ರಿಪ್ಪನ್‌ಪೇಟೆ : ಮಲೆನಾಡಿನ ಹೆಬ್ಬಾಗಿಲು ಎಂದೇ ಖ್ಯಾತಿಗಳಿಸಿರುವ ಶಿವಮೊಗ್ಗ ಜಿಲ್ಲೆಯ ಮಧ್ಯ ಮಲೆನಾಡಿನ ಹೊಸನಗರ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ 22 ಪಶು ಅಸ್ಪತ್ರೆಗೆ 2 ಜನ ವೈದ್ಯಾಧಿಕಾರಿಗಳು ಬಿಟ್ಟರೆ ಇನ್ನೂ ಯಾರು ಇರುವುದಿಲ್ಲ ರಾಜಕಾರಣಿಗಳ ಇಚ್ಚಾ ಶಕ್ತಿಯ ಕೊರತೆಯಿಂದಾಗಿ ತಾಲೂಕಿನಾದ್ಯಂತ ಭಣಗುಟ್ಟುತ್ತಿವೆ ಪಶ ಆಸ್ಪತ್ರೆಗಳು.
ರಾಜ್ಯ ಬಿಜೆಪಿ ಸರ್ಕಾರ ಹೈನುಗಾರಿಕೆಗೆ ಹೆಚ್ಚಿನ ಅಧ್ಯತೆ ನೀಡಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದು ಹೊಸನಗರ ತಾಲ್ಲೂಕ್ ಮಾತ್ರ ಹೈನು ಉದ್ಯಮ ಸೇರಿದಂತೆ ಗೋವುಗಳ ಲಾಲನೆ ಪಾಲನೆ ರಾಜಕೀಯ ಮುಖಂಡರ ಇಚ್ಚಾಶಕ್ತಿಯ ಕೊರತೆಯಿಂದಾಗಿ ಹಿಂದುಳಿಯುವಂತಾಗಿದೆ.
ರಿಪ್ಪನ್‌ಪೇಟೆಯ ಸರ್ಕಾರಿ ಪಶು ಆಸ್ಪತ್ರೆಯಲ್ಲಿ ನಿತ್ಯ ಬಾಗಿಲು ತೆಗೆಯಲು, ಕಸ ಗುಡಿಸಲು ಸಹ ಡಿ.ಗ್ರೂಪ್ ನಿಂದ ಹಿಡಿದು ಎ ಗ್ರೂಪ್ ವರೆಗೂ ಯಾರು ಇಲ್ಲ………….!
ರಿಪ್ಪನ್‌ಪೇಟೆ ಆಸ್ಪತ್ರೆಯಲ್ಲಿ ವೈದ್ಯರು ಬಿಡಿ ಕಸ ಗುಡಿಸುವ ಡಿ ದರ್ಜೆಯ ನೌಕರನೂ ಇಲ್ಲಾ.. ಈ ಬಗ್ಗೆ ವಿಚಾರಿಸಿದರೆ ಅಧಿಕಾರಿಗಳು ಹಾರಿಕೆ ಉತ್ತರ ನೀಡಿ ಸಾಗಹಾಕುತ್ತಾರೆ.
ಹೊಸನಗರ ತಾಲ್ಲೂಕಿನ ಪಶು ಇಲಾಖೆಯ ಸಹಾಯಕ ನಿರ್ದೇಶಕರು ಇಲ್ಲ… ಇನ್ನೂ 22 ಪಶು ಅಸ್ಪತ್ರೆಯಲ್ಲಿ ಇಬ್ಬರು ಡಾಕ್ಟರ್ ಮತ್ತು 10 ಜನ ಇನ್ಸ್ಪೆಕ್ಟರ್ ಹಾಗೂ ಡಿ.ಗ್ರೂಪ್ ಸಿಬ್ಬಂದಿ ಬಿಟ್ಟರೆ ಉಳಿದಂತೆ ತಾಲ್ಲೂಕಿನ ವ್ಯಾಪ್ತಿಯಲ್ಲಿನ ಆಸ್ಪತ್ರೆಯಲ್ಲಿ ಯಾರೂ ಇಲ್ಲಾ..
ಹೊಸನಗರ ತಾಲೂಕಿನಲ್ಲಿ 80 ಜನ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿವರ್ಗ ಇರಬೇಕಾಗಿದೆ ಆದರೆ ಇರುವುದು ಮೂರು ಮತ್ತೊಂದು ಸಿಬ್ಬಂದಿಗಳು… ಪಶು ಇಲಾಖೆಯ ಈ ಅವ್ಯವಸ್ಥೆ ರಾಜಕೀಯ ಮುಖಂಡರಿಗೆ ಮತ್ತು ಸಂಬಂಧಿಸಿದ ಆಧಿಕಾರಿಗಳ ಗಮನಕ್ಕೆ ಬರಲ್ಲಿಲ್ಲವೇ ಎಂಬ ಸಂಶಯ ಸಾರ್ವಜನಿಕರನ್ನು ಕಾಡುವಂತಾಗಿದೆ.
