Headlines

ಆಗಸ್ಟ್ 11ರಂದು ಕೆಂಚನಾಲ ಮಾರಿಕಾಂಬಾ ದೇವಿಯ ಜಾತ್ರೆ: ಭಕ್ತರಿಗೆ ಇಲ್ಲಿದೆ ಮಹತ್ವದ ಮಾಹಿತಿ

Screenshot 2026 08 08 20 36 28 955 com.picsart.studio edit

ಆಗಸ್ಟ್ 11ರಂದು ಕೆಂಚನಾಲ ಮಾರಿಕಾಂಬಾ ದೇವಿಯ ಜಾತ್ರೆ: ಭಕ್ತರಿಗೆ ಇಲ್ಲಿದೆ ಮಹತ್ವದ ಮಾಹಿತಿ

Ripponpete Kenchanala Sri Marikamba Devi rainy season fair will be held on August 11. Special decoration, puja and Maha Mangalarati from 6 AM.

ರಿಪ್ಪನ್‌ಪೇಟೆ, ಆ.8: ರಿಪ್ಪನ್‌ಪೇಟೆ ಸಮೀಪದ ಇತಿಹಾಸ ಪ್ರಸಿದ್ಧ ಕೆಂಚನಾಲ ಶ್ರೀ ಮಾರಿಕಾಂಬಾ ದೇವಿಯ ಮಳೆಗಾಲದ ಜಾತ್ರಾ ಮಹೋತ್ಸವವು ಆಗಸ್ಟ್ 11ರಂದು ಮಂಗಳವಾರ ನಡೆಯಲಿದೆ ಎಂದು ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಸಮಿತಿ ಹಾಗೂ ದೇವಸ್ಥಾನ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿವೆ.

ವರ್ಷದಲ್ಲಿ ಎರಡು ಬಾರಿ ನಡೆಯುವ ಮಾರಿಕಾಂಬಾ ದೇವಿಯ ಜಾತ್ರೆಯಲ್ಲಿ, ಮಳೆಗಾಲದ ಜಾತ್ರೆ ಮಂಗಳವಾರ ಹಾಗೂ ಬೇಸಿಗೆಯ ಜಾತ್ರೆ ಬುಧವಾರ ನಡೆಯುವುದು ವಿಶೇಷವಾಗಿದೆ.

ಆಗಸ್ಟ್ 11ರಂದು ಬೆಳಗ್ಗೆ 6 ಗಂಟೆಯಿಂದ ದೇವಿಗೆ ವಿಶೇಷ ಅಲಂಕಾರ, ಪೂಜಾ ಕಾರ್ಯಕ್ರಮ ಹಾಗೂ ಮಹಾಮಂಗಳಾರತಿ ನೆರವೇರಲಿದೆ. ದಿನವಿಡೀ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀ ಮಾರಿಕಾಂಬಾ ದೇವಿಯ ದರ್ಶನ ಪಡೆದು, ದೇವಿಯ ಆಶೀರ್ವಾದಕ್ಕೆ ಪಾತ್ರರಾಗುವಂತೆ ಜಾತ್ರಾ ಮಹೋತ್ಸವ ಸಮಿತಿ ಹಾಗೂ ದೇವಸ್ಥಾನ ಸೇವಾ ಸಮಿತಿಯವರು ಮನವಿ ಮಾಡಿದ್ದಾರೆ.