ರಿಪ್ಪನ್ಪೇಟೆ : ಯಡಿಯೂರಪ್ಪನವರ ರಾಜ್ಯದ ಮುಖ್ಯಮಮತ್ರಿಗಳಾಗಿದ್ದ ಆವಧಿಯಲ್ಲಿ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ರೆಸಾರ್ಟ್ ರಾಜಕೀಯ ಮಾಡುವ ಮೂಲಕ ಕಣ್ಣಿರು ಹಾಕಿಸಿದರ ಪರಿಣಾಮ ಈಗ ಮತದಾರರ ಮುಂದೆ ಕಣ್ಣಿರು ಹಾಕಿ ಅನುಕಂಪ ಗಿಟ್ಟಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ, ಈಗ ಹೋದಲ್ಲಿ ಬಂದಲ್ಲಿ ಕಣ್ಣೀರು ಹಾಕುತ್ತಿರುವುದು ಯಡಿಯೂರಪ್ಪ ನವರಿಗೆ ಕಣ್ಣೀರು ಹಾಕಿಸಿದ ಪಾಪ,ಯಡಿಯೂರಪ್ಪ ನವರಿಗೆ ಕಣ್ಣಿರು ಹಾಕಿಸಿದ ಮೊದಲ ವ್ಯಕ್ತಿ ಈ ಬೇಳೂರು ಗೋಪಾಲಕೃಷ್ಣ ಎಂದು ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಹೇಳಿದರು.
ಅವರು ಇಂದು ರಿಪ್ಪನ್ಪೇಟೆಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಎರಡು ಬಾರಿ ಶಾಸಕರಾದ ಬೇಳೂರು ಗೋಪಾಲಕೃಷ್ಣ ವಿಧಾನಸೌಧದಲ್ಲಿ ಒಮ್ಮೆಯೂ ಮಾತನಾಡಲಿಲ್ಲ , ಒಂದು ವೇಳೆ ಅಭಿವೃದ್ಧಿ ವಿಚಾರದ ಬಗ್ಗೆ ಮಾತನಾಡಿದ್ದರೆ ಚರ್ಚೆಗೆ ಬರಲಿ ಮಾಧ್ಯಮಗಳ ಮೂಲಕ ಅವರನ್ನು ಪ್ರಶ್ನೆ ಮಾಡುತಿದ್ದೇನೆ ಎಂದರು.
ನಾವು ಅಭಿವೃದ್ಧಿ ರಾಜಕಾರಣ ಮಾಡುತ್ತೇವೆ ಎಂದು ಹೇಳಿ ಅಂದು ನಿಮ್ಮ ಬಳಿ ಮತ ಪಡೆದಿದ್ದೆವು ಹಾಗೆ ನಡೆದುಕೊಂಡಿದ್ದೇವೆ, ಅದೇ ತರಹ ಈ ಬಾರಿ ಅಭಿವೃದ್ಧಿ ಪರ್ವವನ್ನು ಮುಂದುವರೆಸಲು ನಿಮ್ಮ ಮತ ಕೇಳುತಿದ್ದೇನೆ , ನಮ್ಮ ಪಕ್ಷ ರಾಮಮಂದಿರ ಕಟ್ಟುತ್ತೇವೆ ,ಗಂಗಾ ಶುದ್ದೀಕರಣ ,ತುಂಗಾ ಶುದ್ದೀಕರಣ ಹಾಗೂ ಗಣಪತಿ ಕೆರೆ ಶುದ್ದೀಕರಣ ಮಾಡುತ್ತೇವೆ ಎಂದಿದ್ದೇವು ಹಾಗೇಯೇ ಮಾತಿನಂತೆ ನಡೆದುಕೊಂಡಿದ್ದೇವೆ ಎಂದರು.
