w
Headlines
Home » ರಿಪ್ಪನ್‌ಪೇಟೆಯ ಗಾನ ಕೋಗಿಲೆ ಪ್ರಣತಿಗೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಅತ್ಯುನ್ನತ ಶ್ರೇಣಿ|pranati

ರಿಪ್ಪನ್‌ಪೇಟೆಯ ಗಾನ ಕೋಗಿಲೆ ಪ್ರಣತಿಗೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಅತ್ಯುನ್ನತ ಶ್ರೇಣಿ|pranati

ರಿಪ್ಪನ್‌ಪೇಟೆಯ ಗಾನ ಕೋಗಿಲೆ ಪ್ರಣತಿಗೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಅತ್ಯುನ್ನತ ಶ್ರೇಣಿ

ರಿಪ್ಪನ್‌ಪೇಟೆ : ಬೆಂಗಳೂರಿನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ ಹಿಂದೂಸ್ತಾನಿ ಸಂಗೀತ ಜೂನಿಯರ್‌ ವಿಭಾಗದ ಪರೀಕ್ಷೆಯಲ್ಲಿ ಪಟ್ಟಣದ ಗಾನ ಕೋಗಿಲೆ ಎಂದೆ ಖ್ಯಾತಿಯಾಗಿರುವ ಯುವ ಪ್ರತಿಭೆ ಪ್ರಣತಿ ಅಣ್ಣಪ್ಪ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.




ತಾಲೂಕ್ ,ಜಿಲ್ಲಾ ,ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಹಾಗೂ ಶಾಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿರುವ ಪ್ರಣತಿ ಅಣ್ಣಪ್ಪ ರಿಪ್ಪನ್‌ಪೇಟೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮಹಾಲಕ್ಷ್ಮಿ ಹಾಗೂ ಪ್ರವೀಣ್(ಅಣ್ಣಪ್ಪ) ದಂಪತಿಗಳ ಪುತ್ರಿಯಾಗಿದ್ದಾರೆ.




ರಾಜ್ಯ ಮಟ್ಟದ ಸಂಗೀತ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆಯುವ ಮೂಲಕ ಸಂಗೀತ ಕ್ಷೇತ್ರದಲ್ಲಿ ಮತ್ತೊಂದು ಮೈಲುಗಲ್ಲು ತಲುಪಿದ್ದಾರೆ ನಮ್ಮೂರಿನ ಯುವ ಪ್ರತಿಭೆ..

ನಮ್ಮೂರಿನ ಹೆಮ್ಮೆಯ ಗಾನ ಕೋಗಿಲೆ ಪ್ರಣತಿ ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟೂ ಹೆಸರು ಗಳಿಸಿ ನಮ್ಮೂರಿನ ಕೀರ್ತಿ ಪತಾಕೆಯನ್ನು ಎಲ್ಲೆಡೆ ಹಾರಿಸಲಿ ಎಂಬುವುದೇ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯ ಆಶಯ…..

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.