ಶಿವಮೊಗ್ಗ : ಕರಾವಳಿಯ ದೈವರಾಧನೆ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ಜಾಪಾಳ್ ಮಾತ್ರೆಗೆ ಹೋಲಿಸಿದ್ದು ಇದರ ವಿರುದ್ಧ ಕಿಮ್ಮನೆ ಗರಂ ಆಗಿ ಅವರನ್ನು ದೈವವೇ ನೋಡಿಕೊಳ್ಳಲಿದೆ ಎಂದು ಪ್ರತಿಭಟನೆಯಲ್ಲೇ ಶಾಪ ಹಾಕಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಹೊಡೆದಿರುವುದನ್ನ ಖಂಡಿಸಿ ಗುರುವಾರ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು ಅಲ್ಲಿ ಮಾತನಾಡಿದ ಅವರು ಮೇಲಿನ ಕುರುವಳ್ಳಿಯ ಗ್ರಾಪಂ ನಲ್ಲಿ 15 ಜನ ಗ್ರಾಪಂ ಸದಸ್ಯರಿದ್ದು ಅದರಲ್ಲಿ 9 ಜನ ಗ್ರಾಪಂ ಸದಸ್ಯರು ಕಾಂಗ್ರೆಸ್ ನವರಾಗಿದ್ದು ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಪಿಡಿಒ ಹೊಡೆದಿದ್ದಾರೆ.
ಕೋಣಂದೂರು ಕಾಂಗ್ರೆಸ್ ಸದಸ್ಯರಿಗೆ ಬಿಜೆಪಿಯ ಪೂರ್ಣೇಶ್ ಅವರು ಹೊಡೆದಿದ್ದಾರೆ. ಇದು 8 ತಿಂಗಳಾಯಿತು. ವಿಶಾಲಾಕ್ಷಿ ಅವರಿಗೆ ಹೊಡೆಯಲಾಗಿದೆ. ಸುರೇಶ್ ಎಂಬುವರಿಗೆ ರಸ್ತೆ ಅಪಘಾತ ವಾದ ಜಾಗದಲ್ಲಿ ಪೂರ್ಣೇಶ್ ಹೊಡೆದಿದ್ದಾರೆ. ಈ ವಿಷಯ ಗೃಹಸಚಿವರಿಗೆ ತಿಳಿದಿಲ್ಲವಾ. ಗೃಹಸಚಿವರು ತೀರ್ಥಹಳ್ಳಿಯಲ್ಲಿದ್ದಾರ ಅಥವ ಇಲ್ಲವಾ ಎಂದು ಕಿಮ್ಮನೆ ಕೆಂಡ ಮಂಡಲರಾಗಿದ್ದಾರೆ. ಗೃಹಸಚಿವರು ಮಹಿಳೆಯರ ಮೇಲೆ ಕೈ ಮಾಡಿದ್ದರೂ ಸುಮ್ಮನಿದ್ದರಾ? ಇದು ಇತ್ಯಾರ್ಥ್ಯವಾಗಬೇಕು ಎಂದು ಕಿಮ್ಮನೆ ಬಿಗಿಪಟ್ಟು ಹಿಡಿದಿದ್ದಾರೆ.
ಪಿಡಿಓ ಸಸ್ಪೆಂಡ್ ಆಗುವವರೆಗೂ ನಾನು ಒಂದಿಂಚು ಕದಲಲ್ಲ. ಮೇಲಿನ ಕುರುವಳ್ಳಿಯ ಪಿಡಿಒ ಮತ್ತು ಕೋಣಂದೂರು ಪಿಡಿಒ ವರ್ಗಾವಣೆ ಆದರೂ ತೀರ್ಥಹಳ್ಳಿ ಯಲ್ಲಿ ಉಳಿದುಕೊಂಡಿದ್ದಾರೆ. ಅದಕ್ಕೆ ಗೃಹ ಸಚಿವರ ಬೆನ್ನಲುಬು ಇದೆ ಎಂದರು.