ದುಬಾರಿ ಕಾರು,ವಾಚು ,ಕನ್ನಡಕ ಹಾಗೂ ದುಬಾರಿ ವಿಗ್ ಧರಿಸಿ ಐಶರಾಮಿ ಜೀವನ ನಡೆಸುವ ಬೇಳೂರು ಗೋಪಾಲಕೃಷ್ಣ ಚುನಾವಣೆ ಸಂಧರ್ಭದಲ್ಲಿ ದೇಣಿಗೆ ಎಂಬ ನಾಟಕವಾಡುತಿದ್ದಾರೆ.ಕಾಗೋಡು ತಿಮ್ಮಪ್ಪ ನವರಿಗೆ ಬಾಯಿಗೆ ಬಂದ ಹಾಗೇ ಬೈದು ಅವರ ಬೆಂಬಲಿಗರು ಮೇಲೆ ಹಲ್ಲೆ ನಡೆಸಿದ ಬೇಳೂರು ಇಂದು ಅವರನ್ನು ಭೀಷ್ಮ ಎಂದು ಕರೆಯುತಿದ್ದಾರೆ ಎಂದರು.
ಕೋವಿಡ್ ಸಂಧರ್ಭದಲ್ಲಿ ಮಾಯವಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಈಗ ಪ್ರತ್ಯಕ್ಷರಾಗಿದ್ದಾರೆ ನಾನು ಎರಡು ಬಾರಿ ಕೋವಿಡ್ ರೋಗಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾದಗ ಇದೇ ಬೇಳೂರು ಹಾಲಪ್ಪ ಸತ್ತ ಎಂದುಕೊಂಡು ಕನ್ನಡಕ ಜುಬ್ಬ ಸಮೇತ ಪ್ರತ್ಯಕ್ಷರಾಗಿದ್ದರು ಎಂದರು.
ನಾನು ಕೋವಿಡ್ ಸಂಧರ್ಭದಲ್ಲಿ ಕ್ಷೇತ್ರವನ್ನು ಬಿಡದೇ 20 ಸಾವಿರ ಕಿಟ್ ಹಂಚಿಕೆ ಮಾಡಿ ಜನರಿಂದಿಗೆ ಇದ್ದೆನು ಎಂದರು.
ಈ ಸಂಧರ್ಭದಲ್ಲಿ ಉತ್ತರಖಂಡ ರಾಜ್ಯದ ಎಂ.ಎಲ್.ಎ ರಾಕೇಶ್ನೈನಿವಾಲ್,ಜಿಲ್ಲಾ ಸಂಚಾಲಕ ಜ್ಯೋತಿ ಪ್ರಕಾಶ್,ಜಿಲ್ಲಾ ಬಿಜೆಪಿ ಪ್ರಮುಖ ಹರಿಕೃಷ್ಣ,ತಾಲ್ಲೂಕ್ ಬಿಜೆಪಿ ಅಧ್ಯಕ್ಷ ಗಣಪತಿ ಬಿಳಗೋಡು,ಎನ್.ಸತೀಶ್, ಎಂ.ಎನ್.ಸುಧಾಕರ,ಕೆ.ಬಿ.ಹೂವಪ್ಪ, ಮಹಾಶಕ್ಷಿ ಕೇಂದ್ರದ ಆಧ್ಯಕ್ಷ ಎಂ.ಬಿ.ಮಂಜುನಾಥ, ಆರ್.ಟಿ.ಗೋಪಾಲ,ಎ.ಟಿ.ನಾಗರತ್ನ, ಎಂ.ಸುರೇಶ್ಸಿಂಗ್,ಆಲವಳ್ಳಿ ವೀರೇಶ್,ನಾಗರತ್ನ ದೇವರಾಜ್,ನಾಗಾರ್ಜುನಸ್ವಾಮಿ, ಸುದೀಂದ್ರಪೂಜಾರಿ, ಇನ್ನಿತರ ಪಕ್ಷದ ಮುಖಂಡರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷದ ತತ್ವ ಸಿದ್ದಾಂತದೊAದಿಗೆ ಶಾಸಕ ಹರತಾಳು ಹಾಲಪ್ಪನವರ ಅಭಿವೃದ್ದಿ ಕಾರ್ಯವನ್ನು ಮೆಚ್ಚಿ ಹಲವು ಪಕ್ಷದ ಯುವಕರು ಸೇರ್ಪಡೆಗೊಂಡರು.
ವೀಡಿಯೋವನ್ನು ಯೂಟ್ಯೂಬ್ನಲ್ಲಿ ವೀಕ್ಷಿಸಲು ಈ ಕೆಳಗಿನ ಲಿಂಕ್ ಬಳಸಿ….