ತಾಲ್ಲೂಕ್ ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಲು ಬಾಯಿ ರೋಗದಂತಹ ಮಾರಕ ರೋಗಗಳು ಕಾಣಿಸಿಕೊಂಡು ಸಾಕಷ್ಟು ಜಾನುವಾರುಗಳು ಸಾವನ್ನಪ್ಪಿರುವ ಘಟನೆಗಳು ನಡೆದಿದ್ದರೂ ಕೂಡಾ ಸರ್ಕಾರ ತಾಲ್ಲೂಕ್ ಪಶು ಅಸ್ಪತ್ರೆಗೆ ತಜ್ಞ ವೈದ್ಯಾಧಿಕಾರಿಗಳನ್ನು ನೇಮಿಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ.
ರಿಪ್ಪನ್‌ಪೇಟೆ ಪಶು ಅಸ್ಪತ್ರೆಯ ವ್ಯಾಪ್ತಿಯಲ್ಲಿ ಮಲೆನಾಡ ಗಿಡ್ಡ ತಳಿ ಜಸ್ಸಿ ಇನ್ನಿತರ ಗಿರ್ ತಳಿಗಳು ಸೇರಿದಂತೆ ಸುಮಾರು 12 ಸಾವಿರ ಜಾನುವಾರುಗಳು ಇದ್ದು ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ರಿಪ್ಪನ್‌ಪೇಟೆ-ಕೆರೆಹಳ್ಳಿಮುಗುಟಿಕೊಪ್ಪ-ಕುಕ್ಕಳಲೇ-ಬರುವೆ- ಕಾರಗೋಡುಮಳವಳ್ಳಿ-ಕಣಬಂದೂರು-ಕೊಳವಳ್ಳಿ-ಕಲ್ಲುಕೊಪ್ಪ-ಜಂಬಳ್ಳಿ-ಮೂಗುಡ್ತಿ- ಹೆದ್ದಾರಿಪುರ-ಕಲ್ಲೂರು- ವಡಾಹೊಸಳ್ಳಿ-ಕಗ್ಗಚಿ-ತಳಲೆ-ಹಾರಂಬಳ್ಳಿ ಹೀಗೆ ಸಾಕಷ್ಟು ಗ್ರಾಮಗಳಲ್ಲಿ ರೈತರು ಜಾನುವಾರುಗಳನ್ನು ಸಾಕಲಾಗಿದ್ದು ಜಾನುವಾರುಗಳಲ್ಲಿ ಕಾಣಿಸಿಕೊಳ್ಳುವ ಮಾರಕ ರೋಗದ ಚಿಕಿತ್ಸೆಗೆ ಇಲ್ಲಿನ ಪಶು ಆಸ್ಪತ್ರೆಯಲ್ಲಿ ಸಮರ್ಪಕವಾದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿವರ್ಗ ಇಲ್ಲದೆ ಲಕ್ಷಾಂತರ ಮೌಲ್ಯದ ಜಾನುವಾರುಗಳಲ್ಲಿ ದಿಡೀರ್ ಕಾಣಿಸಿಕೊಳ್ಳುವ ರೋಗಕ್ಕೆ ಚಿಕಿತ್ಸೆ ಲಭಿಸದೇ ಹಲವು ಜಾನುವಾರುಗಳು ಸಾವನ್ನಪ್ಪಿರುವುದರಿಂದಾಗಿ ರೈತರು ದಿಕ್ಕು ತೋಚದವರಂತಾಗಿ ಹೈನುಗಾರಿಕೆಯಿಂದ ದೂರ ಉಳಿಯುವಂತಾಗಿದೆ ಎಂದು ರೈತರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತಿದ್ದಾರೆ.
ಇನ್ನಾದರೂ ಸರ್ಕಾರ ಮತ್ತು ಜಿಲ್ಲಾಡಳಿತ ಇತ್ತ ಗಮನಹರಿಸಿ ಮಲೆನಾಡಿನ ವ್ಯಾಪ್ತಿಯಲ್ಲಿ ಹೈನುಗಾರಿಕೆಗೆ ಅಗುತ್ತಿರುವ ಸಮಸ್ಯೆಗೆ ಪರಿಹಾರ ಕಲ್ಪಿಸುವರೇ ಕಾದು ನೋಡಬೇಕಾಗಿದೆ.
ಇಂತಹ ನಿರ್ಲಕ್ಶ್ಯದಿಂದ ಹೈನುಗಾರಿಕೆಯನ್ನು ಅಧೋಗತಿಗೆ ತಳ್ಳಿ ಏನೂ ಸಂಬಂಧವಿಲ್ಲದಂತೆ ನಟಿಸುತ್ತಿರುವ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಗೋವಿನ ಶಾಪ ತಟ್ಟದೇ ಇರದು……