.

ತೀರ್ಥಹಳ್ಳಿಯಲ್ಲಿ ಆರಗ ಜ್ಞಾನೇಂದ್ರರವರ ಪುತ್ರನಿಗೆ  ಸೇರಿದ ಲೇಔಟ್ ಇದೆ. ಅದಕ್ಕೆ ಕಾಂಕ್ರಿಟ್ ರಸ್ತೆ ಆಗಿದೆ. ದಿಡೀರ್ ಅಂತ ಹೇಗೆ ರಸ್ತೆ ನಿರ್ಮಿಸಲಾಗುತ್ತದೆ. ಸ್ಯಾಂಟ್ರೋ ರವಿ ವಿಚಾರದಲ್ಲಿ ಫೆಬ್ರವರಿ ಒಳಗೆ ಆರಗ ರಾಜೀನಾಮೆ ನೀಡದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಯಾವ ಅಧಿಕಾರಿಯನ್ನ ಎಲ್ಲಿ ಹಾಕಬೇಕು ಎಂದು ಸ್ಯಾಂಟ್ರೋ ರವಿ ಬಳಿ ಪಟ್ಟಿ ಇತ್ತು. ಅದರಂತೆ ವರ್ಗಾವಣೆ ಆಗಿದೆ. ಈ ವಿಚಾರದಲ್ಲಿ ಆರಗ ಅರೆಸ್ಟ್ ಮಾಡಬೇಕೆಂದರು.




ಪಿಎಸ್ಐ ಮತ್ತು ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಗೃಹಸಚಿವರೇ ಆರೋಪಿ ನಂಬರ್1 ಎಂದು ವಿವರಿಸಿದರು. ಅಡಿಕೆಯ ಟಾಸ್ಕ್ ಫೋರ್ಸ್ ಅಧ್ಯಕ್ಷರಾಗಿ ಪರ್ಯಾಯ ಬೆಳೆ ಬೆಳೆಯಲು ಅಧಿವೇಶನದಲ್ಲಿ ತಿಳಿಸಿದ್ದಾರೆ. ಈದೇಶದಲ್ಲಿ ಮೊದಲನೇ ಉಗ್ರ ಯಾರು ಎಂದರೆ ನಾಥುರಾಮ್ ಗೋಡ್ಸೆ. ಆತ ಕೊಂದಿರುವುದು ಸತ್ಯವನ್ನ‌, ಅಹಸೆಯನ್ನ, ಇವೆಲ್ಲದಕ್ಕೂ ಹೋರಾಟ ಮಾಡಲಾಗುವುದು.

Leave a Reply

Your email address will not be published. Required fields are marked *